More

    ಭಾರತದಲ್ಲೇ ಉತ್ಪಾದನೆ ಆಗಲಿದೆ ಮತ್ತೊಂದು ಲಸಿಕೆ; ವಿಶ್ವ ಆರೋಗ್ಯ ಸಂಸ್ಥೆ ಪ್ರಮಾಣಿತ 9 ಲಸಿಕೆಗಳ ಪೈಕಿ 3 ಭಾರತದಲ್ಲೇ ತಯಾರಿ

    ಬೆಂಗಳೂರು: ಕೋವಿಡ್​ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಕರೊನಾ ತಡೆ-ನಿಯಂತ್ರಣ ನಿಟ್ಟಿನಲ್ಲಿ ದೇಶದಲ್ಲಿ ಇನ್ನೊಂದು ಲಸಿಕೆ ಕೂಡ ಉತ್ಪಾದನೆ ಆಗಲಿದೆ. ಈ ಮೂಲಕ ವಿಶ್ವ ಆರೋಗ್ಯ ಸಂಸ್ಥೆ ಪ್ರಮಾಣಿತ 9 ಲಸಿಕೆಗಳ ಪೈಕಿ ಮೂರು ಭಾರತದಲ್ಲೇ ಉತ್ಪಾದನೆ ಆದಂತಾಗಲಿದೆ.

    ಈ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೂಡ ಮಾಹಿತಿ ಹಂಚಿಕೊಂಡಿದ್ದಾರೆ. ತುರ್ತು ಬಳಕೆಗಾಗಿ ವಿಶ್ವ ಆರೋಗ್ಯ ಸಂಸ್ಥೆಯು ಮತ್ತೊಂದು ಲಸಿಕೆಗೆ ಅನುಮತಿ ನೀಡಿದೆ. ಕೊವೊವ್ಯಾಕ್ಸ್ (Covovax) ಹೆಸರಿನ ಲಸಿಕೆಯನ್ನು ಸೀರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಉತ್ಪಾದಿಸಲಿದೆ ಎಂದು ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಅಸ್ವಸ್ಥ: ಚಿಕಿತ್ಸೆ ಫಲಿಸದೆ ಬಾಲಕ ಸಾವು, ಮೂವರ ಸ್ಥಿತಿ ಗಂಭೀರ; ನಾನಾ ಅನುಮಾನ!

    ಇನ್ನೊಂದು ವ್ಯಾಕ್ಸಿನ್​ಗೆ ತುರ್ತು ಅನುಮತಿ ನೀಡಿರುವ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೇಳಿಕೊಂಡಿದ್ದು, ವ್ಯಾಕ್ಸಿನ್​ ಕುರಿತ ಮಾಹಿತಿಯನ್ನು ಮತ್ತಷ್ಟು ವಿವರವಾಗಿ ತಿಳಿಸಿದೆ. ನೊವಾವ್ಯಾಕ್ಸ್​ (Novavax) ಕಂಪನಿಯ ಪರವಾನಗಿ ಅಡಿ ಸೀರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಕೊವೊವ್ಯಾಕ್ಸ್ ಉತ್ಪಾದನೆ ಮಾಡಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

    ಫ್ಲೈಟಲ್ಲಿ ಬಂದು ಕಳವು ಮಾಡಿ ಫ್ಲೈಟಲ್ಲೇ ಮರಳಿದ; 5 ವರ್ಷಗಳ ಹಿಂದೆ ಕದ್ದು ಸಿಕ್ಕಿಬಿದ್ದಿದ್ದ ಆ ದ್ವೇಷವನ್ನು ಮತ್ತೆ ಕದ್ದೇ ತೀರಿಸಿಕೊಂಡ!

    ಮತಾಂತರ ಆಗಿಲ್ಲ ಎಂದಿದ್ದ ತಹಶೀಲ್ದಾರ್​ಗೂ ಶಾಕ್​, ಆಗಿದೆ ಎನ್ನುತ್ತಿರುವ ಶಾಸಕರಿಗೂ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts