ವಾಷಿಂಗ್ಟನ್: ಇಲ್ಲಿನ ಭಾರತೀಯ ರಾಯಭಾರ ಕಛೇರಿ ಎದುರು ಖಲಿಸ್ತಾನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಬೆಂಬಲಿಗರು ಭಾರತ ಮೂಲದ ಪತ್ರಕರ್ತ ಲಲಿತ್ ಝಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ತಮ್ಮ ಮೇಲಿನ ಹಲ್ಲೆ ಕುರಿತು ಪ್ರತಿಕ್ರಿಯಿಸಿರುವ ಲಲಿತ್ ಝಾ ವಿವಿಧ ಭಾಗಗಳಿಂದ ಆಗಮಿಸಿದ ಖಲಿಸ್ತಾನಿ ಬೆಂಬಲಿಗರು ಅಮೃತ್ಪಾಲ್ ಸಿಂಗ್ಗೆ ಬೆಂಬಲ ಸೂಚಿಸುತ್ತಾ ಪಂಜಾಬ್ ಪೊಲೀಸರು ಹಾಗೂ ಭಾರತದ ವಿರುದ್ದ ಘೋಷಣೆಗಳನ್ನ ಕೂಗಲು ಶುರು ಮಾಡಿದ್ದರು.
ಇದನ್ನೂ ಓದಿ: ಅಮೃತ್ಪಾಲ್ ಸಿಂಗ್ಗೆ ರಕ್ಷಣೆ; ಪಟಿಯಾಲದಲ್ಲಿ ಮಹಿಳೆ-ಸಹಚರ ಬಂಧನ
ನಾನು ನನ್ನ ಕೆಲಸವನ್ನ ಮಾಡುತ್ತಿದೆ ವ್ಯಕ್ತಿ ಒಬ್ಬ ಕೋಲಿನಿಂದ ನನ್ನ ಎಡಕಿವಿಗೆ ಬಾರಿಸಿದ ನಾನು ತಕ್ಷಣ US ಸೀಕ್ರೆಟ್ ಸರ್ವೀಸ್ಗೆ ಕರೆ ಮಾಡಿ ರಕ್ಷಣೆಗೆ ಕೋರಿದೆನು. ಕೂಡಲೇ ನನ್ನಗೆ ರಕ್ಷಣೆ ನೀಡಲಾಯಿತು. ಇಲ್ಲವಾದಲ್ಲಿ ನಾನು ಆಸ್ಪತ್ರೆಯಲ್ಲಿ ಇದ್ದುಕೊಂಡು ಇದನ್ನು ಬರೆಯಬೇಕಾಗಿತ್ತು ಎಂದು ಲಲಿತ್ ಝಾ ಪ್ರತಿಕ್ರಿಯಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ರಾಯಭಾರ ಕಚೇರಿ ಇಂತಹ ಚಟುವಟಿಕೆಗಳು ಖಲಿಸ್ತಾನಿ ಹೋರಾಟಗಾರರ ಮನಸ್ಥಿತಿಯನ್ನ ಒತ್ತಿ ಹೇಳುತ್ತದೆ. ಇಂತಹ ಕೃತ್ಯಗಳನ್ನ ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಹೋರಾಟಗಾರರಿಗೆ ಎಚ್ಚರಿಕೆಯನ್ನ ನೀಡಿದೆ.