More

    ಮೊದಲ ಪಂದ್ಯದ ಸೋಲಿನ ಮುಖಭಂಗಕ್ಕೆ ಭಾರತ ಪ್ರತೀಕಾರ: ಆಸಿಸ್​ ವಿರುದ್ಧ ಭರ್ಜರಿ ಜಯ, ಸರಣಿ ಸಮ, 3ನೇ ಪಂದ್ಯ ನಿರ್ಣಾಯಕ

    ರಾಜ್​ಕೋಟ್​: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​ ಕ್ರೀಡಾಂಗಣದಲ್ಲಿ ನಡೆದ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ 36 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದ್ದು, ಸರಣಿ ಗೆಲುವಿಗೆ ಮೂರನೇ ಪಂದ್ಯ ನಿರ್ಣಾಯಕವೆನಿಸಿದೆ.

    ಟೀಮ್​ ಇಂಡಿಯಾ ನೀಡಿದ್ದ 341 ರನ್​ ಗುರಿ ಬೆನ್ನತ್ತಿದ ಆಸಿಸ್​ ಪಡೆಗೆ ಡೇವಿಡ್​ ವಾರ್ನರ್​(15) ಆರಂಭಿಕ ಆಘಾತ ನೀಡಿದರು. ಬಳಿಕ ಬಂದ ಸ್ಟೀವ್​ ಸ್ಮಿತ್​ ನಾಯಕ ಆ್ಯರೂನ್​ ಫಿಂಚ್​ ಜತೆಗೂಡಿ ತಂಡಕ್ಕೆ ಚೇತರಿಕೆ ನೀಡಿದಾದರೂ 33 ರನ್​ ಗಳಿಸಿ ನಿಧಾನಗತಿಯಲ್ಲಿ ಬ್ಯಾಟ್​ ಬೀಸುತ್ತಿದ್ದ ಫಿಂಚ್​ ಸ್ಟಂಪ್​ ಔಟಾಗಿ ನಿರ್ಗಮಿಸಿದರು. ಬಳಿಕ ಮೈದಾನಕ್ಕಿಳಿದ ಮಾರ್ನಸ್​ ಲಬಸ್ಛಗ್ನೆ, ಸ್ಮಿತ್​ಗೆ ಸಾಥ್​ ನೀಡಿ ಉತ್ತಮ ಇನ್ನಿಂಗ್ಸ್​ ಕಟ್ಟಿದರು. ತಂಡದ ಮೊತ್ತವನ್ನು ನೂರೈವತ್ತರ ಗಡಿ ದಾಟಿಸಿ ಮುನ್ನುಗುತ್ತಿರುವಾಗ 46 ರನ್​ ಗಳಿಸಿದ್ದ ಲಬಸ್ಛಗ್ನೆ ಕ್ಯಾಚಿತ್ತು ನಿರ್ಗಮಿಸಿದರು. ಇದಾದ ಕೆಲವೇ ಕ್ಷಣಗಳಲ್ಲಿ ಅಲೆಕ್ಸ್​ ಕ್ಯಾರಿ (18) ಕೂಡ ಔಟಾದರು.

    ಇತ್ತ ಏಕಾಂಗಿಯಾಗಿ ಹೋರಾಡುತ್ತಿದ್ದ ಸ್ಟೀವ್​ ಸ್ಮಿತ್​ ತಂಡದ ಮೊತ್ತವನ್ನು 200ರ ಗಡಿ ದಾಟಿಸಿ ಶತಕದೆಡೆಗೆ ದಾಪುಗಾಲು ಇಡುತ್ತಿರುವಾಗ ಕುಲದೀಪ್​ ಯಾದವ್​ ಓವರ್​ನಲ್ಲಿ ಬೌಲ್ಡ್ ಆಗುವ ಮೂಲಕ ಎರಡು ರನ್​ ಅಂತರದಲ್ಲಿ ಸ್ಮಿತ್​(98) ಶತಕದಿಂದ ವಂಚಿತರಾದರು. ಇದರ ಬೆನಲ್ಲೇ ಅಸ್ಥಾನ್ ಅಗರ್​(25), ಪ್ಯಾಟ್​ ಕ್ಯುಮಿನ್ಸ್​(0), ಮಿಚೆಲ್​ ಸ್ಟಾರ್ಕ್​(6), ಆ್ಯಡಮ್​ ಝಂಪಾ(6) ರನ್​ ಗಳಿಸಿ ಔಟಾದರೆ, ಕೇನ್​ ರಿಚರ್ಡ್ಸನ್​ 24 ರನ್​ ಗಳಿಸಿ ಅಜೇಯರಾಗಿ ಉಳಿದರು.

    ಅಂತಿಮವಾಗಿ ಆಸಿಸ್​ ಪಡೆ 49.1 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 304 ರನ್​ ಗಳಿಸಲಷ್ಟೇ ಶಕ್ತವಾಯಿತು. ಮೊದಲ ಪಂದ್ಯದಲ್ಲಿ ಆಸಿಸ್​ ವಿರುದ್ಧ ಹೀನಾಯ ಸೋಲು ಅನುಭಿಸಿದ್ದ ಭಾರತ ಎರಡನೇ ಪಂದ್ಯದಲ್ಲಿ 36 ರನ್​ ಅಂತರದಲ್ಲಿ ಜಯಸಾಧಿಸುವ ಮೂಲಕ ಸರಣಿ ಸಮಬಲ ಸಾಧಿಸಿದೆ. ಇದೀಗ ಸರಣಿ ಗೆಲುವಿಗೆ ಮೂರನೇ ಪಂದ್ಯ ನಿರ್ಣಾಯಕವಾಗಿದೆ.

    ಟೀಮ್​ ಇಂಡಿಯಾ ಪರ ಮಹಮ್ಮದ್​ ಶಮಿ ಪ್ರಮುಖ 3 ವಿಕೆಟ್​ ಕಬಳಿಸಿ ಗಮನ ಸೆಳೆದರು. ಉಳಿದಂತೆ ನವದೀಪ್​ ಸೈನಿ, ರವೀಂದ್ರ ಜಡೇಜಾ ಮತ್ತು ಕುಲದೀಪ್​ ಯಾದವ್​ ತಲಾ ಎರಡು ವಿಕೆಟ್​ ಪಡೆದರೆ, ಜಸ್ಪ್ರಿತ್​ ಬೂಮ್ರಾ ಒಂದು ವಿಕೆಟ್​ಗೆ ತೃಪ್ತಿಪಟ್ಟರು. (ಏಜೆನ್ಸೀಸ್​)

    ಮೊದಲ ಏಕದಿನ ಪಂದ್ಯದ ಸೋಲಿನ ಕಹಿ: 2ನೇ ಪಂದ್ಯದಲ್ಲಿ ಆಸಿಸ್​ ಪಡೆಗೆ ಸವಾಲಿನ ಗುರಿ ನೀಡಿದ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts