More

    ಮದುವೆ ಸಮಾರಂಭದಲ್ಲಿ ಹಿಂದು ಮಹಿಳೆ ಅಪಹರಣ: ಅಲ್ಪಸಂಖ್ಯಾತರನ್ನು ರಕ್ಷಿಸಲು ಪಾಕ್​ಗೆ ಭಾರತ ಆಗ್ರಹ

    ನವದೆಹಲಿ: ಮದುವೆ ಸಮಾರಂಭದಲ್ಲಿ ಹಿಂದು ಮಹಿಳೆಯನ್ನು ಅಪಹರಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಭಾರತ ಸರ್ಕಾರ ಪಾಕಿಸ್ತಾನ ಹೈಕಮಿಷನ್‌ನ ಹಿರಿಯ ಅಧಿಕಾರಿಗೆ ಸಮನ್ಸ್​ ನೀಡಿದೆ.

    ಎರಡು ದಿನಗಳ ಹಿಂದೆ ಸಿಂಧ್ ಪ್ರಾಂತ್ಯದ ಹಲಾ ನಗರದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದಲ್ಲಿ ಹಿಂದು ಮಹಿಳೆಯನ್ನು ಅಪಹರಿಸಲಾಗಿತ್ತು. ಆಕೆಗೆ ಈಗಾಗಲೇ ಪಾಕಿಸ್ತಾನದವನೊಂದಿಗೆ ಮದುವೆಯಾಗಿತ್ತು. ಇದಕ್ಕೆ ಆಕೆಯ ಮನೆಯವರ ವಿರೋಧವಿದ್ದು, ಅವರು ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಅಪಹರಣವನ್ನು ತೀವ್ರವಾಗಿ ಖಂಡಿಸಿರುವ ಸರ್ಕಾರ, ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ತುರ್ತು ಪ್ರಕರಣ ಎಂದು ಪರಿಗಣಿಸಬೇಕು ಎಂದಿದೆ.

    ಅಲ್ಲಿನ ಅಲ್ಪಸಂಖ್ಯಾತರ ರಕ್ಷಣೆ ಮಾಡುವುದು ಇಮ್ರಾನ್​ ಖಾನ್​ ಸರ್ಕಾರದ ಜವಾಬ್ದಾರಿ. ಅದರಲ್ಲಿ ಹಿಂದು ಸಮುದಾಯವೂ ಒಂದು. ಅವರ ರಕ್ಷಣೆ ಹೊರಬೇಕು ಎಂದಿದೆ.

    ಭಾರತಿ ಬಾಯಿ ಅವರನ್ನು ಶಸ್ತ್ರ ಸಜ್ಜಿತ ಯುವಕರ ತಂಡ ಅಪಹರಿಸಿತು. ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾಗಿದ್ದು, ಶಾರುಕ್​ ಗುಲ್​ ಎಂಬುವವನೊಂದಿಗೆ ಮದುವೆ ಮಾಡಲಾಗಿದೆ ಎಂದು ಆಲ್​ ಪಾಕಿಸ್ತಾನ ಹಿಂದು ಕೌನ್ಸಿಲ್​ ಆರೋಪಿಸಿದೆ. (ಏಜೆನ್ಸೀಸ್​) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts