More

    ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಭಾರತ, ಹಾರ್ದಿಕ್ ಪಾಂಡ್ಯ ಹೋರಾಟ ವ್ಯರ್ಥ

    ಸಿಡ್ನಿ: ಕರೊನಾ ಕಾಲದ ಮೊದಲ ಅಂತಾರಾಷ್ಟ್ರೀಯ ಕದನದಲ್ಲೇ ಟೀಮ್ ಇಂಡಿಯಾ ಮುಗ್ಗರಿಸಿದೆ. ಆತಿಥೇಯ ಆಸ್ಟ್ರೇಲಿಯಾ ತಂಡದ ತೋರಿದ ಸರ್ವಾಂಗೀಣ ನಿರ್ವಹಣೆ ಎದುರು ಮಂಕಾದ ವಿರಾಟ್ ಕೊಹ್ಲಿ ಬಳಗ 66 ರನ್‌ಗಳಿಂದ ಶರಣಾಯಿತು. ಇದರೊಂದಿಗೆ ಭಾರತ ತಂಡ ಮೂರು ಪಂದ್ಯಗಳ ಸರಣಿಯಲ್ಲಿ 0-1 ರಿಂದ ಹಿನ್ನಡೆ ಸಾಧಿಸಿತು. ಉಭಯ ತಂಡಗಳ ನಡುವಿನ 2ನೇ ಏಕದಿನ ಭಾನುವಾರ ಸಿಡ್ನಿ ಮೈದಾನದಲ್ಲೇ ನಡೆಯಲಿದೆ.
    ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ, ನಾಯಕ ಆರನ್ ಫಿಂಚ್ (114ರನ್, 124 ಎಸೆತ, 9 ಬೌಂಡರಿ, 2 ಸಿಕ್ಸರ್) ಹಾಗೂ ಸ್ಟೀವನ್ ಸ್ಮಿತ್ (105ರನ್, 66 ಎಸೆತ, 11 ಬೌಂಡರಿ, 4 ಸಿಕ್ಸರ್) ಜೋಡಿಯ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ 374 ರನ್ ಪೇರಿಸಿತು. ಪ್ರತಿಯಾಗಿ ಭಾರತ ತಂಡ ಹಾರ್ದಿಕ್ ಪಾಂಡ್ಯ (90 ರನ್, 76 ಎಸೆತ, 7 ಬೌಂಡರಿ, 4 ಸಿಕ್ಸರ್) ಏಕಾಂಗಿ ನಿರ್ವಹಣೆ ನಡುವೆಯೂ 8 ವಿಕೆಟ್‌ಗೆ 308 ರನ್‌ಗಳಿಸಲಷ್ಟೇ ಶಕ್ತವಾಯಿತು.

    ಆಸ್ಟ್ರೇಲಿಯಾ ನೀಡಿದ ಬೃಹತ್ ಮೊತ್ತ ಬೆನ್ನಟ್ಟಿದ ಭಾರತ ತಂಡ ಉತ್ತಮ ಆರಂಭ ದಕ್ಕಿಸಿಕೊಳ್ಳಲು ವಿಲವಾಯಿತು. ಕನ್ನಡಿಗ ಮಯಾಂಕ್ ಅಗರ್ವಾಲ್ (22) ವಿಲರಾದರು. ಬಳಿಕ ಬಂದ ವಿರಾಟ್ ಕೊಹ್ಲಿ (21), ಶ್ರೇಯಸ್ ಅಯ್ಯರ್ (2) ಹಾಗೂ ಕೆಎಲ್ ರಾಹುಲ್ (12) ನಿರಾಸೆ ಅನುಭವಿಸಿದರು. ಈ ವೇಳೆ ಜತೆಯಾದ ಧವನ್ (74ರನ್, 86 ಎಸೆತ, 10 ಬೌಂಡರಿ) ಹಾಗೂ ಹಾರ್ದಿಕ್ ಪಾಂಡ್ಯ ಜೋಡಿ ಕೆಲಕಾಲ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಗೆಲುವಿನ ಆಸೆ ಜೀವಂತವಾಗಿಟ್ಟಿತು. 5ನೇ ವಿಕೆಟ್‌ಗೆ 128 ರನ್ ಜತೆಯಾಟವಾಡಿ ಬೇರ್ಪಟ್ಟಿತು. ಈ ಜೋಡಿಯನ್ನು ಆಡಂ ಜಂಪಾ ಬಲಿ ಪಡೆಯುವ ಮೂಲಕ ಭಾರತದ ಸೋಲಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕರಾದ ಡೇವಿಡ್ ವಾರ್ನರ್ (69)ಹಾಗೂ ಫಿಂಚ್ ಜೋಡಿ ಮೊದಲ ವಿಕೆಟ್‌ಗೆ 156 ರನ್ ಜತೆಯಾಟವಾಡಿ ಉತ್ತಮ ಆರಂಭ ನೀಡಿತು. ವಾರ್ನರ್ ನಿರ್ಗಮನದ ಬಳಿಕ ಕ್ರೀಸ್‌ಗಿಳಿದ ಸ್ಟೀವನ್ ಸ್ಮಿತ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಮೊತ್ತವನ್ನು 370ರ ಗಡಿ ದಾಟಿಸಿದರು.

    ಆಸ್ಟ್ರೇಲಿಯಾ: 6 ವಿಕೆಟ್‌ಗೆ 374 (ಡೇವಿಡ್ ವಾರ್ನರ್ 69, ಆರನ್ ಫಿಂಚ್ 114, ಸ್ಟೀವನ್ ಸ್ಮಿತ್ 105, ಗ್ಲೇನ್ ಮ್ಯಾಕ್ಸ್‌ವೆಲ್ 45, ಮೊಹಮದ್ ಶಮಿ 59ಕ್ಕೆ 3, ಜಸ್‌ಪ್ರೀತ್ ಬುಮ್ರಾ 73ಕ್ಕೆ 1, ನವದೀಪ್ ಸೈನಿ 83ಕ್ಕೆ 1, ಯಜುವೇಂದ್ರ ಚಾಹಲ್ 89ಕ್ಕೆ 1). ಭಾರತ: 8 ವಿಕೆಟ್‌ಗೆ 308 (ಮಯಾಂಕ್ ಅಗರ್ವಾಲ್ 22, ಶಿಖರ್ ಧವನ್ 74, ಹಾರ್ದಿಕ್ ಪಾಂಡ್ಯ 90, ವಿರಾಟ್ ಕೊಹ್ಲಿ 21, ಜೋಸ್ ಹ್ಯಾಸಲ್‌ವುಡ್ 55ಕ್ಕೆ 3, ಆಡಂ ಜಂಪಾ 54ಕ್ಕೆ 3).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts