More

    ಸನ್​ರೈಸರ್ಸ್​ ಬ್ಯಾಟಿಂಗ್​ ಹೊಗಳಿದ ಹಾರ್ದಿಕ್​ ಪಾಂಡ್ಯ!

    ಹೈದರಾಬಾದ್​: ಐಪಿಎಲ್​ ಇತಿಹಾಸದಲ್ಲೇ ಸರ್ವಾಧಿಕ ಮೊತ್ತ ಪೇರಿಸಿ ಗೆಲುವು ದಾಖಲಿಸಿದ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಬ್ಯಾಟಿಂಗ್​ ನಿರ್ವಹಣೆಯನ್ನು ಎದುರಾಳಿ ಮುಂಬೈ ಇಂಡಿಯನ್ಸ್​ ನಾಯಕ ಹಾರ್ದಿಕ್​ ಪಾಂಡ್ಯ ಹೊಗಳಿದ್ದಾರೆ. “ಪಿಚ್​ ಉತ್ತಮವಾಗಿತ್ತು. ನಾವು ಎಷ್ಟು ಉತ್ತಮವಾಗಿ ಅಥವಾ ಕೆಟ್ಟದಾಗಿ ಬೌಲಿಂಗ್​ ಮಾಡಿದೆವು ಎಂಬುದಕ್ಕಿಂತ, ತಂಡವೊಂದು 277 ರನ್​ ಪೇರಿಸಿದೆ ಎಂದರೆ ಅದು ಅತ್ಯುತ್ತಮವಾಗಿ ಬ್ಯಾಟಿಂಗ್​ ಮಾಡಿದೆ ಎಂದೇ ಅರ್ಥ’ ಎಂದು ಹಾರ್ದಿಕ್​ 31 ರನ್​ ಸೋಲಿನ ಬಳಿಕ ಹೇಳಿದ್ದಾರೆ.

    “ಪಿಚ್​ ಬ್ಯಾಟಿಂಗ್​ ಸ್ನೇಹಿಯಾಗಿತ್ತು ಎಂಬುದಕ್ಕೆ 500ಕ್ಕೂ ಅಧಿಕ ರನ್​ ಸಿಡಿದಿದ್ದೇ ಸಾ. ನಮ್ಮ ಬೌಲಿಂಗ್​ ಸ್ವಲ್ಪ ಸುಧಾರಿಸಬಹುದಿತ್ತು. ಆದರೆ ನಮ್ಮದು ಯುವ ಬೌಲಿಂಗ್​ ವಿಭಾಗ ಮತ್ತು ಪಾಠ ಕಲಿತುಕೊಳ್ಳಲಿದ್ದೇವೆ’ ಎಂದು ಹಾರ್ದಿಕ್​ ಹೇಳಿದ್ದಾರೆ.

    ಸನ್​ರೈಸರ್ಸ್​ನ 278 ರನ್​ ಸವಾಲಿಗೆ ಪ್ರತಿಯಾಗಿ ಮುಂಬೈಗೆ ರೋಹಿತ್​ ಶರ್ಮ (26) ಮತ್ತು ಇಶಾನ್​ ಕಿಶನ್​ (34) ಬಿರುಸಿನ ಆರಂಭ ಒದಗಿಸಿದರು. ನಂತರ ನಮನ್​ ಧೀರ್​ (30) ಮತ್ತು ತಿಲಕ್​ ವರ್ಮ (64) ಕೂಡ ಚೇಸಿಂಗ್​ಗೆ ಬಲ ತುಂಬಿದರು. ಆದರೆ ಕೊನೆಯಲ್ಲಿ ನಾಯಕ ಹಾರ್ದಿಕ್​ ಪಾಂಡ್ಯ (24) ಅವರಿಂದ ನಿರೀತ ಬ್ಯಾಟಿಂಗ್​ ಬರಲಿಲ್ಲ. ಟಿಮ್​ ಡೇವಿಡ್​ಗೂ (42*) ತಂಡವನ್ನು ದಡ ಸೇರಿಸಲಾಗಲಿಲ್ಲ. ಹೀಗಾಗಿ ಮುಂಬೈ 5 ವಿಕೆಟ್​ಗೆ 246 ರನ್​ ಗಳಿಸಲಷ್ಟೇ ಶಕ್ತವಾಯಿತು.

    ಸನ್​ರೈಸರ್ಸ್​ ನಾಯಕರಾಗಿ ಮೊದಲ ಗೆಲುವು ಕಂಡ ಕಮ್ಮಿನ್ಸ್​, “ನಾವು 270ಕ್ಕೂ ಅಧಿಕ ಮೊತ್ತ ಪೇರಿಸುವ ಸಲುವಾಗಿ ಆಡಲಿಲ್ಲ. ಆದರೆ ಆಕ್ರಮಣಕಾರಿ ಮತ್ತು ಸಕಾರಾತ್ಮಕವಾಗಿ ಆಡಲು ಬಯಸಿದ್ದೆವು. ನಮ್ಮ ಬೌಲರ್​ಗಳೂ ಸಾಕಷ್ಟು ಬೌಂಡರಿ ಬಿಟ್ಟುಕೊಟ್ಟರು. ಆದರೆ, ಕೊನೇ ಹಂತದಲ್ಲಿ ನಾವು ಉತ್ತಮ ಬೌಲಿಂಗ್​ ಮಾಡಿದೆವು’ ಎಂದರು.

    ಐಪಿಎಲ್​ನಲ್ಲಿ ಮೊದಲ ಬಾರಿಗೆ ಪಂದ್ಯವೊಂದರಲ್ಲಿ 500ಕ್ಕೂ ಅಧಿಕ ರನ್​ ಸಿಡಿಯಿತು. ಅಲ್ಲದೆ ಯಾವುದೇ ಟಿ20 ಪಂದ್ಯದಲ್ಲಿ ಇದು ಸರ್ವಾಧಿಕ ರನ್​ಪ್ರವಾಹವಾಗಿದೆ. 2023ರಲ್ಲಿ ದಣ ಆಫ್ರಿಕಾ-ವಿಂಡೀಸ್​ ನಡುವಿನ ಪಂದ್ಯದಲ್ಲಿ 517 ರನ್​ ಸಿಡಿದಿದ್ದು ಹಿಂದಿನ ದಾಖಲೆ. ಮುಂಬೈ ಐಪಿಎಲ್​ನಲ್ಲಿ ಚೇಸಿಂಗ್​ ವೇಳೆ ಸರ್ವಾಧಿಕ ರನ್​ ಗಳಿಸಿದ ಸಾಧನೆ ಮಾಡಿತು. ರಾಜಸ್ಥಾನ 226 ರನ್​ ಗಳಿಸಿದ್ದು ಹಿಂದಿನ ಗರಿಷ್ಠ. ಟ್ರಾವಿಸ್​ ಹೆಡ್​ (18)-ಅಭಿಷೇಕ್​ ಶರ್ಮ (16) ಐಪಿಎಲ್​ನಲ್ಲಿ 20ಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಮೊದಲ ಜೋಡಿ ಎನಿಸಿದರು.

    ನವೆಂಬರ್​ 22ರಿಂದ ಪ್ರತಿಷ್ಠಿತ ಬಾರ್ಡರ್​-ಗಾವಸ್ಕರ್​ ಟ್ರೋಫಿ; ಪರ್ತ್​ನಲ್ಲಿ ಭಾರತ-ಆಸೀಸ್​ ಮೊದಲ ಟೆಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts