More

    ಅರುಣಾಚಲದ ಬಳಿ ಒಳ ನುಗ್ಗಲು ಬಂದ 300 ಚೀನಾ ಸೈನಿಕರ ಬೆಂಡೆತ್ತಿದ ಭಾರತೀಯ ಯೋಧರು…!

    ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಶುಕ್ರವಾರ (ಡಿ.9) ಚೀನಾದ ಸುಮಾರು 300 ಸೈನಿಕರು ಗಡಿ ಒಳಕ್ಕೆ ನುಗ್ಗುವುದಕ್ಕೆ ಭಾರಿ ತಯಾರಿ ನಡೆಸಿದ್ದರು. ಆದರೆ ಭಾರತೀಯ ಯೋಧರೂ ಉತ್ತಮವಾಗಿ ಸಿದ್ಧರಾಗುತ್ತಾರೆ ಎಂದು ಅವರು ನಿರೀಕ್ಷಿಸಿರಲಿಲ್ಲ. ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಮುಖಾಮುಖಿಯಲ್ಲಿ ಎರಡೂ ಕಡೆಯ ಸಿಬ್ಬಂದಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎರಡೂ ಕಡೆಯವರು ತಕ್ಷಣವೇ ಆ ಪ್ರದೇಶದಿಂದ ಹೊರ ಬಂದಿದ್ದಾರೆ.

    ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಶುಕ್ರವಾರ ನಡೆದ ಮುಖಾಮುಖಿಯಲಗಲಿ ಭಾರತೀಯ ಸೈನಿಕರು ಚೀನೀ ಸೈನಿಕರಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಈಗ ಬಂದಿರುವ ವರದಿಗಳ ಪ್ರಕಾರ ಭಾರತೀಯ ಯೋಧರಿಗಿಂತ ಚೀನಾದ ಸೈನಿಕರಲ್ಲಿ ಹೆಚ್ಚು ಗಾಯಗಳಾಗಿವೆ.

    ಘಟನೆಯ ನಂತರ, ತವಾಂಗ್​ ಪ್ರದೇಶದಲ್ಲಿ ಭಾರತದ ಕಮಾಂಡರ್ ಪುನಃ ಶಾಂತಿಯನ್ನು ಸ್ಥಾಪಿಸಲು ಪೂರ್ವಯೋಜಿತ ಕಾರ್ಯವಿಧಾನಗಳಿಗೆ ಅನುಗುಣವಾಗಿ ಸಮಸ್ಯೆಯನ್ನು ಚರ್ಚಿಸಲು ಚೀನಾದ ಸೈನಿಕರೊಂದಿಗೆ ಸಭೆಯನ್ನು ನಡೆಸಿದರು.

    ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನ ಎಲ್‌ಎಸಿಯ ಉದ್ದಕ್ಕೂ ಕೆಲವು ಪ್ರದೇಶಗಳಲ್ಲಿ ಗಡಿ ಸಮಸ್ಯೆಗಳಿವೆ. ಇಲ್ಲಿ ಎರಡೂ ಕಡೆಯವರು ಗಸ್ತು ತಿರುಗುತ್ತಾರೆ. ಈ ಗಡಿ ಸಮಸ್ಯೆ ಎದ್ದಿರುವುದು 2006 ರಿಂದ ಎನ್ನುವುದು ವಿಚಿತ್ರ ಸಂಗತಿ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts