More

    ಚಂದ್ರನ ಮೇಲೆ ಭಾರತದ ನಡಿಗೆ: ದಕ್ಷಿಣ ಧ್ರುವದಲ್ಲಿ ಮೂನ್​ವಾಕ್​ ಆರಂಭಿಸಿದ ಪ್ರಜ್ಞಾನ್ ರೋವರ್​!

    ಬೆಂಗಳೂರು: ಬುಧವಾರ (ಆ.23) ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ಮೇಲೆ ವಿಕ್ರಮ್​ ಲ್ಯಾಂಡರ್​ ಸಾಫ್ಟ್​ ಲ್ಯಾಂಡಿಂಗ್​ ಸಕ್ಸಸ್ ಆದ​ ಬಳಿಕ ಲ್ಯಾಂಡರ್​ ಒಳಗಿದ್ದ ಪ್ರಜ್ಞಾನ್ ರೋವರ್​ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ (ಆ.24) ಬೆಳಗ್ಗೆ ಚಂದ್ರನ ಅಂಗಳದ ಮೇಲೆ ಯಶಸ್ವಿಯಾಗಿ ನಿಯೋಜಿಸಿದೆ.

    ಚಂದ್ರಯಾನ 3 ರೋವರ್​ ಲ್ಯಾಂಡರ್​ನಿಂದ ಚಂದ್ರನ ಅಂಗಳಕ್ಕೆ ಇಳಿದಿದೆ. ಭಾರತ ಚಂದ್ರನ ಮೇಲೆ ಹೆಜ್ಜೆ ಹಾಕಿದೆ ಎಂದು ಇಸ್ರೋ ಎಕ್ಷ್​ (ಟ್ವಿಟರ್​) ಮೂಲಕ ತಿಳಿಸಿದೆ. ಅಲ್ಲದೆ, ಮತ್ತಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು ಎಂದಿದೆ.

    ಇದನ್ನೂ ಓದಿ: ನಾವು ಈಗಾಗಲೇ ಚಂದ್ರನ ಮೇಲಿದ್ದೇವೆ! ಪಾಕ್​ ಪ್ರಜೆ ಕೊಟ್ಟ ಕಾರಣ ಕೇಳಿದ್ರೆ ನೀವು ನಗೋದು ಗ್ಯಾರಂಟಿ

    ಪ್ರಜ್ಞಾನ್ ರೋವರ್​ ಒಂದು ಮೈಕ್ರೋವೇವ್​ ಓವನ್​ ಗಾತ್ರದಷ್ಟಿದೆ. ಚಂದ್ರನ ಅಂಗಳದಿಂದ ಸುಮಾರು 500 ಮೀಟರ್​(1640 ಅಡಿ)ಗಳವರೆಗೆ ಪ್ರಯಾಣಿಸುವಂತೆ ವಿನ್ಯಾಸಗೊಳಿಸಲಾಗಿದೆ. ಚಂದ್ರನ ಭೂವಿಜ್ಞಾನ, ಖನಿಜಶಾಸ್ತ್ರ ಹಾಗೂ ವಾತಾವರಣವನ್ನು ಅಧ್ಯಯನ ಮಾಡಲಿದೆ.

    ಚಂದ್ರಯಾನ 3 ಭಾರತದ ಚಂದ್ರನ ಮೂರನೇ ಕಾರ್ಯಾಚರಣೆಯಾಗಿದೆ. ಮೊದಲ ಚಂದ್ರಯಾನ-1 ಅನ್ನು 2008ರಲ್ಲಿ ಉಡಾವಣೆ ಮಾಡಿ, 2 ವರ್ಷಗಳವರೆಗೆ ಆಪರೇಟ್​ ಮಾಡಲಾಯಿತು. ಇದಾದ ಬಳಿಕ 2019ರಲ್ಲಿ ಎರಡನೇ ಚಂದ್ರಯಾನ-2 ಚಂದ್ರನ ಮೇಲೆ ಲ್ಯಾಂಡ್​ ಆಗುವ ವೇಳೆ ವಿಫಲವಾಯಿತು. ಇದೀಗ ಮೂರನೇ ಪ್ರಯತ್ನದಲ್ಲಿ ಭಾರತ ಯಶಸ್ಸು ಸಾಧಿಸಿದೆ.

    ಚಂದ್ರಯಾನ 3 ಯಶಸ್ಸು ಭಾರತವನ್ನು ಅಮೆರಿಕ, ರಷ್ಯಾ ಮತ್ತು ಚೀನಾ ಸಾಲಿಗೆ ಸೇರಿದೆ. ಅದರಲ್ಲೂ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ತಂದುಕೊಟ್ಟಿದೆ.

    ಪ್ರಜ್ಞಾನ್ ರೋವರ್ ಚಂದ್ರನ ದಕ್ಷಿಣ ಧ್ರುವದಲ್ಲಿ ನಿಯೋಜಿಸಲಾದ ಮೊದಲನೆಯ ರೋವರ್​ ಆಗಿದೆ. ಇದರಲ್ಲಿ ಕ್ಯಾಮೆರಾ, ಸ್ಪೆಕ್ಟ್ರೋಮೀಟರ್ ಮತ್ತು ಮ್ಯಾಗ್ನೆಟೋಮೀಟರ್ ಸೇರಿದಂತೆ ವಿವಿಧ ಉಪಕರಣಗಳನ್ನು ಅಳವಡಿಸಲಾಗಿದೆ. ಚಂದ್ರನ ಮೇಲ್ಮೈಯನ್ನು ಅದರ ಸಂಯೋಜನೆ, ಖನಿಜಶಾಸ್ತ್ರ ಮತ್ತು ಇತಿಹಾಸವನ್ನು ಒಳಗೊಂಡಂತೆ ಅಧ್ಯಯನ ಮಾಡಲು ರೋವರ್ ಪ್ರಯೋಗಗಳನ್ನು ನಡೆಸುತ್ತದೆ.

    ಪ್ರಜ್ಞಾನ್ ರೋವರ್ ಒಂದು ಚಂದ್ರನ ದಿನಕ್ಕೆ ಮಾತ್ರ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಅಂದರೆ ಸುಮಾರು 14 ಭೂಮಿಯ ದಿನಗಳು. ಇದು ಸೌರ ಫಲಕಗಳಿಂದ ಚಾಲಿತವಾಗಲಿದ್ದು, ಚಂದ್ರಯಾನ-3 ಆರ್ಬಿಟರ್‌ನೊಂದಿಗೆ ಸಂವಹನ ನಡೆಸಲಿದೆ.

    ಇದನ್ನೂ ಓದಿ: ಚಂದ್ರಯಾನ 3 ಪ್ರಯಾಣಿಕರಿಗೆ ನಮ್ಮದೊಂದು ಸೆಲ್ಯೂಟ್​ ಎಂದ ರಾಜಸ್ಥಾನದ ಕ್ರೀಡಾ ಸಚಿವ!

    ಚಂದ್ರಯಾನದ ಹಾದಿ

    * ಜುಲೈ 14 – ಉಡಾವಣೆ
    * ಆಗಸ್ಟ್ 5 – ಚಂದ್ರನ ಕಕ್ಷೆಗೆ ಪ್ರವೇಶ
    * ಆಗಸ್ಟ್ 17 – ಲ್ಯಾಂಡರ್ ಮಾಡ್ಯೂಲ್ ಬೇರ್ಪಡೆಯಾಗುವ ಪ್ರಕ್ರಿಯೆ ಯಶಸ್ವಿ
    * ಆಗಸ್ಟ್ 6, 9, 14 ಮತ್ತು 16 – ಉಪಗ್ರಹದ ಕಕ್ಷೆ ಬದಲಾವಣೆ
    * ಹಂತ-ಹಂತವಾಗಿ ಚಂದ್ರನ ಹತ್ತಿರಕ್ಕೆ ಬಂದ ನೌಕೆ
    * ಆಗಸ್ಟ್ 23 – ಯಶಸ್ವಿಯಾಗಿ ಲ್ಯಾಂಡಿಂಗ್ ನಡೆಸಿದ ಲ್ಯಾಂಡರ್
    *1959ರಲ್ಲಿ ಜಾಗತಿಕವಾಗಿ ಮೊದಲ ಬಾರಿ ರಷ್ಯಾವು ಯಶಸ್ವಿಯಾಗಿ ಚಂದ್ರನ ಮೇಲ್ಮೈ ಪ್ರವೇಶಿಸಿತ್ತು.
    *1966ರಲ್ಲಿ ಅಮೆರಿಕ ಕೂಡ ಯಶಸ್ವಿಯಾಗಿ ಚಂದ್ರನ ಮೇಲ್ಮೈ ಪ್ರವೇಶಿಸಿದೆ
    *2013ರಲ್ಲಿ ಚೀನಾವು ಯಶಸ್ವಿಯಾಗಿ ಚಂದ್ರನ ಮೇಲ್ಮೈ ಪ್ರವೇಶಿಸಿತ್ತು.
    *600 ಕೋಟಿ ರೂ.: ಚಂದ್ರಯಾನ-3 ಕೈಗೊಳ್ಳಲು ಇಸ್ರೋಗೆ ತಗುಲಿದ ವೆಚ್ಚ
    *40 ದಿನ: ಒಟ್ಟು ಅಂತರಿಕ್ಷದಲ್ಲಿ ಪ್ರಯಾಣಿಸಿದ ನೌಕೆ
    *3.84 ಲಕ್ಷ: ಕಿ.ಮೀ ಕ್ರಮಿಸಿದ ದೂರ

    ಚಂದ್ರಯಾನ 3 ಪ್ರಯಾಣಿಕರಿಗೆ ನಮ್ಮದೊಂದು ಸೆಲ್ಯೂಟ್​ ಎಂದ ರಾಜಸ್ಥಾನದ ಕ್ರೀಡಾ ಸಚಿವ!

    ನಾವು ಈಗಾಗಲೇ ಚಂದ್ರನ ಮೇಲಿದ್ದೇವೆ! ಪಾಕ್​ ಪ್ರಜೆ ಕೊಟ್ಟ ಕಾರಣ ಕೇಳಿದ್ರೆ ನೀವು ನಗೋದು ಗ್ಯಾರಂಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts