ನವದೆಹಲಿ: ನಿತ್ಯ ಸಂಚರಿಸುವ ಎಲ್ಲ ಪ್ರಯಾಣಿಕ ರೈಲುಗಳ ಸೇವೆಯನ್ನು ಆಗಸ್ಟ್ 12ರವರೆಗೆ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಗುರುವಾರ ಸಂಜೆ ತಿಳಿಸಿದೆ. ಈ ರೈಲುಗಳಿಗೆ ಮುಂಗಡವಾಗಿ ಕಾಯ್ದಿರಿಸಲಾಗಿದ್ದ ಟಿಕೆಟ್‌ಗಳನ್ನು ರದ್ದು ಮಾಡಿ, ಪ್ರಯಾಣಿಕರಿಗೆ ಪೂರ್ತಿ ಹಣ ಪಾವತಿಸಲಾಗುವುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರ್ಚ್ ಕೊನೆಯ ವಾರದಿಂದ ಪ್ರಯಾಣಿಕರ ರೈಲು ಸೇವೆ ಸ್ಥಗಿತಗೊಂಡಿದೆ. ವಲಸೆ ಕಾರ್ಮಿಕರ ರವಾನೆಗಾಗಿ ಶ್ರಮಿಕ್ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸಿದ್ದವು. ಅನ್‌ಲಾಕ್ 1.0ರಲ್ಲಿ ಕೆಲ ಮಾರ್ಗಗಳಲ್ಲಿ ನಿಯಮಿತವಾಗಿ ಪ್ರಯಾಣಿಕರ ರೈಲು ಸಂಚಾರಕ್ಕೆ ಅನುಮತಿ ನೀಡಲಾಗಿತ್ತು.
ಇದನ್ನೂ ಓದಿ: ಮನೆ ತೊರೆದಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ನೆರವಾದ ‘ವಿಜಯವಾಣಿ’
ಮೇ 15ರ ಅಧಿಸೂಚನೆಯಲ್ಲಿ ರೈಲ್ವೆ ಈಗಾಗಲೆ ಪ್ರಯಾಣ ನಿಗದಿಯಾಗಿದ್ದ ಎಲ್ಲ ರೈಲುಗಳ ಸಂಚಾರವನ್ನು ಜೂನ್ 30ರ ತನಕ ರದ್ದುಗೊಳಿಸುವುದಾಗಿ ಘೋಷಿಸಿತ್ತು. ಅಲ್ಲದೆ ಮುಂಗಡ ಕಾಯ್ದಿರಿಸಿದ ಪ್ರಯಾಣಿಕರಿಗೆ ಟಿಕೆಟ್ ಹಣವನ್ನು ಮರುಪಾವತಿಸಲು ನಿರ್ಧರಿಸಿತ್ತು. (ಏಜೆನ್ಸೀಸ್)
VIDEO: “ನಮಸ್ಕಾರ ಗೆಳೆಯರೆ.. “- ಕನ್ನಡದಲ್ಲೇ ಜಾಗೃತಿ ಮೂಡಿಸ್ತಿದ್ದಾರೆ ಕ್ರಿಕೆಟ್ ದೇವರು