ಶಿವಮೊಗ್ಗ: ಬಹುನಿರೀಕ್ಷಿತ ಶಿವಮೊಗ್ಗ-ಬೆಂಗಳೂರು ನಡುವೆ ಲೋಹದ ಹಕ್ಕಿ ಹಾರಾಟಕ್ಕೆ ಕೊನೆಗೂ ಮಹೂರ್ತ ಫಿಕ್ಸ್ ಆಗಿದ್ದು ಅಽಕೃತವಾಗಿ ಉಭಯ ನಗರಗಳ ನಡುವೆ ವಿಮಾನದ ಟಿಕೆಟ್ ಬುಕಿಂಗ್ ಕೂಡ ಆರಂಭಗೊAಡಿದೆ. ಇಂಡಿಗೋ ಸಂಸ್ಥೆ ತನ್ನ ಅಽಕೃತ ವೆಬ್‌ಸೈಟ್‌ನಲ್ಲಿ ಸೀಟ್ ಕಾಯ್ದಿರಿಸುವ ಅವಕಾಶ ಕಲ್ಪಿಸಿದ್ದು ಆಗಸ್ಟ್ 31ರಿಂದ ವಿಮಾನ ಹಾರಾಟ ಆರಂಭವಾಗಲಿದೆ.
ಇAಡಿಗೋ ವೆಬ್‌ಸೈಟ್‌ನಲ್ಲಿ ಬುಧವಾರ ಸಂಜೆಯಿAದಲೇ ಬುಕ್ಕಿಂಗ್ ಆರಂಭಿಸಿದೆ. ಆ.31ರಂದು ಬೆಳಗ್ಗೆ 9.50ಕ್ಕೆ ಇಂಡಿಗೋ ವಿಮಾನವು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟಿçÃಯ ವಿಮಾನ ನಿಲ್ದಾಣದಿಂದ ಹೊರಟು 11.05ಕ್ಕೆ ಶಿವಮೊಗ್ಗ ತಲುಪಲಿದೆ. 1.15 ಗಂಟೆ ನಾನ್ ಸ್ಟಾಪ್ -ೆ್ಲÊಟ್ ಇರಲಿದೆ ಎಂದು ಪ್ರಕಟಿಸಲಾಗಿದೆ. ಅಂದು ಪ್ರತಿ ಟಿಕೆಟ್ ದರ 6,227 ರೂ. ಎಂದು ಘೋಷಿಸಿದೆ.
ಪ್ರಯಾಣಿಕರು ಕೊಂಡೊಯ್ಯುವ ಲಗೇಜ್ ತೂಕಕ್ಕೆ ವಿಮಾನದಲ್ಲಿ ಮಿತಿ ಇರಲಿದೆ. ಶಿವಮೊಗ್ಗ-ಬೆಂಗಳೂರು ವಿಮಾನದಲ್ಲಿ 15 ಕೆ.ಜಿ ತೂಕದ ಲಗೇಜ್ ಕೊಂಡೊಯ್ಯಬಹುದು. ಪ್ರತಿ ಪ್ರಯಾಣಿಕ ಒಂದು ಹ್ಯಾಂಡ್ ಬ್ಯಾಗ್ ತೆಗೆದುಕೊಂಡು ಹೋಗಬಹುದು. ಇದರ ತೂಕ 7 ಕೆ.ಜಿ.ವರೆಗೂ ಇರಬಹುದು. ಸುತ್ತಳೆ 115 ಸೆಂ.ಮೀ. ಮೀರುವಂತಿಲ್ಲ ಎಂದು ಷರತ್ತು ವಿಽಸಲಾಗಿದೆ.
ಇಂಡಿಗೋ ಸಂಸ್ಥೆಯ ಅಽಕೃತ ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕಿಂಗ್ ಮಾಡಬಹುದು. ಶಿವಮೊಗ್ಗ-ಬೆಂಗಳೂರು ಮಧೆÉ್ಯ ವಿಮಾನ ಹಾರಾಟ ಯಾವಾಗ ಎಂಬ ಕುತೂಹಲವಿತ್ತು. ಇಂಡಿಗೋ ಸಂಸ್ಥೆ ಟಿಕೆಟ್ ಬುಕಿಂಗ್ ಆರಂಭಿಸಿದೆ. ಇದರಿಂದ ಶಿವಮೊಗ್ಗ ವಿಮಾನ ನಿಲ್ದಾಣದ ಕುರಿತು ನಿರೀಕ್ಷೆ ಹೆಚ್ಚಾಗಿದೆ.