More

    ಭಾರತದಲ್ಲಿ ಸೈಬರ್ ಕ್ರೈಂ 500% ಹೆಚ್ಚಳ: ಎನ್​ಎಸ್​ಎ ಅಜಿತ್ ದೋವಲ್ ಕಳವಳ

    ನವದೆಹಲಿ: ಭಾರತದಲ್ಲಿ ಸೈಬರ್ ಕ್ರೈಂ ಪ್ರಮಾಣ ಶೇಕಡ 500 ಹೆಚ್ಚಳ ಕಂಡಿದೆ. ಇದಕ್ಕೆ ಸೀಮಿತ ಜಾಗೃತಿ ಮತ್ತು ಕಳಪೆ ಸೈಬರ್​ ಹೈಜೀನ್ ಕಾರಣ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್​ಎಸ್​ಎ) ಅಜಿತ್ ದೋವರ್ ಕಳವಳ ವ್ಯಕ್ತಪಡಿಸಿದ್ದಾರೆ. ಅವರು, ಕೊಕೋನ್​ 2020 ಎಂಬ ಎರಡು ದಿನಗಳ ಸೈಬರ್ ಕಾನ್ಫರೆನ್ಸ್​ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಮಾತನಾಡಿದರು. ದೇಶದ ಸೈಬರ್​ಸ್ಪೇಸನ್ನು ರಕ್ಷಿಸುವುದಕ್ಕಾಗಿ ಭಾರತ ಸರ್ಕಾರ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ.

    ನ್ಯಾಷನಲ್ ಸೈಬರ್ ಸೆಕ್ಯುರಿಟಿ ಸ್ಟ್ರಾಟಜಿ 2020 ಯ ಮೂರು ಆಧಾರಸ್ತಂಭಗಳ ಮೂಲ ಸೈಬರ್ ಸೆಕ್ಯುರಿಟಿಯ ಎಲ್ಲ ವ್ಯಾಪ್ತಿಯ ಮೇಲೂ ಗಮನಕೇಂದ್ರೀಕರಿಸಲಾಗಿದೆ. ನಗದು ವಹಿವಾಟು ಕಡಿಮೆಯಾದ ಕಾರಣ ಡಿಜಿಟಲ್ ಪಾವತಿಯ ಮೇಲಿನ ಅವಲಂಬನೆ ಬಹಳ ಹೆಚ್ಚಾಗಿದೆ. ಅಲ್ಲದೆ, ಆನ್​ಲೈನ್​ ಮೂಲಕ ಸಾಕಷ್ಟು ಡೇಟಾ ಶೇರಿಂಗ್ ಕೂಡ ಆಗುತ್ತಿದೆ. ಅದೇ ರೀತಿ ಸೋಷಿಯಲ್ ಮೀಡಿಯಾದಲ್ಲಿನ ಉಪಸ್ಥಿತಿಯೂ ಹೆಚ್ಚಾಗಿದೆ.

    ಇದನ್ನೂ ಓದಿ: ಭಾರತಕ್ಕೆ ಸೈಬರ್ ಶಾಕ್: ಮತ್ತೆ ಟಾರ್ಗೆಟ್ ಪ್ರಧಾನಿ? ಚೀನಾ ಮೇಲೆ ಗುಮಾನಿ

    ಆದಾಗ್ಯೂ, ನಾವು ನಮ್ಮ ವ್ಯಾಪ್ತಿಯಲ್ಲಿ ಸೈಬರ್ ಸೆಕ್ಯುರಿಟಿ ಕಾಪಾಡಲು ಏನೆಲ್ಲ ಕ್ರಮ ತೆಗೆದುಕೊಳ್ಳಬೇಕೋ ತಗೊಂಡಿದ್ದೇವೆ. ಹೀಗಿದ್ದಾಗ್ಯೂ, ಸೀಮಿತ ತಿಳಿವಳಿಕೆ ಮನತ್ತು ಕಳಪೆ ಸೈಬರ್ ಹೈಜಿನ್ ಕಾರಣಕ್ಕೆ ಸೈಬರ್ ಕ್ರೈಂಗಳ ಸಂಖ್ಯೆ ಶೇಕಡ 500 ಹೆಚ್ಚಳವಾಗಿದೆ ಎಂದು ದೋವಲ್ ಕಳವಳ ವ್ಯಕ್ತಪಡಿಸಿದರು. (ಏಜೆನ್ಸೀಸ್​)

    ಒಂದೇ ಒಂದು ಕೂದಲನ್ನೂ ಕೊಂಕಿಸೋಕೆ ಆಗಲ್ಲ, ಏನೂ ಬಹಿರಂಗವಾಗಲ್ಲ- ಕೇರಳ ಸಚಿವ ಕೆ.ಟಿ.ಜಲೀಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts