More

    ಐಸಿಸಿ ಅಂಪೈರ್​ಗಳ ಎಲೈಟ್​ ಪ್ಯಾನೆಲ್​ನಲ್ಲಿ ಸತತ 5ನೇ ವರ್ಷವೂ ನಿತಿನ್​ ಮೆನನ್​ಗೆ ಸ್ಥಾನ

    ದುಬೈ: ಭಾರತದ ನಿತಿನ್​ ಮೆನನ್​ ಐಸಿಸಿಯ ಎಲೈಟ್​ ಪ್ಯಾನೆಲ್​ ಅಂಪೈರ್​ಗಳ ಪಟ್ಟಿಯಲ್ಲಿ ಸತತ 5ನೇ ವರ್ಷವೂ ಸ್ಥಾನ ಪಡೆದಿದ್ದಾರೆ. ಬಾಂಗ್ಲಾದೇಶದ ಅಂಪೈರ್​ ಶುರ್ದೌಲಾ ಇಬ್ನೆ ಶಾಹಿದ್​ ಮೊದಲ ಬಾರಿಗೆ ಎಲೈಟ್​ ಪ್ಯಾನೆಲ್​ನಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಇಂದೋರ್​ ಮೂಲದ ನಿತಿನ್​ ಮೆನನ್​ 2020ರಲ್ಲಿ ಮೊದಲ ಬಾರಿಗೆ ಎಲೈಟ್​ ಪ್ಯಾನೆಲ್​ನಲ್ಲಿ ಸ್ಥಾನ ಪಡೆದಿದ್ದರು. 12 ಅಂಪೈರ್​ಗಳ ಈ ಪ್ಯಾನೆಲ್​ನಲ್ಲಿ ಅವರು ಏಕೈಕ ಭಾರತೀಯರಾಗಿದ್ದಾರೆ.

    ಎಸ್​. ವೆಂಕಟರಾವನ್​ ಮತ್ತು ಎಸ್​. ರವಿ ಬಳಿಕ ಎಲೈಟ್​ ಪ್ಯಾನೆಲ್​ನಲ್ಲಿ ಸ್ಥಾನ ಪಡೆದಿರುವ 3ನೇ ಭಾರತೀಯರೆಂಬ ಹೆಗ್ಗಳಿಕೆ 40 ವರ್ಷದ ನಿತಿನ್​ ಮೆನನ್​ ಅವರದು. ನಿತಿನ್​ ಇದುವರೆಗೆ 23 ಟೆಸ್ಟ್​, 58 ಏಕದಿನ ಮತ್ತು 41 ಟಿ20 ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ (125) ಕಾರ್ಯನಿರ್ವಹಿಸಿದ ಭಾರತೀಯ ಅಂಪೈರ್​ ಎಂಬ ಹೆಗ್ಗಳಿಕೆ ಸದ್ಯ ಎಸ್​. ವೆಂಕಟರಾವನ್​ ಹೆಸರಿನಲ್ಲಿದ್ದು, ಮುಂಬರುವ ಟಿ20 ವಿಶ್ವಕಪ್​ನಲ್ಲಿ ಈ ದಾಖಲೆ ಮುರಿಯುವ ಅವಕಾಶ ನಿತಿನ್​ ಮೆನನ್​ಗೆ (122) ಲಭಿಸಲಿದೆ. ಕಳೆದ ವರ್ಷ ಅವರು ಪ್ರತಿಷ್ಠಿತ ಆಶಸ್​ ಸರಣಿಯಲ್ಲೂ ಕಾರ್ಯನಿರ್ವಹಿಸಿದ್ದರು.

    2006ರಿಂದ ಅಂತಾರಾಷ್ಟ್ರೀಯ ಅಂಪೈರ್​ಗಳ ಪ್ಯಾನೆಲ್​ನಲ್ಲಿದ್ದ ಶುರ್ದೌಲಾ ಮೊದಲ ಬಾರಿಗೆ ಎಲೈಟ್​ ಪ್ಯಾನೆಲ್​ನಲ್ಲಿ ಸ್ಥಾನ ಪಡೆದಿದ್ದಾರೆ. ಐಸಿಸಿ ಮ್ಯಾಚ್​ ರೆಫ್ರಿಗಳ ಎಲೈಟ್​ ಪ್ಯಾನೆಲ್​ ಸದಸ್ಯರ ಸಂಖ್ಯೆಯನ್ನು 7ರಿಂದ 6ಕ್ಕೆ ಇಳಿಸಲಾಗಿದ್ದು, ಇಂಗ್ಲೆಂಡ್​ನ ಕ್ರಿಸ್​ ಬ್ರಾಡ್​ ಹೊರಬಿದ್ದಿದ್ದಾರೆ. ಟೀಮ್​ ಇಂಡಿಯಾ ಮಾಜಿ ವೇಗಿ ಹಾಗೂ ಕನ್ನಡಿಗ ಜಾವಗಲ್​ ಶ್ರೀನಾಥ್​ ಮ್ಯಾಚ್​ ರೆಫ್ರಿಗಳ ಎಲೈಟ್​ ಪ್ಯಾನೆಲ್​ನಲ್ಲಿರುವ ಏಕೈಕ ಭಾರತೀಯರಾಗಿದ್ದಾರೆ.

    ಸನ್​ರೈಸರ್ಸ್​ ಬ್ಯಾಟಿಂಗ್​ ಹೊಗಳಿದ ಹಾರ್ದಿಕ್​ ಪಾಂಡ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts