More

    ಇದು ಸಿಂಗಲ್ ಮಾಲ್ಟ್ ವಿಸ್ಕಿಯ ಸಮಯ…ಪ್ರಪ್ರಥಮ ಬಾರಿಗೆ ದೈತ್ಯ ಕಂಪನಿಗಳನ್ನೇ ಹಿಂದಿಕ್ಕಿದ್ದಲ್ಲದೆ ಮಾರಾಟದಲ್ಲೂ ದಾಖಲೆ!

    ನವದೆಹಲಿ: ಸುಮಾರು ಎರಡು ತಿಂಗಳ ಹಿಂದೆ, ಭಾರತದಲ್ಲಿ ತಯಾರಿಸಿದ ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿಗೆ 2023ರ ವರ್ಷದ ವಿಸ್ಕಿ ಪ್ರಶಸ್ತಿಯನ್ನು ನೀಡಿದಾಗ ಸಿಂಗಲ್ ಮಾಲ್ಟ್ ಎಂಬ ಪದವು ಮತ್ತೊಮ್ಮೆ ಬೆಳಕಿಗೆ ಬಂದಿತು. ಆ ಸಮಯದಲ್ಲಿ ಜನರು ಸಿಂಗಲ್ ಮಾಲ್ಟ್‌ನ ಪ್ರಯೋಜನವೇನು ಎಂದು ತಿಳಿದುಕೊಳ್ಳುವ ಕುತೂಹಲ ಹೊಂದಿದ್ದರು. ಸಾಮಾನ್ಯವಾಗಿ ವಿಸ್ಕಿ ಎಂಬ ಪದ ಕೇಳಿದರೇನೇ ಜನರ ಕಣ್ಣುಗಳು ಹೊಳೆಯುತ್ತವೆ.

    ಎಲ್ಲರಿಗೂ ತಿಳಿದಿರುವಂತೆ ವಿಸ್ಕಿಯಲ್ಲಿ ಬ್ಲೆಂಡೆಡ್, ಸಿಂಗಲ್ ಮಾಲ್ಟ್ ಮತ್ತು ಬೌರ್ಬನ್ ವಿಸ್ಕಿ ಎಂದು ಹಲವು ವಿಧಗಳಿವೆ. ಆದರೆ ಸಿಂಗಲ್ ಮಾಲ್ಟ್ ವಿಸ್ಕಿ ಮಾತ್ರ ಅದರ ವಿಶಿಷ್ಟ ರುಚಿ ಮತ್ತು ಸುವಾಸನೆಗೆ ಹೆಸರುವಾಸಿಯಾಗಿದ್ದು, ವಿಶೇಷ ರೀತಿಯ ವಿಸ್ಕಿಯಾಗಿ ಫೇಮಸ್​​​ ಆಗಿದೆ.

    ಇದೀಗ ಗ್ಲೆನ್‌ಲಿವೆಟ್, ಮಕಲನ್, ಲಗಾವುಲಿನ್ ಮತ್ತು ತಾಲಿಸ್ಕರ್​​​​ನಂತಹ ವಿಸ್ಕಿಯನ್ನೇ ಹಿಂದಿಕ್ಕಿ ಸ್ವದೇಶಿ ಸಿಂಗಲ್ ಮಾಲ್ಟ್ ಜನಪ್ರಿಯತೆ ಪಡೆಯುತ್ತಿದೆ. ಹೌದು, ಇದು ಸಿಂಗಲ್ ಮಾಲ್ಟ್ ವಿಸ್ಕಿಯ ಸಮಯ ಎಂದರೆ ತಪ್ಪಾಗಲಾರದು. ಏಕೆಂದರೆ ಇದರ ಮಾರಾಟವು ಮೊದಲ ಬಾರಿಗೆ ಜಾಗತಿಕ ದೈತ್ಯರು ಉತ್ಪಾದಿಸಿದ ವಿಸ್ಕಿಯ ಮಾರಾಟವನ್ನೇ ಹಿಂದಿಕ್ಕಿದೆ.

    ಭಾರತೀಯ ಆಲ್ಕೊಹಾಲ್ಯುಕ್ತ ಪಾನೀಯ ಕಂಪನಿಗಳ ಒಕ್ಕೂಟ (CIABC)ದ ಅಂಕಿಅಂಶ ಕೂಡ ಇದನ್ನೇ ಹೇಳಿದೆ. ಕಳೆದ ವರ್ಷ ಭಾರತದಲ್ಲಿ ಸುಮಾರು 6,75,000 ಕೇಸ್‌ಗಳ (ತಲಾ ಒಂಬತ್ತು ಲೀಟರ್‌ಗಳ) ಸಿಂಗಲ್ ಮಾಲ್ಟ್ ಮಾರಾಟದಲ್ಲಿ, ಸುಮಾರು 3,45,000 ಕೇಸ್‌ಗಳನ್ನು ಭಾರತೀಯ ಮೂಲದ ತಯಾರಕರು ಚಿಲ್ಲರೆಯಾಗಿ ಮಾರಾಟ ಮಾಡಿದ್ದಾರೆ, ಉಳಿದವನ್ನು 3,30,000 ಸ್ಕಾಟಿಷ್ ಮತ್ತು ಇತರರು ಮಾರಾಟ ಮಾಡಿದ್ದಾರೆ.

    ಅಂದಾಜಿನ ಪ್ರಕಾರ, 2023 ರಲ್ಲಿ ಸ್ಥಳೀಯ ಬ್ರಾಂಡ್​​ ಸುಮಾರು 23% ರಷ್ಟು ಬೆಳೆದವು, ಆದರೆ ಅಮದು ಮಾಡಿಕೊಂಡವುಗಳು 11% ಬೆಳೆದವು. ಇದು ಕೂಡ ಒಂದು ಮೈಲಿಗಲ್ಲು,” ಎಂದು CIABC ಯ ಮಹಾನಿರ್ದೇಶಕ ವಿನೋದ್ ಗಿರಿ ಹೇಳಿದ್ದಾರೆ.

    ಕೇವಲ ಒಂದೂವರೆ ದಶಕದ ಹಿಂದೆ ಸಿಂಗಲ್ ಮಾಲ್ಟ್ ವಿಸ್ಕಿ ಕುರಿತು ಅಪಹಾಸ್ಯ ಮಾಡಲಾಗುತ್ತಿತ್ತು. ಆದರೆ ಈಗ ಭಾರತೀಯ ವಿಸ್ಕಿ ತಯಾರಕರು ಗುಣಮಟ್ಟ ಮತ್ತು ಪರಿಷ್ಕರಣೆಯ ವಿಷಯದಲ್ಲಿ ಬಹಳ ದೂರ ಸಾಗಿದ್ದಾರೆ ಎಂದು ಅಮೃತ್ ಡಿಸ್ಟಿಲರೀಸ್ ನ ಜಾಯಿಂಟ್​​​ ಎಂಡಿ ತ್ರಿವಿಕ್ರಮ್ ನಿಕಮ್ ಸಂಶರ್ನವೊಂದರಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ರಾಕಿಂಗ್ ಸ್ಟಾರ್ ಯಶ್ ಜನ್ಮದಿನ: 20 ಅಡಿ ಬ್ಯಾನರ್ ಕಟ್ಟುವಾಗ ಅವಘಡ, ಮೂವರು ಯುವಕರು ಸಾವು

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts