More

    ಹಿಂದು ಮಹಾಸಾಗರದಲ್ಲಿ ನೌಕಾ ನಿಯೋಜನೆ ಹೆಚ್ಚಿಸಿದ ಇಂಡಿಯನ್ ನೇವಿ

    ನವದೆಹಲಿ: ಚೀನಾದೊಂದಿಗೆ ಗಡಿ ಸಂಘರ್ಷದ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಹಿಂದು ಮಹಾಸಾಗರದ ತನ್ನ ವ್ಯಾಪ್ತಿಯೊಳಗೆ ಭಾರತೀಯ ನೌಕಾಪಡೆ ಯುದ್ಧ ನೌಕೆಗಳ ನಿಯೋಜನೆ ಮತ್ತು ನಿಗಾವನ್ನು ಹೆಚ್ಚಿಸಿದೆ. ವಾಯಪಡೆ ಮತ್ತು ಭೂಸೇನೆಗೆ ನೆರವಾಗುವ ರೀತಿಯಲ್ಲಿ ವ್ಯೂಹಾತ್ಮಕ ನಿಲುವನ್ನು ನೌಕಾಪಡೆಯೂ ತೆಗೆದುಕೊಳ್ಳುತ್ತಿದ್ದು, ಅದಕ್ಕೆ ತಕ್ಕಂತೆ ನೌಕೆಗಳ ನಿಯೋಜನೆ ಆಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

    ಈ ಮಾಹಿತಿ ಪ್ರಕಾರ, ಹಿಂದು ಮಹಾಸಾಗರದಲ್ಲಿ ಭಾರತೀಯ ನೌಕಾಪಡೆಯ ಗಸ್ತು ಪ್ರಮಾಣ ಹೆಚ್ಚಾಗಿದೆ. ಸಮರ ನೌಕೆಗಳ ನಿಯೋಜನೆಯೂ ಹೆಚ್ಚಾಗಿದೆ. ಒಂದು ಅಂದಾಜು ಪ್ರಕಾರ ಈ ನಿಯೋಜನೆ ಸಾಮಾನ್ಯಕ್ಕಿಂತ ಶೇಕಡ 25 ಹೆಚ್ಚಾಗಿದೆ. ಕಳೆದ ನೂರು ದಿನಗಳ ಅವಧಿಯಲ್ಲಿ ಭಾರತೀಯ ನೌಕಾಪಡೆ ಲಡಾಖ್​ನಿಂದ ಉತ್ತರಕ್ಕೆ ಮಾರಿಷಸ್ ನಿಂದ 7,000 ಕಿ.ಮೀ ದಕ್ಷಿಣಕ್ಕೆ ಮತ್ತು ಪಶ್ಚಿಮದ ರೆಡ್ ಸೀ ಪ್ರದೇಶದಿಂದ ಪೂರ್ವದ ಮಲಾಕ್ಕಾ ಸ್ಟ್ರೈಟ್​ ತನಕ 8,000 ಕಿ.ಮೀ ಅಂತರದ ವ್ಯಾಪ್ತಿಯಲ್ಲಿ ನಿಗಾ ಹೆಚ್ಚಾಗಿದೆ.

    ಇದನ್ನೂ ಓದಿ: ಮನೆ ಬಾಗಿಲ ತೆರೆದು ಬೆಚ್ಚಿ ಬಿದ್ರು ಪಳನಿಯ ಜನ!

    ನಿರ್ದಿಷ್ಟ ಯೋಜನೆಯೊಂದಿಗೆ ಆಯಕಟ್ಟಿನ ಪ್ರದೇಶಕ್ಕೆ ಭಾರತೀಯ ನೌಕಾಪಡೆ ಸಮರ ನೌಕೆಗಳನ್ನು ನಿಯೋಜಿಸುತ್ತದೆ. ಹಿಂದು ಮಹಾಸಾಗರದ ಸಮಗ್ರ ಚಿತ್ರಣವನ್ನು ಮನಸ್ಸಿನಲ್ಲಿರಿಸಿಕೊಂಡು ಆಯಾ ಸನ್ನಿವೇಶಗಳಿಗೆ ಸ್ಪಂದಿಸುವ ಸಲುವಾಗಿ ಈ ರೀತಿ ಸಿದ್ಧತೆಯನ್ನು ನೌಕಾಪಡೆ ಮಾಡಿಕೊಂಡಿರುತ್ತದೆ. (ಏಜೆನ್ಸೀಸ್)

    PHOTOS|ಹಂದಿಯನ್ನು ಬೆತ್ತಲೆಯಾಗಿ ಬೆನ್ನಟ್ಟಿದ ವ್ಯಕ್ತಿ: ಹಳದಿ ಬಣ್ಣದ ಬ್ಯಾಗ್​ನಲ್ಲಿ ಅಂಥದ್ದೇನಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts