More

    ಮಾತಿನಲ್ಲಿಯೇ ಪಾಲಿಕೆ ಅಧಿಕಾರಿಗಳ ಬೆವರಿಳಿಸಿದ ಬೀದಿಬದಿ ವ್ಯಾಪಾರಿ; ಅಸಡ್ಡೆ ಬೇಡ ಈಕೆ ಪಿಎಚ್​ಡಿ ಪದವೀಧರೆ..!

    ಬೀದಿಬದಿ ವ್ಯಾಪಾರಿಗಳೆಂದರೆ ಅದೊಂದು ಅಸಡ್ಡೆ ಸಾಮಾನ್ಯವಾಗಿ ಕಂಡುಬರುತ್ತದೆ. ಇನ್ನೂ ಪಾಲಿಕೆ ಅಧಿಕಾರಿಗಳೆಂದರೆ ಕೇಳೋದೇ ಬೇಡ. ಅಂತೆಯೇ, ಮಧ್ಯಪ್ರದೇಶದ ಇಂದೋರ್​ನಲ್ಲಿ ರಸ್ತೆಬದಿ ವ್ಯಾಪಾರಿಗಳ ವಿರುದ್ಧ ಅಲ್ಲಿನ ನಗರಪಾಲಿಕೆ ಅಧಿಕಾರಿಗಳು ತೆರವು ಕಾಯಾರ್ಚರಣೆ ನಡೆಸಿದರು. ಇದನ್ನು ಪ್ರತಿಭಟಸಿ ಮಹಿಳೆಯೊಬ್ಬರು ಇಂಗ್ಲಿಷ್​ನಲ್ಲಿ ಮಾತನಾಡಿದ್ದು, ಭಾರಿ ವೈರಲ್​ ಆಗಿದೆ.

    ದೇಶಾದ್ಯಂತ ಲಾಕ್​ಡೌನ್​ನಿಂದಾಗಿ ಬೀದಿಬದಿ ವ್ಯಾಪಾರಿಗಳ ಬದುಕು ಮೂರಾಬಟ್ಟೆಯಾಗಿದೆ. ಸದ್ಯ ನಿರ್ಬಂಧಗಳನ್ನು ಸಡಿಲಿಸಿದ್ದರಿಂದ ವ್ಯಾಪಾರ ನಡೆಸುತ್ತಿದ್ದಾರೆ. ಇದನ್ನು ಸಹಿಸದೇ ಕಾರ್ಯಾಚರಣೆ ನಡೆಸುವುದು ಎಷ್ಟು ಸರಿ ಎನ್ನುವುದು ಬೀದಿಬದಿ ಹಣ್ಣು ತರಕಾರಿ ಮಾರುವ ರೈಸಾ ಅನ್ಸಾರಿ ವಾದ.

    ಇದನ್ನೂ ಓದಿ; ಪ್ರಯಾಣಿಕರಿಲ್ಲದಿದ್ದರೂ ನಡೆಸಲೇ ಬೇಕು ಹಾರಾಟ; ಇಲ್ಲದಿದ್ದರೆ ವಿಮಾನ ಯಾನ ಸಂಸ್ಥೆಗಳಿಗೇ ಸಂಕಷ್ಟ..!

    ಪಾಲಿಕೆ ಅಧಿಕಾರಿಗಳು ತಮ್ಮನ್ನು ತಾವು ಮಹಾರಾಜರು ಎಂದುಕೊಳ್ಳುತ್ತಾರೆ. ಬೀದಿಬದಿ ವ್ಯಾಪಾರಿಗಳನ್ನು ಬಿಕ್ಷುಕರಿಗಿಂತಲೂ ಕಡೆಯಾಗಿ ಕಾಣುತ್ತಾರೆ. ಅತ್ಯಂತ ಅಮಾನವೀಯವಾಗಿ ನಡೆದುಕೊಳ್ಳುತ್ತಾರೆ ಎಂದು ರೈಸಾ ಆಕ್ರೋಶ ವ್ಯಪಡಿಸಿದ್ದಾರೆ.

    ಇಷ್ಟಕ್ಕೂ ರೈಸಾ ಹಿನ್ನೆಲೆ ಕೇಳಿದರೆ ಅಚ್ಚರಿಯಾಗದೇ ಇರದು. ಈಕೆ ಇಂದೋರ್​ನ ರಾಣಿ ಅಹಲ್ಯಾದೇವಿ ವಿಶ್ವವಿದ್ಯಾಲಯದಿಂದ ಮೆಟೀರಿಯಲ್​ ಸೈನ್ಸ್​ನಲ್ಲಿ ಪಿಎಚ್​ಡಿ ಪಡೆದಿದ್ದಾರೆ. ಸ್ಥಳೀಯ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಬೋಧಕಿಯಾಗಿದ್ದ ಇವರು ಆ ಉದ್ಯೋಗ ತೊರೆದು ಹಣ್ಣು ಹಾಗೂ ತರಕಾರಿ ವ್ಯಾಪಾರದಲ್ಲಿ ತೊಡಗಿದ್ದಾರೆ.

    ಇದನ್ನೂ ಓದಿ; ಚಿನ್ನ ಕಳ್ಳಸಾಗಣೆಯಿಂದ ಗಳಿಸಿದ್ದನ್ನೆಲ್ಲ ಬಚ್ಚಿಟ್ಟಿದ್ದೆಲ್ಲಿ ಸ್ವಪ್ನಾ ಸುರೇಶ್​? 

    ನನಗೂ ಸೈಂಟಿಸ್ಟ್​ ಆಗಬೇಕೆಂಬ ಆಸೆಯಿತ್ತು. ಆದರೆ, ಕೌಟುಂಬಿಕ ಸಮಸ್ಯೆಯಿಂದಾಗಿ ಕುಟುಂಬದ ಉದ್ಯೋಗವಾದ ಹಣ್ಣು ಹಾಗೂ ತರಕಾರಿ ವ್ಯಾಪಾರಕ್ಕೆ ತೊಡಗಿದ್ದೇನೆ ಎಂದು ರೈಸಾ ಹೇಳುತ್ತಾರೆ. ರೈಸಾಳ ಪ್ರತಿಭಟನೆಗೆ ಭಾರಿ ಬೆಂಬಲ ವ್ಯಕ್ತವಾಗಿದೆ.

    ಇಲ್ಲಿದೆ ಪ್ರತಿಭಟನೆಯ ವಿಡಿಯೋ….

    ಪಾಲಿಕೆ ಅಧಿಕಾರಿಗಳ ಬೆವರಿಳಿಸಿದ ಬೀದಿಬದಿ ವ್ಯಾಪಾರಿ; ಈಕೆ ಪಿಎಚ್​ಡಿ ಪದವೀಧರೆ…!

    ರಸ್ತೆಬದಿ ವ್ಯಾಪಾರ ಮಾಡುತ್ತಿದ್ದವರನ್ನು ಇಂದೋರ್​ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು. ಕಾರ್ಯಾಚರಣೆ ವಿರುದ್ಧ ಸಿಡಿದೆದ್ದು ಇಂಗ್ಲಿಷ್​ನಲ್ಲಿಯೇ ಮಾತನಾಡಿ ಅವರ ಬೆವರಿಳಿಸಿದ್ದಾಳೆ. ಈಕೆ ಪ್ರತಿಭಟನೆಗೆ ಭಾರಿ ಬೆಂಬಲ ವ್ಯಕ್ತವಾಗಿದೆ.

    Posted by Vijayavani on Friday, July 24, 2020

    ತುರ್ತು ಬಳಕೆಗೆ ಭಾರತದಲ್ಲಿ ರೆಡಿಯಾಗಿದೆ ಕರೊನಾ ಲಸಿಕೆ; ಏಷ್ಟಿರಲಿದೆ ಬೆಲೆ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts