More

    ಫಿಂಚ್​, ಸ್ಮಿತ್​ ಶತಕ: ಮೊದಲ ಏಕದಿನ ಪಂದ್ಯದಲ್ಲೇ ಭಾರತಕ್ಕೆ ಬೃಹತ್​ ಮೊತ್ತದ ಗುರಿ

    ಸಿಡ್ನಿ: ಕರೊನಾ ಕಾಲದ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ಭಾರತಕ್ಕೆ ಆತಿಥೇಯ ಆಸ್ಟ್ರೇಲಿಯಾ ತಂಡ ಭಾರಿ ಸವಾಲು ನೀಡಿದೆ. ಸಿಡ್ನಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಉಭಯ ತಂಡಗಳ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಆಸಿಸ್​ ಪಡೆ ಭಾರತಕ್ಕೆ 375 ರನ್​ಗಳ ಬೃಹತ್​ ಗುರಿ ನೀಡಿದೆ.

    ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಆಸಿಸ್​ ಪಡೆ ನಿಗದಿತ 50 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 374 ರನ್​ ಕಲೆಹಾಕಿದೆ. ತಂಡಕ್ಕೆ ಡೇವಿಡ್​ ವಾರ್ನರ್​ (69), ನಾಯಕ ಆ್ಯರೂನ್​ ಫಿಂಚ್​ (114) ಉತ್ತಮ ಆರಂಭ ಒದಗಿಸಿದರೆ, ಸ್ಟೀವ್​ ಸ್ಮಿತ್ (105) ಮತ್ತು ಗ್ಲೇನ್​ ಮ್ಯಾಕ್ಸ್​ವೆಲ್​ (45) ತಂಡವು ಬೃಹತ್​ ಮೊತ್ತ ಪೇರಿಸಲು ನೆರವಾದರು.

    ಉಳಿದಂತೆ ಮಾರ್ಕಸ್​ ಸ್ಟೋಯಿನಿಸ್​​ (0), ಮಾರ್ನಸ್ ಲಬುಶೇನ್ (2), ಅಲೆಕ್ಸ್​ ಕ್ಯಾರಿ (17*) ಮತ್ತು ಪ್ಯಾಟ್​ ಕ್ಯೂಮಿನ್​ (1*) ರನ್​ ಕಲೆಹಾಕಿದರು.

    ಟೀಮ್​ ಇಂಡಿಯಾ ಪರ ಮೊಹಮ್ಮದ್​ ಶಮಿ 3 ವಿಕೆಟ್​ ಪಡೆದರೆ, ಜಸ್ಪ್ರಿತ್​ ಬೂಮ್ರಾ, ನವದೀಪ್​ ಸೈನಿ ಮತ್ತು ಯಜುವೇಂದ್ರ ಚಹಾಲ್​ ತಲಾ 1 ವಿಕೆಟ್​ ಗಳಿಸಿದರು. ಆದರೆ, ಯಾರೋಬ್ಬರು ಆಸಿಸ್​ ಪಡೆಯ ರನ್​ ವೇಗಕ್ಕೆ ಕಡಿವಾಣ ಹಾಕಲಿಲ್ಲ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts