More

    ಮಂಗಳ ಗ್ರಹದ ಮೇಲಿನ ರೋವರ್​ ಚಾಲಕಿ, ಭಾರತ ಮೂಲದ ಮಹಿಳೆ!

    ಕ್ಯಾಲಿಫೋರ್ನಿಯ : ಮಂಗಳ ಗ್ರಹದ ಮೇಲೆ ಚಲಿಸುತ್ತಾ ಅಧ್ಯಯನ ನಡೆಸುತ್ತಿರುವ ‘ಪರ್ಸಿವರೆನ್ಸ್​’ ರೋವರ್​ಅನ್ನು ಚಾಲನೆ ಮಾಡುತ್ತಿರುವುದು ಭಾರತೀಯ ಮೂಲದ ಇಂಜಿನಿಯರ್ ವಂದಿ ವರ್ಮಾ. ಈಕೆ ಅಮೆರಿಕದ ನಾಸಾದ ಜೆಟ್​ ಪ್ರೊಪಲ್ಷನ್ ಲ್ಯಾಬೋರೇಟರಿ(ಜೆಪಿಎಲ್​)ನಲ್ಲಿ ರೋಬೋಟಿಕ್ಸ್​ ಆಪರೇಷನ್ಸ್​ನ ಚೀಫ್ ಇಂಜಿನಿಯರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಬಹುಕಾಲದ ಹಿಂದೆ ನೀರಿನ ಕೊಳ ಹೊಂದಿತ್ತು ಎಂದು ಭಾವಿಸಲಾದ ‘ಜೆಜೆರೋ’ ಎಂಬ ಕ್ರೇಟರ್​ನ ಮೇಲೆ ಸದ್ಯಕ್ಕೆ ಪರ್ಸಿವರೆನ್ಸ್​ ಸಂಚಾರ ನಡೆಸುತ್ತಿದೆ. ಅಲ್ಲಿನ 15 ಕಿಲೋಮೀಟರ್​ನಷ್ಟು ನೆಲದ ಮೇಲೆ ಓಡಾಡಿ ಪ್ರಾಚೀನ ಸೂಕ್ಷ್ಮಜೀವಿಗಳ ಇರುವಿಕೆಯನ್ನು ಹುಡುಕುವ ಕೆಲಸ ಮಾಡುತ್ತಿದೆ. “ಜೆಜೆರೋ ವಿಸ್ಮಯಕಾರಿಯಾಗಿದೆ” ಎಂದಿರುವ ವಂದಿ ವರ್ಮಾ, ತಮ್ಮ ಕೆಲಸದ ಬಗ್ಗೆ ಉತ್ಸಾಹ ಹೊಂದಿದ್ದಾರೆ.

    ಇದನ್ನೂ ಓದಿ: ಎಚ್​ಡಿಕೆ ಮತ್ತೊಮ್ಮೆ ಸಿಎಂ! ನಿಖಿಲ್​ಗೆ ಗಂಡು ಮಗು ಯೋಗ: ಅವದೂತ ವಿನಯ್ ಗುರೂಜಿ ಭವಿಷ್ಯ

    ಪಂಜಾಬಿನ ಹಲ್ವಾರದ ಮೂಲದವರಾದ ವರ್ಮಾರ ತಂದೆ, ಇಂಡಿಯನ್ ಏರ್​ ಫೋರ್ಸ್​ ಪೈಲೆಟ್​ ಆಗಿದ್ದರಂತೆ. ಕಾರ್ನೆಗಿ ಮೆಲ್ಲಾನ್ ಯೂನಿವರ್ಸಿಟಿಯಲ್ಲಿ ರೋಬೋಟಿಕ್ಸ್​ನಲ್ಲಿ ಪಿಎಚ್​.ಡಿ. ಮಾಡಿರುವ ವಂದಿ ವರ್ಮಾ, 2008 ರಿಂದ ಮಂಗಳ ಗ್ರಹದ ಮೇಲೆ ಅನ್ಯಾನ್ಯ ರೋವರ್​ಗಳ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಪಿರಿಟ್​, ಆಪರ್ಚುನಿಟಿ ಮತ್ತು ಕ್ಯೂರಿಯಾಸಿಟಿ ರೋವರ್​ಗಳನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

    ಇಲ್ಲಿಂದಲೇ ನಿಯಂತ್ರಣ : ಸುಮಾರು 300 ಮಿಲಿಯನ್ ಕಿಲೋಮೀಟರ್​ಗಳ ದೂರದಲ್ಲಿ ಮಂಗಳದ ಮೇಲೆ, ಎಸ್‌ಯುವಿ ಗಾತ್ರದ ರೋವರ್​, ತನ್ನ ಪ್ರಯಾಣ ಆರಂಭಿಸಿದರೆ, ವರ್ಮ ಮತ್ತು ಇತರ ಇಂಜಿನಿಯರುಗಳ ತಂಡ ನಾಸಾದ ಲ್ಯಾಬಲ್ಲಿ ಬಹುಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಾರೆ. ತನ್ನ ಚಕ್ರಗಳ ಮೇಲೆ ವಿಜ್ಞಾನ ಪ್ರಯೋಗಾಲಯವನ್ನು ಹೊತ್ತಿರುವ ರೋವರ್​, ಹಳ್ಳಕೊಳ್ಳಗಳ ಮೇಲೆ ಚಲಿಸಿ ಅಪಾಯಕ್ಕೀಡಾಗದಂತೆ ಇಲ್ಲಿನ ರೋವರ್​​ ಚಾಲಕರು ಮತ್ತು ಯೋಜಕರು ಅದರ ನ್ಯಾವಿಗೇಷನ್ನಿನ ಮಾರ್ಗವನ್ನು ನಿಖರವಾಗಿ ತಯಾರಿಸುತ್ತಾರೆ. ಸಾಟಲೈಟ್ ಇಮೇಜುಗಳನ್ನು ಬಳಸಿ 3ಡಿ ಗ್ಲಾಸಸ್​ ತೊಟ್ಟು ರೋವರ್​ನ ಸುತ್ತಣ ಜಾಗವನ್ನು ನೋಡಿ ಅದರ ಮಾರ್ಗವನ್ನು ತಯಾರಿಸಿ, ಸೂಚನೆಗಳನ್ನು ಮಂಗಳ ಗ್ರಹಕ್ಕೆ ಕಳುಹಿಸುತ್ತಾರೆ. ಮರುದಿನ ಆ ಸೂಚನೆಗಳಂತೆ ಮಾರ್ಗವನ್ನು ರೋವರ್ ಕ್ರಮಿಸುತ್ತದೆ. ಹೀಗೆ ಚಲಿಸುವಾಗ ಸಹಾಯ ಮಾಡಲು, ಪರ್ಸಿವರೆನ್ಸ್​ ರೋವರ್​ನಲ್ಲಿ ಕಂಪ್ಯೂಟರುಗಳು ಅಳವಡಿಸಲ್ಪಟ್ಟಿವೆ​ ಎನ್ನಲಾಗಿದೆ. (ಏಜೆನ್ಸೀಸ್)

    ಲಸಿಕೆ ಪಡೆಯಲು ಜನಜಂಗುಳಿ… ಪ್ರೊಟೊಕಾಲ್ ಮರೆತು ಪೈಪೋಟಿ!

    ನಟ ಶಂಕರ್​ನಾಗ್​​ರ ಈ ಹಿಂದಿ ಚಿತ್ರ ನೋಡಿದ್ದೀರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts