More

    ಸಂಕಷ್ಟದಲ್ಲಿರುವವರಿಗೆ ನೆರವಾಗಲು ತಾವು ಬಿಡಿಸಿದ ಪೇಂಟಿಂಗ್‌ಗಳನ್ನೇ ಹರಾಜಿಗಿಟ್ಟ ಶೂಟರ್ ಅಂಜುಂ ಮೌದ್ಗಿಲ್..!

    ನವದೆಹಲಿ: ಮಹಾಮಾರಿ ಕರೊನಾ ವೈರಸ್ ಭೀತಿಯಿಂದಾಗಿ ಘೋಷಣೆಯಾದ ಲಾಕ್‌ಡೌನ್‌ನಿಂದಾಗಿ ಕ್ರೀಡಾಲೋಕವೇ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಬಹುತೇಕ ಕ್ರೀಡಾಪಟುಗಳು ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ. ಎಲ್ಲರಿಗೂ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ ಶೂಟರ್ ಅಂಜುಂ ಮೌದ್ಗಿಲ್, ಕೇವಲ ಶೂಟರ್ ಅಷ್ಟೆ ಅಲ್ಲ, ಬಹುಮುಖ ಪ್ರತಿಭೆ ಈಕೆ. ಮನೋವಿಜ್ಞಾನದಲ್ಲಿ ಪದವಿ ಪಡೆದಿರುವ ಅಂಜುಂ, ಉತ್ತಮ ಚಿತ್ರ ಕಲೆಗಾರರು ಹೌದು. ಇದೀಗ ಕೋವಿಡ್-19ರಿಂದ ಸಂಕಷ್ಟದಲ್ಲಿ ಸಿಲುಕಿರುವವರಿಗೆ ಸಹಾಯ ಮಾಡುವ ಸಲುವಾಗಿ ತಮ್ಮ ಚಿತ್ರ ಕಲೆಗಳನ್ನು ಹರಾಜಿಗಿಟ್ಟಿದ್ದಾರೆ.

    ಇದನ್ನೂ ಓದಿ: ಟೆನಿಸ್​ ಸ್ಟಾರ್ಸ್​ ವಾವ್ರಿಂಕಾ-ಮುಗುರುಜಾ ಸೀಕ್ರೆಟ್​ ಲವ್​ ಪತ್ತೆ ಹಚ್ಚಿದ ಅಭಿಮಾನಿಗಳು!

    ಕ್ರೀಡಾ ಪಟುಗಳಿಗೆ, ಸಿಬ್ಬಂದಿ ಸೇರಿದಂತೆ ಕ್ರೀಡಾ ವಲಯದವರಿಗೆ ಕೌನ್ಸಿಲಿಂಗ್ ಮಾಡುವ ಮೂಲಕ ನೆರವಾಗುತ್ತಾರೆ. ಇದೀಗ ತಮ್ಮಚಿತ್ರ ಕಲೆಗಳನ್ನು ಸಂಕಷ್ಟದಲ್ಲಿರುವವರಿಗೆ ಸಹಾಯಕ ಮಾಡುವ ಸಲುವಾಗಿ ಮಾರಾಟ ಮಾಡಲು ಮುಂದಾಗಿದ್ದಾರೆ. ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿ ಸಿಲುಕಿರುವ ಸಿಬ್ಬಂದಿ ವರ್ಗದವರಿಗೆ ಈ ಮೊತ್ತ ನೀಡಲಿದ್ದಾರೆ. ಕೆಲವೊಂದು ನನ್ನ ಸ್ನೇಹಿತರಿಗೆ ಹಾಗೂ ಶೂಟರ್‌ಗಳಿಗೆ ಕೌನ್ಸಿಲಿಂಗ್ ಮಾಡುವೆ ಮೂಲಕ ಸಹಾಯ ನೀಡಬೇಕೆಂದು ಕೇಳಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: VIDEO | ಮಗನಿಗೆ ಕುದುರೆ ಸವಾರಿ ಕಲಿಸಿದ ಶಿಖರ್​ ಧವನ್​!

    ಟೋಕಿಯೊ ಒಲಿಂಪಿಕ್ಸ್‌ಗೆ ಭಾರತಕ್ಕೆ ಅರ್ಹತಾ ಕೋಟಾ ಗಿಟ್ಟಿಸಿಕೊಟ್ಟ ಮೊದಲ ಶೂಟರ್ ಅಂಜುಂ, 2018ರಲ್ಲಿ ಕೊರಿಯಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ಈ ಸಾಧನೆ ಮಾಡಿದ್ದರು. ಲಾಕ್‌ಡೌನ್ ವೇಳೆ ಚಂಡೀಗಢದಲ್ಲಿ ಲಾಕ್ ಆಗಿದ್ದ ಅಂಜುಂ, ಸಾಕಷ್ಟು ಪೇಂಟಿಂಗ್ ಬಿಡಿಸಿದ್ದರು. ಚಿತ್ರಕಲೆಗಳನ್ನು ಮಾರಿ ಅದರಿಂದ ಬಂದ ಹಣದಿಂದ ಎನ್‌ಜಿಒ ಹಾಗೂ ಇನ್ನಿತರ ಸಂಸ್ಥೆಗಳಿಗೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts