More

    ರೈಲು ಪ್ರಯಾಣಿಕರ ಗಮನಕ್ಕೆ, ನಿಮಗೊಂದು ಸಿಹಿ ಸುದ್ದಿ; ಟಿಕೆಟ್​ ಬುಕ್​ ಮಾಡಿದ ಚಾರ್ಟ್​ನ್ನು ಆನ್​ಲೈನ್​ನಲ್ಲೇ ನೋಡಿ..!

    ನವದೆಹಲಿ: ಆನ್​ಲೈನ್​ನಲ್ಲಿ ಟಿಕೆಟ್​ ಬುಕ್​ ಮಾಡುವವರಿಗಾಗಿ ಭಾರತೀಯ ರೈಲ್ವೇಯು ಹೊಸ ಅನುಕೂಲತೆಯನ್ನು ಕಲ್ಪಿಸಿದೆ.

    ರೈಲು ಹೊರಡುವ ಮುನ್ನ ತಯಾರಾಗುತ್ತಿದ್ದ ಕಾಯ್ದಿರಿಸಿದ ಪಟ್ಟಿ ಈಗ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಇದು ಐಆರ್​ಸಿಟಿಸಿ ಮೂಲಕ ಮಾಡಿಸುವ ವೆಬ್​ ಮತ್ತು ಮೊಬೈಲ್​ಗಳಲ್ಲೂ ದೊರೆಯಲಿದೆ. ಇದರಿಂದ ಟಿಕೆಟ್​ ಬುಕ್​ ಮಾಡಿದ ಪ್ರಯಾಣಿಕರಿಗೆ ಖಾಲಿ ಇರುವ ಬರ್ತ್​ಗಳ ಮಾಹಿತಿ ದೊರೆಯಲಿದೆ.

    ಈ ಬಗ್ಗೆ ರೈಲ್ವೇ ಸಚಿವ ಪಿಯೂಷ್​ ಗೋಯಲ್​ ಟ್ವೀಟ್​ ಮಾಡಿ, ಇನ್ನು ಜಗಳ ಮುಕ್ತ ಪ್ರಯಾಣ. ಪ್ರಯಾಣಿಕರು ಖಾಲಿ ಇರುವ, ಬುಕ್​ ಆಗಿರುವ ಸೀಟುಗಳ ಮಾಹಿತಿ ಇರುವ ಚಾರ್ಟ್​ನ್ನು ನೋಡಬಹುದು ಎಂದಿದ್ದಾರೆ.

    ರೈಲು ಹೊರಡುವ ನಾಲ್ಕು ತಾಸುಗಳ ಮೊದಲು ಚಾರ್ಟ್​ ತಯಾರು ಮಾಡಲಾಗುತ್ತದೆ. ಕೊನೆಯ ಚಾರ್ಟ್​ನ್ನು ರೈಲು ಹೊರಡುವ ಮೂವತ್ತು ನಿಮಿಷಗಳ ಮೊದಲು ಅಂತಿಮಗೊಳಿಸಲಾಗುತ್ತದೆ. ಹೀಗೆ ಅಂತಿಮಗೊಂಡ ಎರಡನೇ ಪಟ್ಟಿಯನ್ನು ಪ್ರಯಾಣಿಕರು ನೋಡಬಹುದು.

    ಹೀಗೆ ಮಾಡುವ ಮೂಲಕ ನೀವು ಚಾರ್ಟ್​ ನೋಡಬಹುದು
    1. ಐಆರ್​ಸಿಟಿಸಿಗೆ ಲಾಗಿನ್​ ಆಗಿ. ಚಾರ್ಟ್​/ವೆಕೆನ್ಸಿ ಎಂಬ ಬಟನ್​ ಒತ್ತಿದರೆ ಇನ್ನೊಂದು ​ಪುಟ ತೆರೆಯುತ್ತದೆ.
    2. ಅಲ್ಲಿ ನೀವು ನಿಮ್ಮ ಪ್ರಯಾಣದ ವಿವರ ನೀಡಬೇಕು. ಗಾಡಿ ಸಂಖ್ಯೆ, ಪ್ರಯಾಣದ ದಿನಾಂಕ, ಇಳಿಯುವ ಸ್ಥಳಗಳನ್ನು ನೀಡಿದರೆ ನಿಮಗೆ ಗೆಟ್​ ಟ್ರೈನ್​ ಚಾರ್ಟ್​ ವಿವರ ದೊರೆಯುತ್ತದೆ.
    3. ಈಗ ನಿಮ್ಮ ಪ್ರಯಾಣದ ಪಟ್ಟಿ ತೆರೆಯುತ್ತದೆ.
    4. ಯಾವ ಕ್ಲಾಸ್​, ಕೋಚ್​ ನಂಬರ್​ಗಳ ವಿವರಗಳನ್ನು ನೀವು ವೀಕ್ಷಿಸಬಹುದು.
    5. ನಿಮಗೆ ನಿಗದಿಗೊಳಿಸಿದ ಕೋಚ್​ ನಂಬರ್​ ಮೇಲೆ ಕ್ಲಿಕ್​ ಮಾಡಿದರೆ ಅಲ್ಲಿನ ಎಲ್ಲ ವಿವರಗಳನ್ನು ಕಾಣಬಹುದು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts