More

    ಅಫ್ರಿದಿ ವಿರುದ್ಧ ತಿರುಗಿಬಿದ್ದ ಭಾರತೀಯ ಕ್ರಿಕೆಟಿಗರು

    ಬೆಂಗಳೂರು: ಪದೇ ಪದೇ ಕಾಶ್ಮೀರ ವಿಷಯ ಕೆಣಕುತ್ತಿರುವ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ವಿರುದ್ಧ ಭಾರತೀಯ ಕ್ರಿಕೆಟಿಗರು ತಿರುಗಿ ಬಿದ್ದಿದ್ದಾರೆ. ಅಫ್ರಿದಿ ಹೆಸರು ಎತ್ತಿದರೂ ಕೆಂಡಕಾರುವ ಗೌತಮ್ ಗಂಭೀರ್ ಜತೆಗೆ ಈ ಬಾರಿ ಗಬ್ಬರ್ ಖ್ಯಾತಿಯ ಶಿಖರ್ ಧವನ್, ಹರ್ಭಜನ್ ಸಿಂಗ್ ಹಾಗೂ ಸುರೇಶ್ ರೈನಾ ಕೂಡ ಧ್ವನಿಗೂಡಿಸಿದ್ದಾರೆ.

    ಇದನ್ನೂ ಓದಿ:ಪತ್ನಿಯಿಂದ ಹೇರ್‌ಕಟ್ ಮಾಡಿಸಿಕೊಳ್ಳಲು ಎದೆಗಾರಿಕೆ ಬೇಕೆಂದ ಪೂಜಾರ!

    16 ವರ್ಷದ ಬಾಲಕನಿಗೆ ಹೋಲಿಸಿದ ಗಂಭೀರ್ !
    ಅಫ್ರಿದಿ ಒಂದು ರೀತಿ 16 ವರ್ಷದ ಬಾಲಕನಿದ್ದಂತೆ. ಇಡೀ ವಿಶ್ವವೇ ಕರೊನಾ ವೈರಸ್ ಭೀತಿಯಿಂದ ತತ್ತರಿಸುತ್ತಿದ್ದರೆ, ಈತನಿಗೆ ಕಾಶ್ಮೀರ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವುದೇ ಕೆಲಸ. ಇಂಥ ನೀಚ ಹೇಳಿಕೆ ನೀಡುವ ಬದಲು, ನಿನ್ನ ದೇಶದಲ್ಲಿರುವ ಬಡವರಿಗೆ ಸಹಾಯ ಮಾಡು ಎಂದಿದ್ದಾರೆ. ಟೀಕಿಸುವುದರಿಂದ ಪ್ರಸಿದ್ಧಿ ಪಡೆಯುವುದಿಲ್ಲ, ನೀನು ಜನಪ್ರಿಯತೆ ಸಾಧಿಸಬೇಕಾದರೆ, ಭಾರತ, ಭಾರತದ ಪ್ರಧಾನ ಮಂತ್ರಿಗಳ ಬಗ್ಗೆ ಮಾತನಾಡು ಎಂದಿದ್ದಾರೆ.

    ವಿಫಲ ರಾಷ್ಟ್ರದ ನಾಯಕ
    ಗಂಭೀರ್ ಮಾತಿಗೆ ಧ್ವನಿ ಗೂಡಿಸಿರುವ ಸುರೇಶ್ ರೈನಾ, ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ. ನಿಮ್ಮದು ವಿಫಲ ದೇಶ. ಏಕೆ ಭಾರತದ ಸಹವಾಸ ನಿಮಗೆ ಎಂದಿದ್ದಾರೆ. ಜತೆಗೆ ಕಾಶ್ಮೀರವನ್ನು ಅದರ ಪಾಡಿಗೆ ಅದನ್ನು ಬಿಟ್ಟುಬಿಡಿ. ನಾನೊಬ್ಬ ಹೆಮ್ಮೆಯ ಕಾಶ್ಮೀರಿಗನಾಗಿ ಈ ಮಾತನ್ನು ಹೇಳುತ್ತಿರುವೆ. ಹೈ ಹಿಂದ್ ಎಂದು ಕಾಶ್ಮೀರಿ ಪಂಡಿತ ರೈನಾ ಟ್ವೀಟ್ ಮಾಡಿದ್ದಾರೆ.

    ನೆರವು ನೀಡಲು ಹೇಳಿ ತಪ್ಪು ಮಾಡಿದೆವು ಎಂದ ಭಜ್ಜಿ
    ಕರೊನಾ ವೈರಸ್ ಭೀತಿಯಿಂದ ತೊಂದರೆಗೆ ಸಿಲುಕಿರುವ ಜನರಿಗೆ ಸಹಾಯ ಮಾಡುವ ಸಲುವಾಗಿ ಅಫ್ರಿದಿ ೌಂಡೇಷನ್‌ಗೆ ನೆರವು ನೀಡಲು ಹೇಳಿ ತಪ್ಪು ಮಾಡಿದೇವು ಎಂದು ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ. ನಿಜಕ್ಕೂ ಬೇಸರವಾಗುತ್ತಿದೆ. ಅಫ್ರಿದಿಯಿಂದ ಆಕ್ಷೇಪಾರ್ಹ ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದು ಭಜ್ಜಿ ಹೇಳಿದ್ದಾರೆ. ಜತೆಗೆ ಶಿಖರ್ ಧವನ್ ಕೂಡ ಅಫ್ರಿದಿ ಹೇಳಿಕೆಯನ್ನು ಬಲವಾಗಿ ಖಂಡಿಸಿದ್ದು, ಕರೊನಾ ವೈರಸ್ ಎಂಬ ಮಹಾಮಾರಿ ಇಡೀ ವಿಶ್ವವನ್ನೇ ಕಾಡುತ್ತಿದ್ದರೂ ಇಂಥ ವೇಳೆಯಲ್ಲಿ ಇಂಥ ನೀಚ ಹೇಳಿಕೆ ಒಳ್ಳೆದಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಅಫ್ರಿದಿ ಹೇಳಿದ್ದೇನು…
    ಇತ್ತೀಚೆಗೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಅಫ್ರಿದಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಸೇನೆ ವಿರುದ್ಧ ಹೇಳಿಕೆ ನೀಡಿದ್ದರು. ಭಾರತ ಹೊಂದಿರುವ ಅಷ್ಟೇ ಸೇನಾ ಬಲವನ್ನು ಪಾಕ್ ಕೂಡ ಹೊಂದಿದೆ ಎಂದು ಹೇಳಿದ್ದರು. ಪಾಕ್ ಸೇನೆಯ ಕೈಗೊಂಬೆಯಂತೆ ಅವರು ಅಲ್ಲಿ ವರ್ತಿಸಿದ್ದರು.

    ಅಫ್ರಿದಿ ವಿರುದ್ಧ ತಿರುಗಿಬಿದ್ದ ಭಾರತೀಯ ಕ್ರಿಕೆಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts