More

    ಕುಲಭೂಷಣ್​ ಜಾಧವ್​ ವಿಷಯದಲ್ಲಿ ಪಟ್ಟು ಸಡಿಲಿಸದ ಪಾಕಿಸ್ತಾನ

    ನವದೆಹಲಿ: ಬೇಹುಗಾರಿಕೆಯ ಆರೋಪದಲ್ಲಿ ತಾನು ಬಂಧಿಸಿರುವ ಭಾರತೀಯ ಮಾಜಿ ಯೋಧ ಕುಲಭೂಷಣ್​ ಜಾಧವ್​ ಅವರಿಗೆ ರಾಜತಾಂತ್ರಿಕ ನೆರವು ಒದಗಿಸುವ ವಿಷಯವಾಗಿ ಪಾಕಿಸ್ತಾನ ತನ್ನ ಬಿಗಿಪಟ್ಟು ಮುಂದುವರಿಸಿದೆ. ಅಂತಾರಾಷ್ಟ್ರೀಯ ಕೋರ್ಟ್​ನ (ಐಸಿಜೆ) ಆದೇಶದ ಹೊರತಾಗಿಯೂ ಪಾಕಿಸ್ತಾನ ಕುಲಭೂಷಣ್​ಗೆ ರಾಜತಾಂತ್ರಿಕ ನೆರವು ನೀಡಲು ನಿರಾಕರಿಸುತ್ತಿರುವ ಕಾರಣ ಮತ್ತೊಮ್ಮೆ ಐಸಿಜೆಗೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ ಎಂದು ಭಾರತದ ಪರ ವಕೀಲ ಹರೀಶ್​ ಸಾಳ್ವೆ ಹೇಳಿದ್ದಾರೆ.

    ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಬಂಧಿಸಿದ್ದ ಕುಲಭೂಷಣ್​ ಜಾಧವ್​ ಅವರಿಗೆ ಪಾಕಿಸ್ತಾನ 2017ರ ಏಪ್ರಿಲ್​ನಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಆದರೆ ಈ ಬಗ್ಗೆ ಭಾರತ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ್ದ ಐಸಿಜೆ, 2019ರ ಜುಲೈನಲ್ಲಿ ಮರಣದಂಡನೆ ಶಿಕ್ಷೆಯನ್ನು ಮರುಪರಿಶೀಲಿಸುವಂತೆಯೂ, ಕುಲಭೂಷಣ್​ ಜಾಧವ್​ಗೆ ರಾಜತಾಂತ್ರಿಕ ನೆರವು ದೊರಕಿಸಿಕೊಡುವಂತೆಯೂ ಪಾಕಿಸ್ತಾನಕ್ಕೆ ಸೂಚಿಸಿತ್ತು.

    ಇದನ್ನೂ ಓದಿ: ನಿತ್ಯೋತ್ಸವ ಕವಿ ನಿಸಾರ್​ ಅಹಮದ್​ ನಿಧನದಿಂದ ಕನ್ನಡ ಸಾರಸ್ವತ ಲೋಕದ ಕೊಂಡಿಯೊಂದು ಕಳಚಿತು: ಸಿಎಂ ಯಡಿಯೂರಪ್ಪ

    ಇದಾದ ನಂತರದಲ್ಲಿ ಅವರಿಗೆ ರಾಜತಾಂತ್ರಿಕ ನೆರವು ನೀಡಲು ಭಾರತ ಏಳೆಂಟು ಬಾರಿ ಪ್ರಯತ್ನಿಸಿತು. ಅವರನ್ನು ಬಿಡುಗಡೆ ಮಾಡುವಂತೆ ಪಾಕಿಸ್ತಾನದ ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಒಂದು ವೇಳೆ ಮಾನವೀಯತೆ ಆಧಾರದ ಮೇಲೆ ಅವರನ್ನು ಬಿಡುಗಡೆ ಮಾಡುವುದಾದರೆ, ಮಾಡಲಿ. ಒಟ್ಟಾರೆ ಅವರು ಸ್ವದೇಶಕ್ಕೆ ಮರಳಬೇಕಷ್ಟೇ ಎಂದು ಹರೀಶ್​ ಸಾಳ್ವೆ ಹೇಳಿದ್ದಾರೆ.

    ಕುಲಭೂಷಣ್​ ವಿಷಯ ಪಾಕಿಸ್ತಾನದ ಪಾಲಿಗೆ ಪ್ರತಿಷ್ಠೆಯ ಸಂಕೇತವಾಗಿ ಮಾರ್ಪಟ್ಟಿದೆ. ನಾನು ಪದೇಪದೆ ಪತ್ರಗಳನ್ನು ಬರೆಯುತ್ತಲೇ ಇದ್ದೇವೆ. ಅವರು ಅವನ್ನು ನಿರ್ಲಕ್ಷಿಸುತ್ತಲೇ ಇದ್ದಾರೆ. ಈ ವಿಷಯವಾಗಿ ನಮ್ಮ ಸಹನೆಯ ಕಟ್ಟೆ ಕೂಡ ಒಡೆಯುವ ಮಟ್ಟ ತಲುಪಿದೆ. ಆದ್ದರಿಂದ, ಈ ವಿಷಯವಾಗಿ ಮತ್ತೊಮ್ಮೆ ಐಸಿಜೆಗೆ ಹೋಗ ಬೇಕೇ, ಬೇಡವೇ ಎಂಬುದನ್ನು ನಿರ್ಧರಿಸುವ ಸಮಯ ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಇನ್ನೊಂದು ವರ್ಷ ಕರೊನಾ ಹೊಸ ರೂಲ್ಸ್​: ಫಾಲೋ ಮಾಡದಿದ್ರೆ ಬೀಳತ್ತೆ ದಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts