More

    ಅಯೋಧ್ಯೆಯಲ್ಲಿ ತಲೆಎತ್ತಲಿದೆ ಭಾರತದ ಮೊದಲ ಸಸ್ಯಾಹಾರಿ 7-ಸ್ಟಾರ್ ಹೋಟೆಲ್!

    ಅಯೋಧ್ಯೆ: ರಾಮ ಮಂದಿರ ಉದ್ಘಾಟನೆಗೆ ಸಜ್ಜಾಗಿರುವ ದೇವಾಲಯದ ನಗರಿ ಅಯೋಧ್ಯೆಯಲ್ಲಿ ದೇಶದ ಮೊದಲ 7 ಸ್ಟಾರ್​ ಐಷಾರಾಮಿ ಹೋಟೆಲ್ ತಲೆ ಎತ್ತಲಿದೆ, ಈ ಹೋಟೆಲ್​ನಲ್ಲಿ ಸಸ್ಯಾಹಾರಿ ಆಹಾರವನ್ನು ಮಾತ್ರ ಪೂರೈಸಲಾಗುತ್ತದೆ.

    ಮುಂಬೈ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯು ಅಯೋಧ್ಯೆಯಲ್ಲಿ ಪಂಚತಾರಾ ಹೋಟೆಲ್ ಸ್ಥಾಪಿಸಲಿದೆ.
    ರಾಮ ಮಂದಿರ ಉದ್ಘಾಟನೆ ದಿನವಾದ ಜನವರಿ 22 ರಂದೇ ಈ ವಸತಿ ಯೋಜನೆಗೆ ಚಾಲನೆ ನೀಡಲಾಗುವುದು,

    ದೇವಾಲಯದ ಉದ್ಘಾಟನೆಯಿಂದಾಗಿ ನಗರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರೆತಿದ್ದು, ಹೋಟೆಲ್‌ಗಳು ಮತ್ತು ವಸತಿ ಯೋಜನೆಗಳ ಮೂಲಕ ಈ ನಗರಿಯು ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿ ರೂಪುಗೊಳ್ಳುತ್ತಿದೆ.

    ಮುಂಬೈ, ದೆಹಲಿ ಮತ್ತು ಇತರ ಪ್ರಮುಖ ನಗರಗಳನ್ನು ಸಂಪರ್ಕಿಸುವ ಹೊಸ ವಿಮಾನ ನಿಲ್ದಾಣ ಮತ್ತು ನವೀಕರಿಸಿದ ರೈಲು ನಿಲ್ದಾಣವು ಈಗಾಗಲೇ ನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಶುಕ್ರವಾರದಿಂದ ಲಖನೌದಿಂದ ಹೆಲಿಕಾಪ್ಟರ್ ಸೇವೆ ಆರಂಭವಾಗಲಿದೆ.

    ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರು ದೇವಸ್ಥಾನದಿಂದ 15 ನಿಮಿಷಗಳ ಅಂತರದಲ್ಲಿರುವ ಐಷಾರಾಮಿ ಎಕ್ಸ್‌ಕ್ಲೇವ್ ‘ದಿ ಸರಯು’ ನಲ್ಲಿ ಭೂಮಿಯನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ.

    ಮುಂಬೈ ಮೂಲದ ಡೆವಲಪರ್ ದಿ ಹೌಸ್ ಆಫ್ ಅಭಿನಂದನ್ ಲೋಧಾ (HoABL) ಪ್ಲಾಟ್‌ನ ಗಾತ್ರ ಮತ್ತು ಮೌಲ್ಯವನ್ನು ಬಹಿರಂಗಪಡಿಸದಿದ್ದರೂ, 10,000 ಚದರ ಅಡಿ ಭೂಮಿಗೆ ರೂ. 14.5 ಕೋಟಿ ವೆಚ್ಚವಾಗಬಹುದು ಎಂದು ಉದ್ಯಮದ ಮೂಲಗಳನ್ನು ಉಲ್ಲೇಖಿಸಿದೆ.

    ಇದಲ್ಲದೆ, ಸರಯೂ ನದಿಯ ದಡದಲ್ಲಿ ಹಲವಾರು ಪಂಚತಾರಾ ಹೋಟೆಲ್‌ಗಳು ಬರಲಿವೆ. ಅಂದಾಜು 110 ಸಣ್ಣ ಮತ್ತು ದೊಡ್ಡ ಹೋಟೆಲ್ ಉದ್ಯಮಿಗಳು ಅಯೋಧ್ಯೆಯಲ್ಲಿ ತಮ್ಮ ಸೌಲಭ್ಯಗಳನ್ನು ಸ್ಥಾಪಿಸಲು ಭೂಮಿ ಖರೀದಿಸುತ್ತಿದ್ದಾರೆ. ಇಲ್ಲಿ ಸೋಲಾರ್ ಪಾರ್ಕ್ ಕೂಡ ನಿರ್ಮಾಣವಾಗುತ್ತಿದೆ.

    ಅಯೋಧ್ಯೆಯನ್ನು ಸ್ಮಾರ್ಟ್ ಸಿಟಿಯನ್ನಾಗಿಯೂ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹಿಂದಿನ ರಾಜಮನೆತನದ ಮತ್ತು ದೇವಾಲಯದ ಟ್ರಸ್ಟ್‌ನ ಸದಸ್ಯ ಬಿಮ್ಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts