More

    ಜಾನಪದ ಕಲಾ ಪ್ರಕಾರಗಳಿಂದ ಭಾರತೀಯ ಸಂಸ್ಕೃತಿ ಸದೃಢ

    ಕೊಪ್ಪ: ಭಾರತೀಯ ಸಂಸ್ಕೃತಿ ಸದೃಢವಾಗಲು ಜಾನಪದ ಕಲಾ ಪ್ರಕಾರವೇ ಮೂಲ ಕಾರಣ. ಜನಪದ ಬೆಳೆಸಲು ಎಲ್ಲರೂ ಶ್ರಮವಹಿಸ ಬೇಕು ಎಂದು ಗೌರಿಗದ್ದೆ ದತ್ತಾವಧೂತ ವಿನಯ್ ಗುರೂಜಿ ಹೇಳಿದರು.
    ಗೌರಿಗದ್ದೆ ಆಶ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ ಹಮ್ಮಿಕೊಂಡಿದ್ದ ಜಾನಪದ ಗೀತ ಗಾಯನ ಗುಂಪು ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನರಿಂದ ಹಬ್ಬಿದ ಅನುಭವದ ಮಾತುಗಳನ್ನು ಜನಪದ ಎಂದು ಕರೆಯಲಾಯಿತು. ಇಂದು ಜನಪದವನ್ನು ಪುಸ್ತಕದಲ್ಲಿ ಬರೆಯುವ ವಿಚಾರವಾಗಿದೆ. ಪುಸ್ತಕದಲ್ಲಿ ಶೇಖರಣೆಗೊಂಡ ಅನುಭವದ ವಿಚಾರ, ಜಾನಪದದಲ್ಲಿ ಜ್ಞಾನ, ತತ್ವ, ಧರ್ಮ, ಸಾಮಾಜಿಕ ಕಳಕಳಿಯ ಸಂದೇಶ ಅಡಕವಾಗಿದೆ ಎಂದರು.
    ಜನಪದ ಉಳಿಸುವ ನಿಟ್ಟಿನಲ್ಲಿ ಆಶ್ರಮ ಮುಂದಿನ ದಿನದಲ್ಲಿ ಕಲಾನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಬುಟ್ಟಿ, ಮಡಕೆ ಇತರೆ ಸಾಂಪ್ರದಾಯಿಕ ವಸ್ತುಗಳ ತಯಾರಿಕೆ ಗುಡಿ ಕೈಗಾರಿಕೆಗಳು ಕೂಡ ಜಾನಪದ ವ್ಯಾಪ್ತಿಗೆ ಬರುವುದರಿಂದ ಇದನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರಗಳು ಯೋಜನೆಗಳನ್ನು ರೂಪಿಸಬೇಕು ಎಂದರು.
    ಜಿಲ್ಲಾಧ್ಯಕ್ಷ ಬಿ.ಜಿ.ಸುರೇಶ್ ಮಾತನಾಡಿ, ಜಾನಪದ ಎಂದರೆ ಜನಸಮಾನ್ಯರ ಜೀವನದ ಅನುಭವದಿಂದ ಅರಳಿದ ಹೂವು. ಆಧುನಿಕತೆ ಎಂದರೆ ಜಾಗತಿಕ ಅನುಕರಣೆಯ ಹುತ್ತದಿಂದ ಹೊರಬಂದ ಹಾವು. ಇದು ನಮ್ಮ ಜಾನಪದ ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತ, ಆಚಾರ-ವಿಚಾರಗಳನ್ನು ನುಂಗಿ ನೀರು ಕುಡಿಯುತ್ತಿದೆ. ಅದನ್ನು ತಡೆಯಲು ನಮ್ಮ ಕರ್ನಾಟಕ ಜಾನಪದ ಪರಿಷತ್ ಶ್ರಮಿಸುತ್ತಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts