More

    ಭಾರತ ಮಹಿಳೆಯರಿಗೆ ಸತತ 3ನೇ ಸೋಲು: ಸೋಲಿನ ನಡುವೆಯೂ ದೀಪ್ತಿ ಶರ್ಮ ಶ್ರೇಷ್ಠ ಸಾಧನೆ

    ಮುಂಬೈ: ಯುವ ಆರಂಭಿಕ ಬ್ಯಾಟುಗಾರ್ತಿ ಪೋಬಿ ಲಿಚ್‌ಫೀಲ್ಡ್ (119 ರನ್, 125 ಎಸೆತ, 16 ಬೌಂಡರಿ, 1 ಸಿಕ್ಸರ್) ಆಕರ್ಷಕ ಶತಕದ ಎದುರು ಮಂಕಾದ ಭಾರತ ತಂಡ ಮಹಿಳೆಯರ ಏಕದಿನ ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಎದುರು 190 ರನ್‌ಗಳಿಂದ ಹೀನಾಯ ಸೋಲು ಕಂಡಿದೆ. ಇದರೊಂದಿಗೆ ಹರ್ಮಾನ್‌ಪ್ರೀತ್ ಕೌರ್ ಬಳಗ ಮೂರು ಪಂದ್ಯಗಳ ಸರಣಿಯಲ್ಲಿ 0-3 ವೈಟ್‌ವಾಷ್ ಮುಖಭಂಗ ಅನುಭವಿಸಿದೆ.

    ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆಸೀಸ್, ನಾಯಕಿ ಅಲಿಸಾ ಹೀಲಿ (82) ಹಾಗೂ ಲಿಚ್‌ಫೀಲ್ಡ್ ಮೊದಲ ವಿಕೆಟ್‌ಗೆ ಹಾಕಿಕೊಟ್ಟ 189 ರನ್‌ಗಳ ಭದ್ರ ಅಡಿಪಾಯದ ನೆರವಿನಿಂದ 7 ವಿಕೆಟ್‌ಗೆ 338 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಇದು ಭಾರತದ ವಿರುದ್ಧ ತಂಡವೊಂದರ ಗರಿಷ್ಠ ಮೊತ್ತವಾಗಿದೆ. ಪ್ರತಿಯಾಗಿ ನೀರಸ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ, 32.4 ಓವರ್‌ಗಳಲ್ಲಿ 148 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಆಸೀಸ್ ಎದುರು ತವರಿನಲ್ಲಿ ಸತತ 10ನೇ ಏಕದಿನ ಪಂದ್ಯದಲ್ಲಿ ಸೋಲುಂಡಿತು.

    ಆಸ್ಟ್ರೇಲಿಯಾ: 7 ವಿಕೆಟ್‌ಗೆ 337 (ಅಲಿಸಾ ಹೀಲಿ 83, ಲಿಚ್‌ಫೀಲ್ಡ್ 119, ಗಾರ್ಡ್‌ನರ್ 30, ಅನ್ನಾಬೆಲ್ 23, ಅಲಾನ್ ಕಿಂಗ್ 26*, ಶ್ರೇಯಾಂಕಾ ಪಾಟೀಲ್ 57ಕ್ಕೆ3, ಅಮನ್ ಜೋತ್ 70ಕ್ಕೆ2).
    ಭಾರತ: 32.4 ಓವರ್‌ಗಳಲ್ಲಿ 148 (ಸ್ಮತಿ 29, ರಿಚಾ 19, ಹರ್ಮಾನ್‌ಪ್ರೀತ್ 3, ಜೆಮೀಮಾ 25, ದೀಪ್ತಿ 25*, ಜಾರ್ಜಿಯಾ 21ಕ್ಕೆ 3, ಅನ್ನಾಬೆಲ್ 9ಕ್ಕೆ2). ಪಂದ್ಯಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ: ಪೋಬಿ ಲಿಚ್‌ಫೀಲ್ಡ್.

    4: ದೀಪ್ತಿ ಶರ್ಮ ಏಕದಿನದಲ್ಲಿ ಭಾರತ ಮಹಿಳಾ ತಂಡದ ಪರ 100 ವಿಕೆಟ್ ಕಬಳಿಸಿದ 4ನೇ ಬೌಲರ್ ಎನಿಸಿದರು. ಜೂಲನ್ ಗೋಸ್ವಾಮಿ (255), ನೀತು ಡೇವಿಡ್(141), ನೂಶಿನ್ ಆಲ್ ಖಾದಿರ್ (100) ಹಿಂದಿನ ಸಾಧಕರು.

    1: ಭಾರತದ ಎದುರು ಏಕದಿನದಲ್ಲಿ ಆಸ್ಟ್ರೇಲಿಯಾ ತಂಡದ ಗರಿಷ್ಠ ಮೊತ್ತ ಇದಾಗಿದೆ. 2018ರಲ್ಲಿ 332 ರನ್ ಗಳಿಸಿದ್ದು ಹಿಂದಿನ ದಾಖಲೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts