More

    15 ದಿನದಲ್ಲಿ ರಾಷ್ಟ್ರದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಲಕ್ಷ ಏರಿಕೆ

    ನವದೆಹಲಿ: ರಾಷ್ಟ್ರದಲ್ಲಿ ಕರೊನಾ ವೈರಸ್​ ಸೋಂಕಿತರ ಸಂಖ್ಯೆ 2 ಲಕ್ಷಕ್ಕೆ ಏರಿಕೆಯಾಗಿದೆ. ಒಂದು ಲಕ್ಷ ಸೋಂಕಿತರ ಪತ್ತೆ ಕೇವಲ 15 ದಿಗಳಲ್ಲಿ ಆಗಿದೆ.

    ರಾಷ್ಟ್ರದಲ್ಲಿ ಮೊದಲ ಸೋಂಕಿತ ಪತ್ತೆಯಾಗಿದ್ದು ಜನವರಿ 30ರಂದು ಕೇರಳದಲ್ಲಿ. ರಾಷ್ಟ್ರದ ಮೊದಲ ಸೋಂಕಿತ ವಿದ್ಯಾರ್ಥಿ. ಈತ ಚೀನಾದ ವುಹಾನ್​ನಿಂದ ಕೇರಳಕ್ಕೆ ಹಿಂತಿರುಗಿದ್ದ. ಮಾರ್ಚ್​ 10ರಂದು ರಾಷ್ಟ್ರದಲ್ಲಿ ಕೇವಲ 50 ಮಂದಿಯಲ್ಲಿ ಮಾತ್ರ ಸೋಂಕು ಪತ್ತೆಯಾಗಿತ್ತು. ಮೇ 18ರಂದು ಸೋಂಕಿತರ ಸಂಖ್ಯೆ ಒಂದು ಲಕ್ಷಕ್ಕೆ ಏರಿಕೆಯಾಯಿತು. ನಂತರ 15 ದಿನಗಳಲ್ಲಿ ಈ ಸಂಖ್ಯೆ 2 ಲಕ್ಷಕ್ಕೆ ಏರಿಕೆಯಾಯಿತು. ರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 2 ಲಕ್ಷಕ್ಕೆ ಏರಿಕೆಯಾಗಿದ್ದರೂ ಇತರ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಕಡಿಮೆ.

    ಇದನ್ನೂ ಓದಿ  ಜುಲೈ 1ಕ್ಕೆ ಶಾಲೆ ಆರಂಭ ಅನುಮಾನ? ಕ್ಲಾಸ್​ ಬೇಕಾ-ಬೇಡ್ವಾ ಪಾಲಕರೇ ನಿರ್ಧರಿಸ್ತಾರೆ..!

    ವಿಶ್ವದಲ್ಲಿ 63 ಲಕ್ಷ ಮಂದಿಗೆ ಸೋಂಕು ಹರಡಿದೆ. ಕಳೆದ ಡಿಸೆಂಬರ್​ನಲ್ಲಿ ಸೋಂಕಿತರ ಸಂಖ್ಯೆ 3.7 ಲಕ್ಷ ಇತ್ತು. ಭಾರತದಲ್ಲಿ ಪ್ರತಿ ದಿನ 1.2 ಲಕ್ಷ ಮಂದಿಗೆ ಕರೊನಾ ವೈರಸ್​ ಪರೀಕ್ಷೆ ನಡೆಸಲಾಗುತ್ತಿದೆ.

    ಸೋಂಕಿತರ ಸಂಖ್ಯೆಯ ಪಟ್ಟಿಯಲ್ಲಿ ಭಾರತ ವಿಶ್ವದಲ್ಲಿ 7ನೇ ಸ್ಥಾನದಲ್ಲಿದೆ. ಅಮೆರಿಕಾ, ಬ್ರೆಜಿಲ್​, ರಷ್ಯಾ, ಇಂಗ್ಲೆಂಡ್​, ಸ್ಪೈನ್​ ಹಾಗೂ ಇಟಲಿ ಮೊದಲ 6 ಸ್ಥಾನದಲ್ಲಿವೆ. ಅಮೆರಿಕಾದಲ್ಲಿ 18 ಲಕ್ಷ, ಬ್ರೆಜಿಲ್​ನಲ್ಲಿ 5 ಲಕ್ಷ, ರಷ್ಯಾ 4 ಲಕ್ಷ , ಇಂಗ್ಲೆಂಡ್​ 2.8 ಲಕ್ಷ ಸ್ಪೈನ್​ 2.4 ಲಕ್ಷ ಹಾಗೂ ಇಟಲಿಯಲ್ಲಿ 2.3 ಲಕ್ಷ ಮಂದಿಗೆ ಸೋಂಕು ಹರಡಿದೆ. (ಏಜೆನ್ಸೀಸ್​)

    VIDEO ] ಕ್ವಾರಂಟೈನಿಗರ ಸ್ಫೂರ್ತಿದಾಯಕ ಕೋವಿಡಾನ್ಸಿಂಗ್ ಹೇಗಿದೆ ನೋಡಿ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts