More

    ಭಾರತದ ಮೊದಲ ವರ್ಚುಯಲ್ ವಿಚ್ಛೇದನ ಇದು…!

    ನವದೆಹಲಿ: ಲಾಕ್‌ಡೌನ್ ಕಾರಣದಿಂದಾಗಿ ನ್ಯಾಯಾಲಯಗಳಲ್ಲಿ ವಿಚಾರಣೆ ಸಹ ಡಿಜಿಟಲ್ ರೂಪ ಪಡೆದುಕೊಂಡಿದ್ದು, ಇದೀಗ ದೇಶದ ಮೊದಲ ವರ್ಚುಯಲ್ ವಿಚ್ಛೇದನಕ್ಕೆ ಡಿಜಿಜಲ್ ಮೂಲಕ ಆಗಿದೆ. ಜೂನ್ 12ರಂದು ದೆಹಲಿ ಮೂಲದ ದಂಪತಿ ವರ್ಚುಯಲ್ ವಿಚ್ಛೇದನ ಪಡೆದುಕೊಂಡಿದ್ದಾರೆ.

    ಗಂಡ-ಹೆಂಡತಿ ಇಬ್ಬರೂ ತಮ್ಮ ತಮ್ಮ ಮನೆಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಭಾಗಿಯಾಗಿದ್ದರು. ದಂಪತಿಯ ವಕೀಲರು ಕೂಡ ತಮ್ಮ ತಮ್ಮ ಕಚೇರಿಯಲ್ಲೇ ಕುಳಿತು ವಿಡಿಯೋ ಕಾನ್ಫರೆನ್ಸ್ ಮೂಲಕವೇ ವಾದ ಮಂಡಿಸಿದರು. ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ದೀಪಕ್ ಗರ್ಗ್ ವಿಡಿಯೋ ಕಾನ್ಫರೆನ್ಸ್‌ನಲ್ಲೇ ವಿಚ್ಛೇದನಕ್ಕೆ ಅನುಮತಿ ಸೂಚಿಸಿದರು.

    ಇದನ್ನೂ ಓದಿ ಜ್ವರ, ಕೆಮ್ಮು ಮಾತ್ರವಲ್ಲ, ಇವು ಕೂಡ ಕರೊನಾ ಲಕ್ಷಣಗಳು…! ಪರೀಕ್ಷಿಸಿಕೊಳ್ಳಿ

    ಇಬ್ಬರೂ ಸ್ವಇಚ್ಛೆಯ ಮೇರೆಗೆ ಅರ್ಜಿ ಸಲ್ಲಿಸಿದ್ದರಿಂದ ವಿಚ್ಛೇದನ ನೀಡಲಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ದಂಪತಿ ಸಹಿ ಮಾಡಿದ ಪತ್ರಗಳ ಕಾಪಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ದಂಪತಿ 2017ರಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು.

    2018ರಲ್ಲಿ ಬೇರೆಯಾದ ಅವರು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಕಳೆದ ವರ್ಷ ಜುಲೈನಲ್ಲಿ ತೆಲಂಗಾಣದ ಕೌಟುಂಬಿಕ ನ್ಯಾಯಾಲವೊಂದು ಭಾಗಶಃ ಆನ್‌ಲೈನ್ ಮೂಲಕ ವಿಚ್ಛೇದನ ನೀಡಿತ್ತು. ಪ್ರಕರಣ ವಿಚಾರಣೆ ವೇಳೆ ಅಮೆರಿಕದಲ್ಲಿದ್ದ ಪತ್ನಿ ಸ್ಕೈಪ್ ತಂತ್ರಜ್ಞಾನದ ಮೂಲಕ ಭಾಗವಹಿಸಿದ್ದರು.

    ಚೀನಾ-ಭಾರತ ಸಂಘರ್ಷ: ಭಾರತದ 20 ಯೋಧರು ಹುತಾತ್ಮ, 40ಕ್ಕೂ ಹೆಚ್ಚು ಚೀನಾ ಯೋಧರೂ ಹತರಾಗಿರುವ ಶಂಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts