More

    ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತದ ಮಹಿಳಾ ತಂಡ ಪ್ರಕಟ; ಕನ್ನಡತಿ ರಾಜೇಶ್ವರಿ ವಾಪಸ್

    ಬೆಂಗಳೂರು: ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಕರ್ನಾಟಕದ ಸ್ಪಿನ್ ಬೌಲರ್ ರಾಜೇಶ್ವರಿ ಗಾಯಕ್ವಾಡ್ ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೊಣಕಾಲಿನ ಗಾಯದಿಂದ ಬಳಲಿದ್ದ ರಾಜೇಶ್ವರಿ, ಕಳೆದ ಜೂನ್‌ನಲ್ಲಿ ನಡೆದ ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿದಿದ್ದರು. ಈ ನಡುವೆ ರಾಜೇಶ್ವರಿ ಕೋವಿಡ್‌ನಿಂದಲೂ ಬಳಲಿದ್ದರು. ಮೂರು ಮಾದರಿ ತಂಡದಲ್ಲೂ ರಾಜೇಶ್ವರಿ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡ ಏಕೈಕ ಟೆಸ್ಟ್, ತಲಾ 3 ಏಕದಿನ ಹಾಗೂ ಟಿ20 ಪಂದ್ಯಗಳನ್ನಾಡಲಿದೆ. ಮುಂದಿನ ವರ್ಷ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ದೃಷ್ಟಿಯಿಂದ ಈ ಸರಣಿ ಭಾರತದ ಪಾಲಿಗೆ ಮಹತ್ವ ಪಡೆದಿದೆ. ಮಿಥಾಲಿ ರಾಜ್ ಸಾರಥ್ಯದಲ್ಲಿ ಟೆಸ್ಟ್ – ಏಕದಿನ ಸರಣಿಗೆ 18 ಸದಸ್ಯರು ಹಾಗೂ ಹರ್ಮಾನ್‌ಪ್ರೀತ್ ಕೌರ್ ಸಾರಥ್ಯದಲ್ಲಿ ಚುಟುಕು ಕ್ರಿಕೆಟ್ ಸರಣಿಗೆ 17 ಆಟಗಾರ್ತಿಯರ ತಂಡವನ್ನು ಪ್ರಕಟಿಸಲಾಗಿದೆ.

    ಸೆ.19 ರಿಂದ ಪ್ರವಾಸ: ಭಾರತ ತಂಡ ಏಕದಿನ ಸರಣಿ ಮೂಲಕ ಆಸ್ಟ್ರೇಲಿಯಾ ಪ್ರವಾಸ ಆರಂಭಿಸಲಿದೆ. ನಾರ್ಥ್ ಸಿಡ್ನಿ ಓವಲ್ ಮೈದಾನದಲ್ಲಿ ಸೆಪ್ಟೆಂಬರ್ 19ರಂದು ಮೊದಲ ಪಂದ್ಯ ನಡೆದರೆ, ಮೆಲ್ಬೋರ್ನ್ ಜಂಕ್ಷನ್ ಓವಲ್‌ನಲ್ಲಿ ಸೆ.22 ಹಾಗೂ 24 ರಂದು ಕ್ರಮವಾಗಿ 2ನೇ ಹಾಗೂ 3ನೇ ಏಕದಿನ ಪಂದ್ಯ ನಡೆಯಲಿದೆ. ಸೆ.30 ರಿಂದ ಅಕ್ಟೋಬರ್ 3 ರವರೆಗೆ ಅಹರ್ನಿಶಿ ಟೆಸ್ಟ್ ಪಂದ್ಯ ನಡೆಯಲಿದೆ. ನಾಥ್ ಸಿಡ್ನಿ ಓವಲ್ ಮೈದಾನದಲ್ಲೇ ಅಕ್ಟೋಬರ್ 7, 9 ಮತ್ತು 11 ರಂದು ಕ್ರಮವಾಗಿ ಮೊದಲ, 2ನೇ ಹಾಗೂ 3ನೇ ಟಿ20 ಪಂದ್ಯಗಳು ನಡೆಯಲಿವೆ. ಆಸ್ಟ್ರೇಲಿಯಾ ಪ್ರವಾಸದ ಹಿನ್ನೆಲೆಯಲ್ಲಿ ಭಾರತ ಮಹಿಳಾ ತಂಡ ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದೆ. ಆಸ್ಟ್ರೇಲಿಯಾಗೆ ತೆರಳಿದ ಬಳಿಕ ಸರಣಿ ಆರಂಭಕ್ಕೂ ಮುನ್ನ 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಲಿದೆ.

    ಟೆಸ್ಟ್ ಹಾಗೂ ಏಕದಿನ ತಂಡ: ಮಿಥಾಲಿ ರಾಜ್ (ನಾಯಕ), ಹರ್ಮಾನ್‌ಪ್ರೀತ್ ಕೌರ್ (ಉಪನಾಯಕ), ಸ್ಮತಿ ಮಂದನಾ, ಶೆಫಾಲಿ ವರ್ಮ, ಪೂನಂ ರಾವತ್, ಜೆಮೀಮಾ ರೋಡ್ರಿಗಸ್, ದೀಪ್ತಿ ಶರ್ಮ, ಸ್ನೇಹಾ ರಾಣಾ, ಯಶ್ತಿಕಾ ಭಾಟಿಯಾ, ತಾನಿಯಾ ಭಾಟಿಯಾ (ವಿಕೀ), ಶಿಖಾ ಪಾಂಡೆ, ಜೂಲನ್ ಗೋಸ್ವಾಮಿ, ಮೇಘಾ ಸಿಂಗ್, ಪೂಜಾ ವಸಾಕರ್, ರಾಜೇಶ್ವರಿ ಗಾಯಕ್ವಾಡ್, ಪೂನಂ ಯಾದವ್, ರಿಚಾ ಘೋಷ್, ಏಕ್ತಾ ಬಿಷ್ಟ್.
    ಟಿ20 ತಂಡ: ಹರ್ಮಾನ್‌ಪ್ರೀತ್ ಕೌರ್ (ನಾಯಕಿ), ಸ್ಮತಿ ಮಂದನಾ (ಉಪನಾಯಕಿ), ಶೆಫಾಲಿ ವರ್ಮ, ಜೆಮೀಮಾ ರೋಡ್ರಿಗಸ್, ದೀಪ್ತಿ ಶರ್ಮ, ಸ್ನೇಹಾ ರಾಣಾ, ಯಶ್ತಿಕಾ ಭಾಟಿಯಾ, ಶಿಖಾ ಪಾಂಡೆ, ಮೇಘಾ ಸಿಂಗ್, ಪೂಜಾ ವಸಾಕರ್, ರಾಜೇಶ್ವರಿ ಗಾಯಕ್ವಾಡ್, ಪೂನಂ ಯಾದವ್, ರಿಚಾ  ಘೋಷ್ (ವಿಕೀ), ಹರ್ಲಿನ್ ಡಿಯೊಲ್, ಅರುಂಧತಿ ರೆಡ್ಡಿ, ರಾಧಾ ಯಾದವ್, ರೇಣುಕಾ ಸಿಂಗ್ ಠಾಕೂರ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts