More

    ಉದ್ಯೋಗಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಇಂಡಿಗೋ: ಕರೊನಾ ಕಾರಣ ವೇತನದಲ್ಲಿ ಶೇಕಡ 25 ಕಡಿತ

    ನವದೆಹಲಿ: ಕರೊನಾ ಎಫೆಕ್ಟ್ ಉದ್ಯಮದ ಮೇಲೂ ಆಗಿದ್ದು, ಈಗ ಉದ್ಯೋಗಿಗಳ ಮೇಲೂ ಆಗತೊಡಗಿದೆ. ಉದ್ಯೋಗಿಗಳಿಗೆ ಮೊದಲ ಶಾಕಿಂಗ್ ನ್ಯೂಸ್ ಇಂಡಿಗೋ ಕೊಟ್ಟಿದ್ದು, ವೇತನದಲ್ಲಿ ಶೇಕಡ 25 ಕಡಿತಗೊಳಿಸುವ ನಿರ್ಧಾರವನ್ನು ಕಂಪನಿ ಸಿಇಒ ರೊನೊಜಾಯ್​ ದತ್ತಾ ಗುರುವಾರ ಪ್ರಕಟಿಸಿದ್ದಾರೆ.

    ಕರೊನಾ ವೈರಸ್ ಸೋಂಕಿನ ಕಾರಣ ಕಂಪನಿಯ ಆದಾಯಕ್ಕೆ ಹೊಡೆತ ಉಂಟಾಗಿದ್ದು, ತನ್ನ ವೇತನದಲ್ಲೂ ಶೇಕಡ 25 ಕಡಿತಗೊಳಿಸುತ್ತಿರುವುದಾಗಿ ದತ್ತಾ ಘೋಷಿಸಿದ್ದಾರೆ. ಹಿರಿಯ ವೈಸ್ ಪ್ರೆಸಿಡೆಂಟ್ ಮೇಲ್ಪಟ್ಟ ಉದ್ಯೋಗಿಗಳ ವೇತನದಲ್ಲಿ ಶೇಕಡ 20, ವೈಸ್ ಪ್ರೆಸಿಡೆಂಟ್​, ಕಾಕ್​ಪಿಟ್ ಸಿಬ್ಬಂದಿಗಳ ವೇತನದಲ್ಲಿ ಶೇಕಡ 15 ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಈ ಕುರಿತಾಗಿ ಇಂಡಿಗೋದ ಫ್ಲೈಟ್ ಆಪರೇಷನ್ ಮುಖ್ಯಸ್ಥ ಆಶಿಂ ಮಿತ್ರಾ ಅವರು ಪೈಲಟ್​ಗಳಿಗೆ ಇ-ಮೇಲ್ ರವಾನಿಸಿದ್ದು, ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಇಂತಹ ಕಠಿಣ ನಿರ್ಧಾರ ಕೈಗೊಳ್ಳಬೇಕಾಗಿ ಬಂದಿದೆ. ಮುಂದಿನ ದಿನಗಳಲ್ಲಿ ಸುಧಾರಿಸಿದ ಕೂಡಲೇ ಎಲ್ಲವೂ ಮೊದಲಿನಂತೆಯೇ ಆಗಿರಲಿದೆ ಎಂದು ಧೈರ್ಯ ತುಂಬುವ ಕೆಲಸವನ್ನೂ ಅವರು ಮಾಡಿದ್ದಾರೆ.

    ಈ ನಡುವೆ, ಏರ್​ ಇಂಡಿಯಾ ಕೂಡ ತನ್ನ ಉದ್ಯೋಗಿಗಳ ವೇತನದಲ್ಲಿ ಶೇಕಡ 5 ಕಡಿತಗೊಳಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಆರ್ಥಿಕ ಹಿಂಜರಿತದ ಕಾರಣ ನೀಡಿ ಅನೇಕ ಕಂಪನಿಗಳು ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಿದ್ದವು. ಈಗ ಕರೋನಾ ವೈರಸ್ ಸೋಂಕಿನ ಪರಿಣಾಮ ಆಗುತ್ತಿರುವ ನಷ್ಟ ಭರ್ತಿಗೆ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಪರಿಣತರು ಹೇಳಿದ್ದಾರೆ. (ಏಜೆನ್ಸೀಸ್)

    ಕರೊನಾ ವೈರಸ್ ನ್ಯೂಸ್​ ನೋಡ್ತಾ ಇದ್ದ ಚೀನೀಯನಿಗೆ 30 ವರ್ಷ ಬಳಿಕ ನೆನಪು ಮರುಕಳಿಸಿದ್ದು ನೋಡಿ ಎಲ್ಲರಿಗೂ ಶಾಕ್​! : ಸಿನಿಮಾದಂತಿದೆ ಆ ಬದುಕು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts