More

    ಕರೋನಾ ಹರಡಿದ್ರೆ ಜೋಕೆ!: ಬಂಧಿಸುವುದಕ್ಕೂ ಕಾನೂನಿನಲ್ಲಿ ಅವಕಾಶವಿದೆ ಎಚ್ಚರಿಕೆ ಎಂದ ಬೆಂಗಳೂರು ಪೊಲೀಸ್ ಕಮಿಷನರ್​

    ಬೆಂಗಳೂರು: ಕರೋನಾ ವೈರಸ್ Covid 19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಪೊಲೀಸ್ ಇಲಾಖೆ ನಾನಾ ರೀತಿಯಲ್ಲಿ ಮಾಡುತ್ತಿದೆ. ಸಂಚಾರಿ ಪೊಲೀಸರೂ ಇದರಲ್ಲಿ ಭಾಗಿಯಾಗಿದ್ದು, ಟ್ರಾಫಿಕ್ ಸಿಗ್ನಲ್​ಗಳಲ್ಲಿ ಶುಚಿತ್ವ ಕಾಪಾಡುವ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

    ಬೆಂಗಳೂರು ನಗರದಲ್ಲಿ ಈ ಕೆಲಸ ಪ್ರಶಂಸನೀಯ ರೀತಿಯಲ್ಲಿ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು, ಟ್ವೀಟ್ ಅಪ್ಡೇಟ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ. ಜನರಿಂದಲೂ ಪೊಲೀಸರ ಈ ಕಾರ್ಯಗಳಿಗೆ ಮೆಚ್ಚುಗೆ, ಪ್ರಶಂಸೆ ವ್ಯಕ್ತವಾಗಿದೆ.

    ಈ ನಡುವೆ ಬೆಂಗಳೂರಿನಲ್ಲಿ ರೈಲ್ವೆ ಉದ್ಯೋಗಿಯೊಬ್ಬರು ಜರ್ಮನಿಯಿಂದ ಹಿಂದಿರುಗಿದ ತಮ್ಮ ಪುತ್ರನನ್ನು ರಕ್ಷಿಸುವುದಕ್ಕೆ ರೈಲ್ವೆ ರೆಸ್ಟ್ ಹೌಸ್ ಬಳಸಿಕೊಂಡು ಅಲ್ಲಿದ್ದ ಎಲ್ಲರಿಗೂ ಅಪಾಯ ತಂದೊಡ್ಡಿದ ಸನ್ನಿವೇಶ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಆಕೆ ಉದ್ಯೋಗದಿಂದ ಅಮಾನತುಗೊಂಡಿದ್ದಾರೆ. ಆದಾಗ್ಯೂ, ಇಂತಹ ಸನ್ನಿವೇಶ ಬೇರೆ ಬೇರೆ ಕಡೆ ಉಂಟಾಗುತ್ತಿದ್ದು, ಅದನ್ನು ತಡೆಯುವ ಉದ್ದೇಶದಿಂದ ನಗರ ಪೊಲೀಸ್ ಆಯುಕ್ತರು ಕಟ್ಟು ನಿಟ್ಟಿನ ಎಚ್ಚರಿಕೆಯೊಂದನ್ನು ರವಾನಿಸಿದ್ದಾರೆ.

    ಕರೊನಾ ಸೋಂಕು ಪೀಡಿತ ರಾಷ್ಟ್ರಗಳಿಂದ ವಾಪಸ್ ಬಂದವರು ಮತ್ತು ಅವರ ಜತೆಗಿರುವವರು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೇ ಹೋದರೆ ಅಂಥವರನ್ನು ಕ್ರಿಮಿನಲ್​ಗಳು ಎಂದು ಪರಿಗಣಿಸಬಹುದು. ಸೋಂಕನ್ನು ಬೇರೆಯವರಿಗೆ ಹರಡುವ ಅಂಥವರ ವಿರುದ್ಧ IPC ಸೆಕ್ಷನ್ 269, 270, 31 ಎಲ್ ಪೊಲೀಸ್ ಆಕ್ಟ್ ಪ್ರಕಾರ ಸೋಂಕನ್ನು ಬೇರೆಯವರಿಗೆ ಹರಡಿಸುವವರನ್ನು ಬಂಧಿಸಲು ಅವಕಾಶವಿದೆ ಎಂದು ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಸ್ಪಷ್ಟವಾಗಿ ಎಚ್ಚರಿಸಿದ್ದಾರೆ.

    ಜನತಾ ಕರ್ಫ್ಯೂ ಎಂದರೇನು? ಇದು ಹೇಗಿರುತ್ತದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts