More

    ಚಂದ್ರಯಾನ 3 ಪ್ರಯಾಣಿಕರಿಗೆ ನಮ್ಮದೊಂದು ಸೆಲ್ಯೂಟ್​ ಎಂದ ರಾಜಸ್ಥಾನದ ಕ್ರೀಡಾ ಸಚಿವ!

    ಜೈಪುರ: ವಿಕ್ರಮ್​ ಲ್ಯಾಂಡರ್​ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್​ ಆಗಿ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿದೆ. ಇದಕ್ಕೆ ಕಾರಣರಾದವರಿಗೆ ಅಭಿನಂದನೆ ಸಲ್ಲಿಸುವ ಭರದಲ್ಲಿ ರಾಜಸ್ಥಾನದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅಶೋಕ್ ಚಂದನಾ ಎಡವಟ್ಟು ಮಾಡಿಕೊಂಡಿದ್ದಾರೆ.

    ನಿನ್ನೆ (ಆ.23) ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್ ಚಂದನಾ, ಸೇಫ್​ ಲ್ಯಾಂಡಿಂಗ್​ ಮಾಡುವಲ್ಲಿ ನಾವು ಯಶಸ್ಸು ಸಾಧಿಸಿದ್ದೇವೆ. ಚಂದ್ರಯಾನ ನೌಕೆಯಲ್ಲಿ ತೆರಳಿರುವ ಪ್ರಯಾಣಿಕರಿಗೆ ನಾವು ಸೆಲ್ಯೂಟ್​ ಮಾಡುತ್ತೇವೆ ಎಂದು ಹೇಳುವ ಮೂಲಕ ಸಚಿವರು ಪೇಚಿಗೆ ಸಿಲುಕಿದ್ದಾರೆ.

    ಅಂದಹಾಗೆ ಚಂದ್ರಯಾನ ನೌಕೆಯಲ್ಲಿ ಯಾವೊಬ್ಬ ಮನುಷ್ಯನು ಕೂಡ ಪ್ರಯಾಣ ಮಾಡಿಲ್ಲ. ಚಂದ್ರಯಾನ 3 ನೌಕೆಯ ವಿಕ್ರಮ್​ ಲ್ಯಾಂಡರ್​, ಪ್ರಜ್ಞಾನ್​ ರೋವರ್​ ಮಾತ್ರ ಹೊತ್ತೊಯ್ದಿದೆ. ಅದರಲ್ಲಿ ಯಾವೊಬ್ಬ ಮನುಷ್ಯನು ಇಲ್ಲ. ಇದು ಮಾನವಸಹಿತ ಬಾಹ್ಯಾಕಾಶ ಮಿಷನ್ ಅಲ್ಲ. ಈ ಕನಿಷ್ಠ ಜ್ಞಾನವೂ ಓರ್ವ ಸಚಿವರಿಗೆ ತಿಳಿಯದೇ ಇರುವುದು ದುರಾದರಷ್ಟಕರ ಸಂಗತಿಯಾಗಿದೆ.

    ಇದನ್ನೂ ಓದಿ: ನಾವು ಈಗಾಗಲೇ ಚಂದ್ರನ ಮೇಲಿದ್ದೇವೆ! ಪಾಕ್​ ಪ್ರಜೆ ಕೊಟ್ಟ ಕಾರಣ ಕೇಳಿದ್ರೆ ನೀವು ನಗೋದು ಗ್ಯಾರಂಟಿ

    ಸಚಿವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರೀ ಟೀಕೆ ವ್ಯಕ್ತವಾಗುತ್ತಿದೆ. ನಿಮ್ಮನ್ನು ಸಚಿವರಾಗಿ ಪಡೆದ ರಾಜ್ಯ ನಿಜಕ್ಕೂ ಧನ್ಯ. ಚಂದ್ರಯಾನದ ಬಗ್ಗೆ ಕನಿಷ್ಠ ತಿಳುವಳಿಕೆಯು ನಿಮ್ಮ ಬಳಿ ಇಲ್ಲವಲ್ಲ. ಏನೇ ಮಾತನಾಡಿದರೂ ತಿಳಿದುಕೊಂಡು ಮಾತನಾಡಿ ಎಂದು ನೆಟ್ಟಿಗರು ಕಾಮೆಂಟ್​ ವಿಭಾಗದಲ್ಲಿ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಅಂದಹಾಗೆ ಇಸ್ರೋದ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಬುಧವಾರ ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ಮೇಲ್ಮೈಗೆ ಇಳಿಯುವಲ್ಲಿ ಯಶಸ್ವಿಯಾಗಿದ್ದು, ಚಂದ್ರನ ಅಜ್ಞಾತ ಪ್ರದೇಶವಾದ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮುವ ಮೂಲಕ ಕೋಟ್ಯಂತರ ಭಾರತೀಯರ ಕನಸು ನನಸಾಗಿದೆ.

    ಮುಂದಿನ 14 ದಿನಗಳ ವರೆಗೆ ಚಂದ್ರನ ಅಂಗಳದಲ್ಲಿ ವಿಕ್ರಮ್​ ಲ್ಯಾಂಡರ್​ನಲ್ಲಿರುವ ಪ್ರಜ್ಞಾನ್ ಮಾಡ್ಯೂಲ್​ ಚಂದ್ರನ ಅಂಗಳವನ್ನು ಅನ್ವೇಷಣೆ ಮಾಡಲಿದೆ. 600 ಕೋಟಿ ರೂ. ವೆಚ್ಚದ ಚಂದ್ರಯಾನ-3 ನೌಕೆಯನ್ನು ಜುಲೈ 14ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್​ ಧವನ್​ ಬಾಹ್ಯಾಕಾಶ ಉಡಾವಣ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು. 41 ದಿನಗಳ ಸುದೀರ್ಘ ಪ್ರಯಾಣದ ನಂತರ ಚಂದ್ರಯಾನ 3 ನೌಕೆ ಚಂದ್ರನನ್ನು ತಲುಪಿದೆ.

    ಏನೇನು ಅಧ್ಯಯನ?

    ನೌಕೆಯು ಹಲವು ವೈಜ್ಞಾನಿಕ ಪೇಲೋಡ್‌ಗಳನ್ನು ಹೊಂದಿದೆ. ಇದು ಚಂದ್ರನ ಮೇಲ್ಮೈ ಪ್ಲಾಸ್ಮಾ ಅಯಾನುಗಳು ಮತ್ತು ಎಲೆಕ್ಟ್ರಾನ್‌ಗಳ ಸಾಂದ್ರತೆ, ಅದರ ಬದಲಾವಣೆಗಳನ್ನು ಅಳೆಯಲು ನೆರವಾಗುತ್ತದೆ. ಭೌತಿಕ ಪ್ರಯೋಗ, ಧ್ರುವ ಪ್ರದೇಶದ ಬಳಿ ಚಂದ್ರನ ಮೇಲ್ಮೈಯ ಉಷ್ಣ ಗುಣಲಕ್ಷಣಗಳ ಮಾಪನ, ಚಂದ್ರನ ಭೂಕಂಪನ ಚಟುವಟಿಕೆ, ಅಲ್ಲಿನ ಖನಿಜ ಸಂಯೋಜನೆ, ಚಂದ್ರನ ಹೊರಪದರ ರಚನೆ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ. ಚಂದ್ರನ ಮಣ್ಣು ಮತ್ತು ಬಂಡೆಗಳ ಧಾತುರೂಪದ ಸಂಯೋಜನೆಯನ್ನು ನಿರ್ಧರಿಸುತ್ತದೆ.

    ಇದನ್ನೂ ಓದಿ: ಕಾವೇರಿ ಸಂಕಷ್ಟ ಸೂತ್ರ, ಕಾನೂನು ಸಮರ: ಸರ್ವಪಕ್ಷ ಸಭೆಯಲ್ಲಿ ಒಮ್ಮತದ ಬಲ; ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ರಾಜ್ಯ ಸರ್ಕಾರದ ಆಗ್ರಹ

    ಚಂದ್ರಯಾನದ ಹಾದಿ

    * ಜುಲೈ 14 – ಉಡಾವಣೆ
    * ಆಗಸ್ಟ್ 5 – ಚಂದ್ರನ ಕಕ್ಷೆಗೆ ಪ್ರವೇಶ
    * ಆಗಸ್ಟ್ 17 – ಲ್ಯಾಂಡರ್ ಮಾಡ್ಯೂಲ್ ಬೇರ್ಪಡೆಯಾಗುವ ಪ್ರಕ್ರಿಯೆ ಯಶಸ್ವಿ
    * ಆಗಸ್ಟ್ 6, 9, 14 ಮತ್ತು 16 – ಉಪಗ್ರಹದ ಕಕ್ಷೆ ಬದಲಾವಣೆ
    * ಹಂತ-ಹಂತವಾಗಿ ಚಂದ್ರನ ಹತ್ತಿರಕ್ಕೆ ಬಂದ ನೌಕೆ
    * ಆಗಸ್ಟ್ 23 – ಯಶಸ್ವಿಯಾಗಿ ಲ್ಯಾಂಡಿಂಗ್ ನಡೆಸಿದ ಲ್ಯಾಂಡರ್
    *1959ರಲ್ಲಿ ಜಾಗತಿಕವಾಗಿ ಮೊದಲ ಬಾರಿ ರಷ್ಯಾವು ಯಶಸ್ವಿಯಾಗಿ ಚಂದ್ರನ ಮೇಲ್ಮೈ ಪ್ರವೇಶಿಸಿತ್ತು.
    *1966ರಲ್ಲಿ ಅಮೆರಿಕ ಕೂಡ ಯಶಸ್ವಿಯಾಗಿ ಚಂದ್ರನ ಮೇಲ್ಮೈ ಪ್ರವೇಶಿಸಿದೆ
    *2013ರಲ್ಲಿ ಚೀನಾವು ಯಶಸ್ವಿಯಾಗಿ ಚಂದ್ರನ ಮೇಲ್ಮೈ ಪ್ರವೇಶಿಸಿತ್ತು.
    *600 ಕೋಟಿ ರೂ.: ಚಂದ್ರಯಾನ-3 ಕೈಗೊಳ್ಳಲು ಇಸ್ರೋಗೆ ತಗುಲಿದ ವೆಚ್ಚ
    *40 ದಿನ: ಒಟ್ಟು ಅಂತರಿಕ್ಷದಲ್ಲಿ ಪ್ರಯಾಣಿಸಿದ ನೌಕೆ
    *3.84 ಲಕ್ಷ: ಕಿ.ಮೀ ಕ್ರಮಿಸಿದ ದೂರ

    ಇದೇ ನೋಡಿ ಚಂದ್ರಯಾನ-3 ಚಂದ್ರನನ್ನು ಸ್ಪರ್ಶಿಸಿದ ಜಾಗ! ಲ್ಯಾಂಡಿಂಗ್​ ಬಳಿಕ ಸೆರೆಹಿಡಿದ ಮೊದಲ ಚಿತ್ರ ಬಿಡುಗಡೆ

    ಸ್ನೇಹಿತನ ಪತ್ನಿಯನ್ನೇ ಹತ್ಯೆಗೈದ ಯುವಕ: ಎಣ್ಣೆ ಪಾರ್ಟಿಗೆಂದು ಮನೆಗೆ ಬಂದವನು ಮಾಡಿದ್ದು ಮಿತ್ರದ್ರೋಹ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts