More

    ಮೊಸಳೆಯ ನಾಲಿಗೆ, ಮಗುವಿನ ಬೆನ್ನುಮೂಳೆಯಿಂದ ಮಾಡಿದ ಹ್ಯಾಂಡ್​ಬ್ಯಾಗ್​ ಬೆಲೆ ಕೇಳಿದ್ರೆ ಶಾಕ್​ ಆಗ್ತಿರಾ!​

    ಜಕಾರ್ತ: ಮಗುವಿನ ಬೆನ್ನುಮೂಳೆ ಮತ್ತು ಮೊಸಳೆಯ ನಾಲಿಗೆಯಿಂದ ತಯಾರಿಸಿದ ಕೈಚೀಲವನ್ನು (ಹ್ಯಾಂಡ್​ ಬ್ಯಾಗ್) ಇಂಡೋನೇಷ್ಯಾದ ಫ್ಯಾಶನ್​ ಡಿಸೈನರ್​ 5 ಸಾವಿರ ಡಾಲರ್(3,81,912 ರೂ.)ಗೆ ಮಾರಾಟ ಮಾಡುತ್ತಿದ್ದಾರೆ.​ ​

    ಅರ್ನಾಲ್ಡ್​ ಪುಲ್ಟ್ರಾ ಎಂಬ ಬಾಲಕ ಇಂಡೋನೇಷ್ಯಾದಲ್ಲಿ ಇನ್​ಸ್ಟಾಗ್ರಾಂನ ಶ್ರೀಮಂತ ಬಾಲಕ ಎಂದೇ ಪ್ರಖ್ಯಾತಿಯನ್ನು ಹೊಂದಿದ್ದಾನೆ. ಹ್ಯಾಂಡ್​ ಬ್ಯಾಗ್​ ಅನ್ನು ಬಾಲಕನೇ ವಿನ್ಯಾಶಗೊಳಿಸಿದ್ದು, ಈ ವಿಲಕ್ಷಣ ಉತ್ಪನ್ನವು ಕೆನಡಾದ ವೈದ್ಯಕೀಯ ಹೆಚ್ಚುವರಿಯ ನೈತಿಕ ಸಂಪನ್ಮೂಲವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾನೆ.

    ಇದೇ ರೀತಿಯ ಬ್ಯಾಗ್​ ಅನ್ನು ಈ ಹಿಂದೆ ಲಾಸ್​ ಏಂಜಲೀಸ್​ನಲ್ಲಿ ತಯಾರಿಸಲಾಗಿತ್ತು. ಇದೊಂದು ಆದರ್ಶ ತುಣುಕು ಎಂದ್ಹೇಳಿ 2016ರಲ್ಲಿ ಮಾರಾಟ ಮಾಡಲಾಗಿತ್ತು. ಬ್ಯಾಗ್​ ಅನ್ನು ಸಂಪೂರ್ಣ ಮೊಸಳೆಯ ನಾಲಿಗೆಯಿಂದಲೇ ಮಾಡಲಾಗಿತ್ತು.

    ಸದ್ಯದ ಬ್ಯಾಗ್​ ಕೂಡ ಮೊಸಳೆಯ ನಾಲಿಗೆಯಿಂದಲೇ ಮಾಡಲಾಗಿದ್ದು, ಇದಕ್ಕೆ ಮಗುವಿನ ಬೆನ್ನು ಮೂಳೆಯನ್ನು ಹ್ಯಾಂಡಲ್​ ಆಗಿ ಬಳಸಲಾಗಿದೆ. ಈ ಬಗ್ಗೆ ಅರ್ನಾಲ್ಡ್​ ಪುಲ್ಟ್ರಾ ಎಂಬ ಇನ್​​ಸ್ಟಾಗ್ರಾಂ ಖಾತೆಯಲ್ಲಿಯೂ ಮಾಹಿತಿ ನೀಡಲಾಗಿದೆ. ಆದರೆ, ಇನ್ಸ್​ಗ್ರಾಂ ಖಾತೆ ವೈಯಕ್ತಿಕವಾಗಿ ನಿರ್ವಹಿಸುತ್ತಿಲ್ಲ ಎಂದು ವೆಬ್​ಸೈಟ್​ವೊಂದಕ್ಕೆ ಪುಲ್ಟ್ರಾ ತಿಳಿಸಿದ್ದು, ನಿಜವಾಗಿಯೂ ಮಗುವಿನ ಬೆನ್ನು ಮೂಳೆಯನ್ನೇ ಬಳಸಿದ್ದೀರಾ ಎಂಬ ಪ್ರಶ್ನೆಗೆ ಖಚಿತಪಡಿಸಲು ನಿರಾಕರಿಸಿದ್ದಾರೆ.

    ಆದರೂ, ಬ್ಯಾಗ್​ನಲ್ಲಿರುವ ಹ್ಯಾಂಡಲ್​ ಮಗುವಿನ ಬೆನ್ನಮೂಳೆಯದ್ದಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಆದರೆ, ಮೂಳೆಗಳು ಕೆನಡಾದ ವೈದ್ಯಕೀಯ ಮೂಲಗಳು. ಮಾನವ ಮಾದರಿಗಳನ್ನು ಮಾರಾಟ ಮಾಡುವ ಪರವಾನಗಿ ಹೊಂದಿದ ಕಂಪನಿಯೊಂದು ವೈದ್ಯಕೀಯ ವಿಜ್ಞಾನದ ಪ್ರಯೋಗಕ್ಕಾಗಿ ಹೆಚ್ಚುವರಿ ಮಾದರಿಗಳನ್ನು ಕಾಣಿಕೆಯನ್ನಾಗಿ ನೀಡುತ್ತಾರೆ ಎಂದು ಪುಲ್ಟ್ರಾ ತಿಳಿಸಿದ್ದಾರೆ. (ಏಜೆನ್ಸೀಸ್​)

    VIDEO & PHOTOS: ಚಿಟ್ಟೆಯಲ್ಲ ಇದು, ಹೆಣ್ಣಿನ ಬೆತ್ತಲೆ ದೇಹದ ಮೇಲೆ ಸೃಷ್ಟಿಯಾದ ಭ್ರಮೆ; ದಿಟ್ಟಿಸಿ ನೋಡಿ ನಗ್ನ ಯುವತಿಯನ್ನು ಕಾಣುತ್ತೀರಿ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts