More

    ಡ್ರಗ್ಸ್​ ಮಾಫಿಯಾದಲ್ಲಿ ಸ್ಯಾಂಡಲ್​ವುಡ್​ನ 15 ನಟ-ನಟಿಯರು, ಸಿಸಿಬಿಗೆ ಮಾಹಿತಿಕೊಟ್ಟ ಇಂದ್ರಜಿತ್​ ಲಂಕೇಶ್​

    ಬೆಂಗಳೂರು: ಸ್ಯಾಂಡಲ್​ವುಡ್​ನ ಹಲವು ನಟ-ನಟಿಯರು ಮತ್ತು ನಿರ್ದೇಶಕರು ಡ್ರಗ್ಸ್​ ಜಾಲದಲ್ಲಿ ಭಾಗಿಯಾಗಿದ್ದಾರೆ. ಈ ಮಾಫಿಯಾದ ಹಿಂದೆ ರಾಜಕಾರಣಿಗಳು, ಮಾಡೆಲ್ ಏಜೆನ್ಸಿಗಳು ಎಲ್ಲರೂ ಭಾಗಿಯಾಗಿದ್ದಾರೆ. ಆ ಬಗ್ಗೆ ನನ್ನ ಬಳಿ ಮಾಹಿತಿ ಇದೆ ಎಂದಿದ್ದ ಇಂದ್ರಜಿತ್​ ಲಂಕೇಶ್​ ಅವರನ್ನು ಸಿಸಿಬಿ ವಿಚಾರಣೆ ನಡೆಸಿದ್ದು, ಸೂಕ್ತ ಮಾಹಿತಿ ಕಲೆಹಾಕಿದೆ ಎಂದು ತಿಳಿದು ಬಂದಿದೆ.

    ಇಂದು (ಸೋಮವಾರ) ಸುಮಾರು ಐದೂವರೆ ತಾಸು ಸಿಸಿಬಿ ಕಚೇರಿಯಲ್ಲೇ ವಿಚಾರಣೆಗೆ ಒಳಪಟ್ಟಿದ್ದ ಇಂದ್ರಜಿತ್​ ಲಂಕೇಶ್​ ಅವರು ಹಲವು ಮಹತ್ತರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಡ್ರಗ್ಸ್​ ಮಾಫಿಯಾದಲ್ಲಿ ಭಾಗಿಯಾದ 10ರಿಂದ 15 ನಟ-ನಟಿಯರ ಹೆಸರನ್ನು ಸಾಕ್ಷಿ ಸಮೇತ ಸಿಸಿಬಿ ತಿಳಿಸಿದ್ದಾರಂತೆ. ಈ ಬಗ್ಗೆ ಸ್ವತಃ ಇಂದ್ರಜಿತ್​ ಲಂಕೇಶ್​ ಅವರೇ ವಿಚಾರಣೆ ಮುಗಿಸಿ ಹೊರಬಂದ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅದರ ಕಂಪ್ಲೀಟ್​ ಮಾಹಿತಿ ಇಲ್ಲಿದೆ ನೋಡಿ.

    ಇದನ್ನೂ ಓದಿರಿ ಶವ ಪರೀಕ್ಷೆ ಯಾಕೆ ಮಾಡ್ಲಿಲ್ಲ?: ಇಂದ್ರಜಿತ್​ ಆರೋಪಕ್ಕೆ ತಿರುಗೇಟುಕೊಟ್ಟ ಚಿರು ಮಾವ

    ‘ನನ್ನ ಹೇಳಿಕೆಗೆ ನಾನು ಈಗಲೂ ಬದ್ಧವಾಗಿದ್ದೇನೆ. ಡ್ರಗ್ಸ್ ಮಾಫಿಯಾ ದೊಡ್ಡದು. ನಾನು ಐದೂವರೆ ತಾಸು ಸಿಸಿಬಿ ಅಧಿಕಾರಿಗಳ ಜತೆ ಮಾತನಾಡಿದ್ದು, ಈ ದಂಧೆಯಲ್ಲಿ ಭಾಗಿಯಾದವರ ಬಗ್ಗೆ ನನಗೆ ಗೊತ್ತಿರುವ ಎಲ್ಲ ಮಾಹಿತಿಯನ್ನೂ ಹೇಳಿದ್ದೇನೆ. ನನಗೆ ಗೊತ್ತಿರುವಂತೆ ಡ್ರಗ್ಸ್​ ದಂಧೆಯಲ್ಲಿ ಇರುವ ಕನ್ನಡ ಸಿನಿಮಾದ 10-15 ಜನರ ಹೆಸರನ್ನು ಹೇಳಿದ್ದೇನೆ, ಜಾಗದ ಬಗ್ಗೆಯೂ ತಿಳಿಸಿದ್ದೇನೆ. ನಾನು ಕೊಟ್ಟ ಮಾಹಿತಿ ಕೇಳಿ ಸಿಸಿಬಿಗೆ ಖುಷಿಯ ಜತೆಗೆ ಶಾಕ್​ ಆಗಿದೆ. ಅವರು ಖಂಡಿತಾ ಈ ಮಾಫಿಯಾಕ್ಕೆ ಕಡಿವಾಣ ಹಾಕಲಿದ್ದಾರೆ ಎಂದು ಇಂದ್ರಜಿತ್​ ಹೇಳಿದರು.

    ಡ್ರಗ್ಸ್​ ಮಾಫಿಯಾ ಬಗ್ಗೆ ನಾವು ಸಾಕಷ್ಟು ಮಾಹಿತಿ ಕಲೆಕ್ಟ್ ಮಾಡಿದ್ದೇವೆ. ಅದಕ್ಕೆ ಸಾಕ್ಷಿಯೂ ಇದೆ. ಡ್ರಗ್ಸ್ ದಂಧೆಯಲ್ಲಿ ಯಾರೆಲ್ಲ ಇದ್ದಾರೆ ಎಂಬುದರ ಬಗ್ಗೆ ಹೇಳಿದ್ದೇನೆ. ಯಾರ ತೇಜೋವಧೆ ಮಾಡುವುದು ನನ್ನ ಉದ್ದೇಶವಲ್ಲ. ಸಮಾಜದಲ್ಲಿ ಡ್ರಗ್ಸ್​ ಬಗ್ಗೆ ಅರಿವು ಮತ್ತು ಹೆದರಿಕೆ ಇರಬೇಕು. ಈ ನಿಟ್ಟಿನಲ್ಲಿಯೇ ಯುವಜನತೆಗೆ ಮತ್ತು ಮಕ್ಕಳಿಗೆ ಒಂದು ಮೆಸೇಜ್​ ನೀಡಲು ಏನು ಮಾಡಬೇಕೋ ಅದನ್ನು ಮಾಡಿದ್ದೇನೆ. ನನ್ನ ಈ ಕಾರ್ಯಕ್ಕೆ ಸಪೋರ್ಟ್​ ಮಾಡುತ್ತ ಹಲವಾರು ನಿರ್ಮಾಪಕರು ಮತ್ತು ರಾಜಕಾರಣಿಗಳು ಫೋನ್​ನಲ್ಲಿ ನನ್ನೊಂದಿಗೆ ಮಾತನಾಡುತ್ತಿದ್ದಾರೆ. ನನಗೆ ಸಹಕಾರ ನೀಡಿದ ಸಾಮಾನ್ಯ ಜನರಿಗೂ ಈ ವೇಳೆ ಧನ್ಯವಾದ ಹೇಳುತ್ತೇನೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂಬುದು ನನ್ನ ಉದ್ದೇಶ ಎಂದರು.
    ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಇಂದ್ರಜಿತ್​, ‘ಚಿರು ಬಗ್ಗೆಯಾಗಲೇ ಅರ್ಜುನ್​ ಸರ್ಜಾ, ಸುಂದರ್​ ರಾಜ್​ ಬಗ್ಗೆ ಗೌರವ ಇದೆ. ಚಿರುಗೆ ಭವಿಷ್ಯ ಇತ್ತು. ಅವರು ಇದ್ದಿದ್ದರೆ ಮೇಘನಾ ರಾಜ್​ ಇವತ್ತು ಖುಷಿಯಾಗಿ ಇರ್ತಿದ್ರು. ಸತ್ತವರ ಬಗ್ಗೆ ಈಗ ಮಾತಾಡೋದು ಬೇಡ ಎಂದ ಅವರು ಚಿರು ಸತ್ತಾಗ ಪೋಸ್ಟ್ ಮಾರ್ಟನ್​ ಆಗಬೇಕಿತ್ತು. ಈ ಮಾತನ್ನು ವಾಪಸ್​ ಪಡೆದಿದ್ದೇನೆ’ ಎಂದರು.

    ಅಲ್ಲದೆ ಹಿರಿಯ ಪತ್ರಕರ್ತ ರವಿ ಬೆಳಗೆರೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಸುಫಾರಿ ಕೊಟ್ಟವನತ್ರ ಈ ಬಗ್ಗೆ ಕೇಳಬೇಡಿ. ಅಂತಹವರ ಬಳಿ ಸಮಾಜಕ್ಕೆ ಏನು ಸಂದೇಶ ಕೊಡ್ತೀರಿ? ಸಮಾಜಕ್ಕೆ ಸಂದೇಶ ಕೊಡುವವರನ್ನು ಕರೆಸಿ. ಆ ಪತ್ರಕರ್ತನಿಗೆ ಸ್ವಂತಿಕೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

    ಡ್ರಗ್ಸ್​ ಜಾಲದ ಕಿಂಗ್​ಪಿನ್​ ಅನಿಕಾ ಬಾಯ್ಬಿಟ್ಲು ಸ್ಫೋಟಕ ರಹಸ್ಯ, ಕನ್ನಡ ನಟ-ನಟಿಯರೇ ಗಿರಾಕಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts