More

    ಭಾರತ-ವಿಂಡೀಸ್ ಏಕದಿನಕ್ಕೆ ಖಾಲಿ ಸ್ಟೇಡಿಯಂ; ಟಿ20ಗೆ ಶೇ. 75 ಪ್ರೇಕ್ಷಕರು!

    ಅಹಮದಾಬಾದ್/ಕೋಲ್ಕತ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡ ಆಡಲಿರುವ ಸೀಮಿತ ಓವರ್ ಕ್ರಿಕೆಟ್ ಸರಣಿಗೆ ಮುನ್ನ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ-ಕಹಿ ಸುದ್ದಿಗಳು ಲಭಿಸಿವೆ. ಫೆಬ್ರವರಿ 6ರಿಂದ 11ರವರೆಗೆ ಅಹಮದಾಬಾದ್‌ನಲ್ಲಿ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿ ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ನಂತರ ಫೆಬ್ರವರಿ 16ರಿಂದ 20ರವರೆಗೆ ಕೋಲ್ಕತದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ 3 ಪಂದ್ಯಗಳ ಟಿ20 ಸರಣಿಗೆ ಕರೊನಾ ಭೀತಿಯ ನಡುವೆಯೂ ಶೇ. 75 ಪ್ರೇಕ್ಷಕರು ಹಾಜರಾಗಲು ಅವಕಾಶ ಲಭಿಸಲಿದೆ.

    ಪಶ್ಚಿಮ ಬಂಗಾಳ ಸರ್ಕಾರ ಶೇ. 75 ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲು ಸೋಮವಾರ ನಿರ್ಧರಿಸಿದೆ. ಇದರನ್ವಯ ಟಿ20 ಪಂದ್ಯಗಳನ್ನು ಸುಮಾರು 50 ಸಾವಿರ ಪ್ರೇಕ್ಷಕರು ವೀಕ್ಷಿಸುವ ನಿರೀಕ್ಷೆ ಇದೆ. ಕಳೆದ ವರ್ಷ ನವೆಂಬರ್‌ನಲ್ಲಿ ಕೋಲ್ಕತದಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧ ಟಿ20 ಪಂದ್ಯಕ್ಕೆ ಶೇ. 70 ಪ್ರೇಕ್ಷಕರು ಹಾಜರಾಗಿದ್ದರು.

    ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಗೆ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಗುಜರಾತ್ ಕ್ರಿಕೆಟ್ ಸಂಸ್ಥೆ (ಜಿಸಿಎ) ಮಂಗಳವಾರ ಸ್ಪಷ್ಟಪಡಿಸಿದೆ. ಇದರಿಂದಾಗಿ ಸರಣಿಯ ಮೊದಲ ಪಂದ್ಯ ಅಂದರೆ ಭಾರತ ತಂಡ ಆಡಲಿರುವ 1000ನೇ ಏಕದಿನ ಪಂದ್ಯ ಪ್ರೇಕ್ಷಕರ ಹಾಜರಿಯಿಂದ ವಂಚಿತವಾಗಲಿದೆ. ಸಾಂಕ್ರಾಮಿಕ ಪಿಡುಗಿನಿಂದ ಸದ್ಯ ಎದುರಾಗಿರುವ ಸನ್ನಿವೇಶದಲ್ಲಿ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುತ್ತಿಲ್ಲ ಎಂದು ಜಿಸಿಎ ತಿಳಿಸಿದೆ.

    ಭಾರತಕ್ಕೆ ಸಾವಿರ ಒನ್‌ಡೇ ಸಂಭ್ರಮ, ವಿಂಡೀಸ್ ವಿರುದ್ಧದ ಮೊದಲ ಏಕದಿನದಲ್ಲಿ ಮೈಲಿಗಲ್ಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts