More

    ಒಲಿಂಪಿಕ್ಸ್​: ಮೆಡಲ್ ರೌಂಡ್​​ಗೆ ಭಾರತದ ಸೌರಭ್ ಚೌಧರಿ

    ಟೋಕಿಯೋ : ಟೋಕಿಯೋ ಒಲಿಂಪಿಕ್ಸ್​ನ ಆರಂಭಿಕ ಆಟಗಳಲ್ಲಿ ಪುರುಷರ 10 ಮೀ ಏರ್​ ಪಿಸ್ತೋಲ್​ ಸ್ಪರ್ಧೆಯಲ್ಲಿ ಭಾರತದ ಸೌರಭ್ ಚೌಧರಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಖ್ವಾಲಿಫಿಕೇಶನ್ ರೌಂಡ್​ನಲ್ಲಿ ಮೊದಲಿಗರಾಗಿ ಆಟ ಮುಗಿಸಿದ ಚೌಧರಿ, ಪದಕಗಳಿಗಾಗಿ ಸೆಣಸುವ ಫೈನಲ್ಸ್ ಸ್ಪರ್ಧೆಗೆ ಬಡ್ತಿ ಪಡೆದಿದ್ದಾರೆ.

    ಭಾರತದ ಆರ್ಚರ್​ಗಳಾದ ದೀಪಿಕಾ ಕುಮಾರಿ ಮತ್ತು ಪ್ರವೀಣ್ ಜಾಧವ್ ಅವರ ಜೋಡಿ, ಚೀನಾದ ತಂಡವನ್ನು 5-3 ಅಂಕಗಳಿಂದ ಸೋಲಿಸಿ, ಮಿಕ್ಸಡ್ ಈವೆಂಟ್​ನಲ್ಲಿ ಕ್ವಾರ್ಟರ್​ ಫೈನಲ್ಸ್​ ತಲುಪಿದೆ. ಕ್ವಾರ್ಟರ್ಸ್​ನಲ್ಲಿ ದಕ್ಷಿಣ ಕೊರಿಯಾದ ಜೋಡಿಯ ವಿರುದ್ಧ ಸೆಣೆಸಲಿದ್ದಾರೆ.

    ಇದನ್ನೂ ಓದಿ: ಟೋಕಿಯೋ ಒಲಂಪಿಕ್ಸ್: ಕುದುರೆ ಸವಾರಿಯ ವಿಶಿಷ್ಟ ಸ್ಪರ್ಧೆಗೆ ಬೆಂಗಳೂರಿಗ

    ಟೇಬಲ್ ಟೆನ್ನಿಸ್​ನ ಮಿಕ್ಸಡ್​​ ಡಬಲ್ಸ್​ ಈವೆಂಟ್​ನಲ್ಲಿ ಭಾರತೀಯ ಆಟಗಾರರಾದ ಶರತ್ ಕಮಲ್ ಮತ್ತು ಮನಿಕಾ ಬತ್ರ ಚೀನಾದ ಟೈಪೈ ಜೋಡಿ ಯುನ್​ ಜು ಲಿನ್ ಮತ್ತು ಚಿಂಗ್ ಐ ಚೆಂಗ್ ವಿರುದ್ಧ ಸೋಲನುಭವಿಸಿದರು.

    ಮೆನ್ಸ್​ ಹಾಕಿಯಲ್ಲಿ ಪೂಲ್ ಎ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡನ್ನು ಸೋಲಿಸಿ ಮುಂದೆ ಸಾಗಿದೆ. ರೂಪಿಂದರ್​ ಪಾಲ್ ಸಿಂಗ್​ ಅವರು ಒಂದು ಗೋಲ್​ ಪಡೆದರೆ, ಹರ್​ಮನ್​ ಪ್ರೀತ್ ಸಿಂಗ್ ಎರಡು ಗೋಲ್ ಗಳಿಸಿದ್ದು, ತಂಡವು 3-2 ಅಂಕಗಳಿಂದ ಗೆಲುವು ಸಾಧಿಸಿತು. (ಏಜೆನ್ಸೀಸ್)

    ಮಳೆ : ಇಂದು ರಾಜ್ಯದ 7 ಜಿಲ್ಲೆಗಳಿಗೆ ರೆಡ್ ಅಲರ್ಟ್

    VIDEO | ವೇದಿಕೆಯಲ್ಲಿ ‘ಬ್ಯಾಟಿಂಗ್’ ಸಿದ್ಧತೆ ತೋರಿದ ಸಿಧು!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts