More

    ಘರ್ಷಣೆ ನಡುವೆಯೇ ಕಾಮಗಾರಿ; ಸಿದ್ಧವಾಯಿತು ಗಲ್ವಾನ್​ ನದಿಯ ಸೇತುವೆ

    ನವದೆಹಲಿ: ಲಡಾಖ್​ನ ಪೂರ್ವಭಾಗದಲ್ಲಿ ಚೀನಾ ಯೋಧರ ಜತೆಗಿನ ಘರ್ಷಣೆಯ ನಡುವೆಯೇ ಕಾಮಗಾರಿ ಮುಂದುವರಿಸಿದ್ದ ಭಾರತೀಯ ಸೇನಾಪಡೆ ಗಲ್ವಾನ್​ ನದಿಗೆ ಅಡ್ಡಲಾಗಿ ಸೇತುವೆಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ.

    ಅಂದಾಜು 60 ಮೀಟರ್​ ಉದ್ದವಿರುವ ಈ ಸೇತುವೆ ಅತ್ಯಂತ ಶೀತಮಯ ಪರ್ವತಶ್ರೇಣಿಗಳನ್ನು ಹಾದು ಹೋಗಿ ವ್ಯೂಹಾತ್ಮಕವಾಗಿ ಅತ್ಯಂತ ಪ್ರಾಮುಖ್ಯತೆ ಹೊಂದಿರುವ ಡರ್ಬೂಕ್​ನಿಂದ ದೌಲತ್​ ಬೇಗ್​ ಓಲ್ಡೀವರೆಗಿನ ಪ್ರದೇಶವನ್ನು ರಕ್ಷಿಸಿಕೊಳ್ಳಲು ಹಾಗೂ ಅಗತ್ಯ ಬಿದ್ದಾಗ ಯುದ್ಧೋಪಕರಣಗಳು ಮತ್ತು ಯೋಧರನ್ನು ಮುಂಚೂಣಿ ನೆಲೆಗಳಿಗೆ ತ್ವರಿತವಾಗಿ ಸಾಗಿಸಲು ಅನುಕೂಲ ಮಾಡಿಕೊಡುತ್ತದೆ.

    ನಾಲ್ಕು ಕಮಾನುಗಳನ್ನು ಹೊಂದಿರುವ ಈ ಸೇತುವೆಯು ಶಯಾಕ್​ ಮತ್ತು ಗಲ್ವಾನ್​ ನದಿಗಳ ಸಂಗಮದಿಂದ ಮೂರು ಕಿ.ಮೀ. ಪೂರ್ವದಲ್ಲಿ ಸ್ಥಿತವಾಗಿದೆ. ವಿವಾದಕ್ಕೆ ಕಾರಣವಾಗಿರುವ ಪೆಟ್ರೋಲಿಂಗ್​ ಪಾಯಿಂಟ್​ 14ರಿಂದ 2 ಕಿ.ಮೀ. ಪೂರ್ವದಲ್ಲಿರುವ ಬೈಲಿ ಸೇತುವೆಗೆ ಸಮೀಪದಲ್ಲಿದೆ.

    ಇದನ್ನೂ ಓದಿ: ಇಬ್ಬರು ಮೇಜರ್​,​ 10 ಯೋಧರ ಬಿಡುಗಡೆ ಮಾಡಿದ ಚೀನಾ?

    ಜೂ.15ರಂದು ಇದೇ ಪಾಯಿಂಟ್​ 14ರಲ್ಲಿ ಭಾರತ ಮತ್ತು ಚೀನಾ ಯೋಧರ ನಡುವಿನ ಘರ್ಷಣೆ ನಡೆದಿತ್ತು. ಮುಖ್ಯ ನದಿಯೊಂದಿಗೆ ಗಲ್ವಾನ್​ ನದಿ ಸೇರ್ಪಡೆಗೊಳ್ಳುವ ‘ವೈ’ ಪ್ರದೇಶಕ್ಕೆ ಈ ಸೇತುವೆ ತುಂಬಾ ಹತ್ತಿರದಲ್ಲಿದೆ. ಎರಡು ನದಿಗಳು ಸಂಗಮಿಸುವ ಸ್ಥಳದಲ್ಲೇ ಭಾರತದ 120 ಕಿ.ಮೀ. ಕ್ಯಾಂಪ್​ ಇದ್ದು, ಡಿಎಸ್​ಡಿಬಿಒ ರಸ್ತೆಗೆ ಹತ್ತಿರದಲ್ಲಿದೆ.

    ಭಾರತದ ಈ ಸೇತುವೆ ನಿರ್ಮಾಣ ಕಾರ್ಯದಿಂದಾಗಿಯೇ ಸಿಟ್ಟಾಗಿದ್ದ ಚೀನಾ ಲಡಾಖ್​ ಬಿಕ್ಕಟ್ಟನ್ನು ಸೃಷ್ಟಿಸಿತ್ತು. ಈ ಪ್ರದೇಶ ತನಗೆ ಸೇರಿದ್ದು ಎಂದು ಉತ್ಪ್ರೇಕ್ಷಿತ ಕಥೆಗಳನ್ನು ಕಟ್ಟಿದ್ದ ತನ್ನ ಯೋಧರ ಮೂಲಕ ಭಾರತದ ವ್ಯಾಪ್ತಿಯ ಪ್ರದೇಶಗಳನ್ನು ಅತಿಕ್ರಮಿಸಿತ್ತು.

    ಗುರುವಾರದ ವೇಳೆಗೆ ಈ ಸೇತುವೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಚೀನಾದ ಅಡ್ಡಿಯ ಹೊರತಾಗಿಯೂ ಬಾರ್ಡರ್​ ರೋರ್ಡ್ಸ್​ ಆರ್ಗನೈಜೇಷನ್​ (ಬಿಆರ್​ಒ) ಯೋಧರು ಕಾಮಗಾರಿಯನ್ನು ಮುಂದುವರಿಸಿ, ನಿಗದಿತ ಸಮಯದಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಿದರು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ಚೀನಾ ಗಲಾಟೆ: ರಾಮಮಂದಿರ ನಿರ್ಮಾಣ ತಾತ್ಕಾಲಿಕ ಸ್ಥಗಿತ

    ಇಡೀ ಗಲ್ವಾನ್​ ನದಿ ಕಣಿವೆ ತನ್ನದೆಂದು ಚೀನಾ ಹೇಳಿಕೊಳ್ಳಲು ಮುಖ್ಯವಾದ ಕಾರಣವಿದೆ. ಈ ಪ್ರದೇಶವನ್ನು ತನ್ನದಾಗಿಸಿಕೊಂಡಲ್ಲಿ ಶಯಾಕ್​ ನದಿವರೆಗಿನ ಭಾರತದ ಪ್ರದೇಶಕ್ಕೆ ಪ್ರವೇಶಿಸಲು ಭಾರತೀಯ ಸೇನಾಪಡೆಗೆ ಸುಲಭವಾಗಿ ಅಡ್ಡಿಪಡಿಸಬಹುದಾಗಿದೆ. ಇದು ಸಾಧ್ಯವಾದಲ್ಲಿ ಯುದ್ಧದ ಸಂದರ್ಭದಲ್ಲಿ ಡಿಎಸ್​ಡಿಬಿಒ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಿ, ದೌಲತ್​ ಬೇಗ್​ ಓಲ್ಡೀಗೆ ಭಾರತೀಯ ಸಂಪರ್ಕವನ್ನೇ ಕಡಿಯಬಹುದಾಗಿದೆ. ಜತೆಗೆ ಡಿಬಿಒಗಿಂತ ಮೊದಲು ಬರುವ ಭಾರತದ ಕೊನೆಯ ಗ್ರಾಮ ಮರ್ಗೋ ಬಳಿ ಮತ್ತೊಂದು ರಸ್ತೆಯನ್ನು ತೆರೆದು, ಪಾಕಿಸ್ತಾನದ ಸೇನಾಪಡೆಗೆ ಸುಲಭವಾಗಿ ಪ್ರವೇಶ ದೊರಕಿಸಿಕೊಡಬಹುದಾಗಿದೆ. ಇದರಿಂದಾಗಿ ಭಾರತೀಯ ಸೇನಾಪಡೆ ಮೇಲೆ ಏಕಕಾಲಕ್ಕೆ ಎರಡು ಕಡೆಯಿಂದ ದಾಳಿ ಮಾಡಿ, ಹಣಿಯಲು ಅನುಕೂಲವಾಗುತ್ತದೆ ಎಂಬುದು ಚೀನಾದ ಸಂಚಾಗಿದೆ.

    24 ಗಂಟೆ ಒಳಗೆ ಮುಗಿಸ್ತೇನೆ ಎಂದು ಎಸ್​ಪಿಗೆ ಬೆದರಿಕೆ ಹಾಕಿದ್ದ ಕೊರಂಗು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts