More

    ಭಾರತ-ಆಫ್ರಿಕಾ ಏಕದಿನ ಟಿಕೆಟ್​ ಸೇಲ್​ಗೆ ಕೊರೊನಾ ಹೊಡೆತ!

    ಧರ್ಮಶಾಲಾ: ದೇಶದೆಲ್ಲೆಡೆ ಕರೊನಾ ಭೀತಿ ಹೆಚ್ಚುತ್ತಿರುವ ನಡುವೆಯೂ ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿ ನಿಗದಿಯಂತೆಯೇ ನಡೆಯುತ್ತಿದ್ದರೂ, ಮೊದಲ ಏಕದಿನ ಪಂದ್ಯದ ಟಿಕೆಟ್ ಮಾರಾಟಕ್ಕೆ ವೈರಸ್ ಹರಡುವಿಕೆಯ ಭಯ ಹೊಡೆತ ನೀಡಿದೆ. ಗುರುವಾರ ನಡೆಯಲಿರುವ ಪಂದ್ಯದ ಟಿಕೆಟ್ ಮಾರಾಟಕ್ಕೆ ನಿರೀಕ್ಷಿತ ರೀತಿಯ ಸ್ಪಂದನೆ ದೊರೆತಿಲ್ಲ.

    20 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಎಚ್​ಪಿಸಿಎ ಕ್ರೀಡಾಂಗಣದ ಸುಮಾರು 12 ಸಾವಿರ ಟಿಕೆಟ್​ಗಳಷ್ಟೇ ಸದ್ಯ ಮಾರಾಟವಾಗಿವೆ. ಕರೊನಾ ಹರಡುವುದನ್ನು ತಡೆಯಲು ಜನರು ದೊಡ್ಡ ಗುಂಪುಗಳಲ್ಲಿ ಸೇರುವುದನ್ನು ಸಾಧ್ಯವಾದಷ್ಟು ತಡೆಗಟ್ಟಬೇಕು ಎಂದು ಆರೋಗ್ಯ ತಜ್ಞರು ಈಗಾಗಲೆ ಸೂಚಿಸಿದ್ದಾರೆ. ಹೀಗಾಗಿ ಜನರು ಪಂದ್ಯಕ್ಕೆ ಬರಲು ಹೆದರುತ್ತಿರಬಹುದು ಎನ್ನಲಾಗಿದೆ.

    ತಂಡಗಳ ಆಗಮನ: ದಕ್ಷಿಣ ಆಫ್ರಿಕಾ ತಂಡ ಸೋಮವಾರವೇ ಧರ್ಮಶಾಲಾಗೆ ಆಗಮಿಸಿದ್ದರೆ, ಭಾರತ ತಂಡದ ಆಟಗಾರರು ಮಂಗಳವಾರ ಇಲ್ಲಿಗೆ ಬಂದಿಳಿದರು. ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಕರೊನಾ ಮುನ್ನೆಚ್ಚರಿಕೆಯಾಗಿ ಮುಖಕ್ಕೆ ಮಾಸ್ಕ್ ಧರಿಸಿ ಧರ್ಮಶಾಲಾಗೆ ವಿಮಾನದಲ್ಲಿ ಪ್ರಯಾಣಿಸಿದ ಚಿತ್ರವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಸರಣಿಯ 2ನೇ ಪಂದ್ಯ ಲಖನೌ (ಮಾ. 15) ಮತ್ತು ಅಂತಿಮ ಪಂದ್ಯ ಕೋಲ್ಕತದಲ್ಲಿ (ಮಾ. 19) ನಡೆಯಲಿದೆ.

    ಮರುಕಳಿಸಿದ ಬಿಗ್ ಮ್ಯಾಚ್ ಶಾಪ; ಕಳೆದ 6 ವರ್ಷಗಳ ಐಸಿಸಿಯ ನಾಕೌಟ್ ಪಂದ್ಯಗಳಲ್ಲಿ ಭಾರತಕ್ಕೆ ಸೋಲಿನ ಅಪಖ್ಯಾತಿ 

    ವಿಶ್ವಕಪ್ ತಂಡದಲ್ಲಿ ಪೂನಂ; 12ನೇ ಆಟಗಾರ್ತಿಯಾಗಿ ಆಯ್ಕೆ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts