More

    ಕುಟುಂಬ ವ್ಯವಸ್ಥೆಯಿಂದ ಭಾರತೀಯರಿಗೆ ನೆಮ್ಮದಿ

    ಶಿರಸಿ: ಉಳಿದ ದೇಶಗಳಿಗಿಂತ ಭಾರತೀಯರು ನೆಮ್ಮದಿಯಾಗಿರಲು ಇಲ್ಲಿನ ಧರ್ಮಕ್ಕಂಟಿದ ಕುಟುಂಬ ವ್ಯವಸ್ಥೆಯೇ ಕಾರಣ ಎಂದು ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

    ನಗರದ ಮಾರಿಕಾಂಬಾ ದೇವಸ್ಥಾನದ ಸಹಕಾರದಲ್ಲಿ ಗ್ರಾಮಾಭ್ಯುದಯ ಸಂಸ್ಥೆ ಸೋಮವಾ ಆಯೋಜಿಸಿದ್ದ ಸರ್ವ ದಂಪತಿ ಶಿಬಿರದ ಸಮಾರೋಪ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಬೇರೆ ಬೇರೆ ದೇಶದವರು ನಮ್ಮ ದೇಶಕ್ಕೆ ಬಂದು ವಿವಿಧ ಸಮೀಕ್ಷೆ ನಡೆಸಿದ್ದಾರೆ. ಸಮೀಕ್ಷೆಯ ಫಲಿತಾಂಶದಲ್ಲಿ ಭಾರತೀಯರ ನೆಮ್ಮದಿಗೆ ಕುಟುಂಬ ವ್ಯವಸ್ಥೆ ಕಾರಣ ಎಂದಿದ್ದಾರೆ. ಭಾರತೀಯ ಮಾದರಿಯ ಕುಟುಂಬ ವ್ಯವಸ್ಥೆ ಬೇರೆ ದೇಶದಲ್ಲಿ ಸರಿಯಾಗಿ ಇಲ್ಲ, ಅನೇಕ ದೇಶದಲ್ಲಿ ಇಲ್ಲವೇ ಇಲ್ಲ. ಧರ್ಮಕ್ಕೆ ಆಧಾರವಾಗಿರುವ ಕುಟುಂಬ ವ್ಯವಸ್ಥೆ ಹಾಳಾಗಬಾರದು. ನಮ್ಮ ಕುಟುಂಬ ವ್ಯವಸ್ಥೆ ಹಾಳಾಗಬಾರದು ಎಂದರೆ ವಿವಾಹ ವಿಚ್ಛೇದನ ಆಗಬಾರದು ಎಂದರು.

    ಹಿಂದು ಸಮಾಜದ ಇಂದಿನ ಜ್ವಲಂತ ಸಮಸ್ಯೆ ವಿವಾಹ ವಿಚ್ಛೇದನ ಆಗಿದೆ. ಮದುವೆ ಆದ ದಂಪತಿ ಕೆಲವೇ ತಿಂಗಳಲ್ಲಿ ನ್ಯಾಯಾಲಯಕ್ಕೆ ವಿವಾಹ ವಿಚ್ಛೇದನಕ್ಕೆ ಓಡಾಡುತ್ತಿದ್ದಾರೆ. ವಿವಾಹ ವಿಚ್ಛೇದನದಿಂದ ಕುಟುಂಬ ವ್ಯವಸ್ಥೆ ಕುಸಿಯುತ್ತಿದೆ. ಧರ್ಮದ ಮುಖ್ಯ ಕೇಂದ್ರ ಕುಟುಂಬ ವ್ಯವಸ್ಥೆಯಾಗಿದೆ. ಇದೇ ಕುಸಿತಗೊಂಡರೆ ಧರ್ಮ ಅವನತಿಗೆ ಹೋಗುತ್ತದೆ ಎಂದರು.

    ಅಗ್ನಿ ಸಾಕ್ಷಿಯಾಗಿ ವಿವಾಹ ನಡೆಯುತ್ತದೆ. ವಿಚ್ಚೇದನ ಧರ್ಮಕ್ಕೆ ವಿರುದ್ಧವಾದದ್ದು. ಪುರಾಣದಲ್ಲಿ ಎಲ್ಲೂ ವಿವಾಹ ವಿಚ್ಛೇದನದ ಉದಾಹರಣೆಗಳೇ ಇಲ್ಲ. ಪವಿತ್ರ ಸಂಬಂಧಕ್ಕೆ ದೈವಿಕ ಹಿನ್ನಲೆ ಇದೆ. ಇದನ್ನು ಕಡಿದುಕೊಂಡರೆ ಪರಿತಾಪವೇ ಜೀವನದಲ್ಲಿ ಉಳಿಯುತ್ತದೆ ಎಂದರು.

    ಯಾವುದೇ ಕಾರಣಕ್ಕೂ ಭ್ರೂಣ ಹತ್ಯೆ ಮಾಡಬಾರದು. ಇತ್ತೀಚಿನ ವರ್ಷದಲ್ಲಿ ಅನೇಕ ದಂಪತಿ ಬೆಳವಣಿಗೆಯ ಹಂತದಲ್ಲಿ ಇರುವ ಭ್ರೂಣ ತೆಗೆಯುತ್ತಿದ್ದಾರೆ. ಭ್ರೂಣ ಹತ್ಯೆಗೆ ಸಮವಾದ ಪಾಪ ಇನ್ನೊಂದಿಲ್ಲ. ಹಾಗಾಗಿ ಅದನ್ನು ಮಾಡಬಾರದು. ಒಳ್ಳೆಯ ಸಂತತಿ ಕೊಡಲು ವಿವಾಹ ಆಗುತ್ತದೆ. ಹಿಂದು ಜನಸಂಖ್ಯೆ ಇಳಿಯುತ್ತಿದೆ. ಕನಿಷ್ಠ ಮೂವರಾದರೂ ಮಕ್ಕಳನ್ನಾದರೂ ಮಾಡಿಕೊಳ್ಳಬೇಕು ಎಂದರು.

    ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಆರ್.ಜಿ. ನಾಯ್ಕ, ಧರ್ಮದರ್ಶಿಗಳಾದ ಸುಧೀರ್ ಹಂದ್ರಾಳ, ಶಿವಾನಂದ ಶೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾದ ಗೋಪಾಲ ಹೆಗಡೆ, ಗ್ರಾಮಾಭ್ಯುದಯದ ಅಧ್ಯಕ್ಷ ಎಂ.ಸಿ.ಹೆಗಡೆ, ಕಾರ್ಯದರ್ಶಿ ಸಂತೋಷ ಹೆಗಡೆ, ಎಂ.ಕೆ.ಗೋಳಿಕೊಪ್ಪ, ರಮೇಶ ಹೆಗಡೆ ದೊಡ್ನಳ್ಳಿ, ಸಿದ್ದು ಚೋರೆ, ಮಹೇಂದ್ರ ಹೆಗಡೆ, ಧೀರಜ್ ಹೆಗಡೆ ಇತರರು ಇದ್ದರು.

    ದಂಪತಿಗಳ ಶಿಬಿರವು ಒಳ್ಳೆಯ ಫಲ ಕೊಡುತ್ತಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಹಿಂದು ಸಮಾಜದ ಅನೇಕ ಸಮಸ್ಯೆಗಳು ದಂಪತಿ ಶಿಬಿರದಲ್ಲಿ ಪರಿಹಾರ ಆಗುತ್ತದೆ. ಭವಿಷ್ಯದ ಒಳ್ಳೆಯ ಸಮಾಜ ನಿರ್ಮಾಣಕ್ಕೆ ಶಿಬಿರ ಸಹಕಾರಿ ಆಗುತ್ತಿದೆ. ಫಲ ಇನ್ನೂ ಹೆಚ್ಚು ಜನರಿಗೆ ತಲುಪಬೇಕು ಎಂಬುದೇ ಶಿಬಿರದ ಮೂಲ ಆಶಯ.

     ಸ್ವರ್ಣವಲ್ಲೀ ಶ್ರೀ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts