More

    ಲೇಹ್​ ಮತ್ತು ಶ್ರೀನಗರ ನೆಲೆಗಳಿಗೆ ಯುದ್ಧವಿಮಾನಗಳನ್ನು ರವಾನಿಸಿದ ಭಾರತ

    ನವದೆಹಲಿ: ಲಡಾಖ್​ ಪೂರ್ವಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವಂತೆ ಭಾರತೀಯ ವಾಯುಪಡೆಯ ಮುಖ್ಯಸ್ಥ ಆರ್​.ಕೆ.ಎಸ್​. ಬಹಾದ್ದೂರಿಯಾ ಲೇಹ್​ ಮತ್ತು ಶ್ರೀನಗರದಲ್ಲಿರುವ ಸೇನಾಪಡೆಯ ವಾಯುನೆಲೆಗಳಿಗೆ ದಿಢೀರ್​ ಭೇಟಿ ನೀಡಿ, ಸನ್ನದ್ಧತೆಯ ಕುರಿತು ಮಾಹಿತಿ ಪಡೆದುಕೊಂಡರು.

    ಲೇಹ್​ ಮತ್ತು ಶ್ರೀನಗರ ವಾಯುನೆಲೆಗಳು ಲಡಾಖ್​ನ ಪೂರ್ವ ಭಾಗಕ್ಕೆ ತುಂಬಾ ಸಮೀಪದಲ್ಲಿವೆ. ಚೀನಾದಿಂದ ಆಕ್ರಮಣವಾದಲ್ಲಿ ತಕ್ಷಣವೇ ರಣರಂಗಕ್ಕೆ ಯುದ್ಧವಿಮಾನಗಳನ್ನು ರವಾನಿಸಲು ಅನುಕೂಲವಾಗಲಿದೆ.

    ವಾಯುಪಡೆ ಮುಖ್ಯಸ್ಥರು ಜೂ.17ರಂದು ಶ್ರೀನಗರ ಮತ್ತು ಜೂ.18ರಂದು ಲೇಹ್​ ವಾಯುನೆಲೆಗಳಿಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಆದರೆ, ಇದನ್ನು ಖಚಿತಪಡಿಸಲು ಭಾರತೀಯ ವಾಯುಪಡೆ ವಕ್ತಾರ ವಿಂಗ್​ ಕಮಾಂಡರ್​ ಇಂದ್ರಾನಿಲ್​ ನಂದಿ ನಿರಾಕರಿಸಿದ್ದಾರೆ.

    ಇದನ್ನೂ ಓದಿ: ಘರ್ಷಣೆ ನಡುವೆಯೇ ಕಾಮಗಾರಿ; ಸಿದ್ಧವಾಯಿತು ಗಲ್ವಾನ್​ ನದಿಯ ಸೇತುವೆ

    ಗಲ್ವಾನ್​ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಘರ್ಷಣೆ ಉಂಟಾದ ನಂತರದಲ್ಲಿ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಈ ಎರಡು ವಾಯುನೆಲೆಗಳಿಗೆ ವಾಯುಪಡೆ ಮುಖ್ಯಸ್ಥರನ್ನು ರವಾನಿಸಲು ಸರ್ಕಾರ ನಿರ್ಧರಿಸಿತು. ಅದಂತೆ ಅವರು ಅಲ್ಲಿಗೆ ಭೇಟಿ ನೀಡಿದರು ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

    ಯುದ್ಧವಿಮಾನಗಳು, ಹೆಲಿಕಾಪ್ಟರ್​ಗಳ ರವಾನೆ: ವಾಸ್ತವ ಗಡಿರೇಖೆ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಭಾರತ ಸುಖೋಯಿ-30ಎಂಕೆಐ, ಮಿರಾಜ್​ 2000 ಮತ್ತು ಜಾಗ್ವಾರ್​ ಯುದ್ಧವಿಮಾನಗಳನ್ನು ಲೇಹ್​ ಮತ್ತು ಶ್ರೀನಗರ ವಾಯುನೆಲೆಗಳಲ್ಲಿ ನೆಲಗೊಳಿಸಿದೆ. ತುರ್ತು ಅಗತ್ಯ ಬಿದ್ದಲ್ಲಿ ಅವುಗಳನ್ನು ಗಡಿ ಪ್ರದೇಶಕ್ಕೆ ರವಾನಿಸಲು ಅನುಕೂಲವಾಗುವಂತೆ ಅವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

    ಹೊಸದಾಗಿ ಖರೀದಿಸಲಾಗಿರುವ ಅಮೆರಿಕದ ಅಪಾಚೆ ಯುದ್ಧಹೆಲಿಕಾಪ್ಟರ್​ಗಳನ್ನು ಲಡಾಖ್​ನಲ್ಲಿ ನೆಲೆಗೊಳಿಸಲಾಗಿದೆ. ಚಿನೋಕ್​ ಹೆಲಿಕಾಪ್ಟರ್​ಗಳನ್ನು ಲೇಹ್​ ವಾಯುನೆಲೆಯಲ್ಲಿ ನೆಲೆಗೊಳಿಸಲಾಗಿದೆ ಎಂದು ಹೇಳಲಾಗಿದೆ.

    ಅಭಿನವ್​ ಮೇಲೆ ಮಾನನಷ್ಟ ಕೇಸ್​ ಹಾಕಿದ ಸಲ್ಮಾನ್​ ಸಹೋದರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts