More

    ಕರೊನಾ ಮಣಿಸಲು ಖಾಕಿತೊಟ್ಟ ಫುಟ್‌ಬಾಲ್ ಆಟಗಾರ್ತಿ

    ನವದೆಹಲಿ: ಲಾಕ್‌ಡೌನ್ ಘೋಷಣೆಯಾದ ದಿನದಿಂದಲೂ ಭಾರತದ ಕ್ರೀಡಾಪಟುಗಳು ಸಾಮಾಜಿಕ ಚಟುವಟಿಕೆ, ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ರಾಷ್ಟ್ರೀಯ ಮಹಿಳಾ ಫುಟ್‌ಬಾಲ್ ತಂಡದ ಮಿಡ್‌ಫೀಲ್ಡರ್ ಇಂದುಮತಿ ಕಾಥಿರೆಸನ್ ಎಲ್ಲ ಕ್ರೀಡಾಪಟುಗಳಿಗೆ ವಿಭಿನ್ನವಾಗಿ ಕಾಣುತ್ತಾರೆ. ತಮಿಳುನಾಡಿನ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಇಂದುಮತಿ ಖಾಕಿ ತೊಟ್ಟು ಚೆನ್ನೈ ಬೀದಿಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿಗಳನ್ನು ಸೂಕ್ತವಾಗಿ ಪಾಲಿಸುವಂತೆ ಮನವಿ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಪ್ರೇಕ್ಷಕರಿಲ್ಲದೆ ಆಡಲ್ವಂತೆ ಈ ಟೆನಿಸ್​ ಆಟಗಾರ್ತಿ!

    ಚೆನ್ನೈನ ಅಣ್ಣಾನಗರದಲ್ಲಿ ಲಾಠಿ ಹಿಡಿದು ದಿನಪೂರ್ತಿ ಕಾರ್ಯನಿರ್ವಹಿಸುತ್ತಿರುವ ಇಂದುಮತಿ ಕಾರ್ಯಕ್ಕೆ ಕ್ರೀಡಾಲೋಕ ಮೆಚ್ಚುಗೆ ವ್ಯಕ್ತಪಡಿಸಿದೆ. ಚೆಕ್‌ಪೋಸ್ಟ್‌ನಲ್ಲಿ ಜನರನ್ನು ತಡೆಯುವುದರ ಜತೆಗೆ ವೈರಸ್‌ನಿಂದ ಆಗುವ ಪರಿಣಾಮವನ್ನು ವಿವರಿಸುತ್ತಿದ್ದಾರೆ. ಇಡೀ ಭಾರತವೇ ಸಂಕಷ್ಟದ ಸುಳಿಗೆ ಸಿಲುಕಿದೆ. ಮುನ್ನೆಚ್ಚರಿಕೆ ಕ್ರಮ ಅಗತ್ಯ. ಪ್ರತಿಯೊಬ್ಬರು ಇದನ್ನು ಪಾಲಿಸಬೇಕು’ ಎಂದು ಇಂದುಮತಿ ಹೇಳಿದ್ದಾರೆ. ಪ್ರತಿಯೊಬ್ಬರನ್ನು ತಡೆದು ಪರಿಸ್ಥಿತಿ ವಿವರಿಸುತ್ತಿದ್ದೇವೆ. ಯಾರು ಹೊರಗೆ ಬಾರದಂತೆ ಎಚ್ಚರಿಕೆ ನೀಡುತ್ತಿದ್ದೇವೆ’ ಎಂದು 25 ವರ್ಷದ ಆಟಗಾರ್ತಿ ಹೇಳಿದ್ದಾರೆ. ತಂಡದ ಸಹ ಆಟಗಾರ್ತಿಯರಿಂದ ‘ಇಂದು’ ಎಂದು ಕರೆಸಿಕೊಳ್ಳುವ ಇಂದುಮತಿ, ಬೆಳಗ್ಗೆ 7 ರಿಂದ ಮಧ್ಯ ರಾತ್ರಿವರೆಗೂ ಕಾರ್ಯನಿರ್ವಹಿಸುತ್ತಿದ್ದಾರಂತೆ. ಬಹುತೇಕ ಮಂದಿ ಕುಟುಂಬ ಸದಸ್ಯರ ಜತೆ ಕಾಲಕಳೆಯುತ್ತಿದ್ದರೆ, ನಾನು ನನ್ನ ಕರ್ತವ್ಯದಲ್ಲಿ ತೊಡಗಿದ್ದೇನೆ. ಇಂಥ ಸಂದರ್ಭದಲ್ಲಿ ಕುಟುಂಬದ ಜತೆ ಸಾಮಾಜಿಕ ಜವಾಬ್ದಾರಿಯೂ ಮುಖ್ಯ ಅನ್ನುತ್ತಾರೆ.

    ಇದನ್ನೂ ಓದಿ: ಗೆದ್ದು ನನ್ನ ಆರೋಗ್ಯ ವೃದ್ಧಿಸಿ ಎಂದು ಬಲ್ಬೀರ್ ಹೇಳಿದ್ದು ಯಾರಿಗೆ…

    2019ರ ಸ್ಯಾಫ್​ ಮಹಿಳಾ ಚಾಂಪಿಯನ್‌ಷಿಪ್‌ನಲ್ಲಿ ಇಂದುಮತಿ ಅತಿಹೆಚ್ಚು ಗೋಲುಗಳಿಸಿದವರ ಪೈಕಿ ಜಂಟಿ ಅಗ್ರಸ್ಥಾನ ಪಡೆದಿದ್ದರು. ಭಾರತಕ್ಕೆ ಆಡುವುದೇ ಒಂದು ಹೆಮ್ಮೆಯ ವಿಷಯ. ಒಲಿಂಪಿಕ್ ಅರ್ಹತಾ ಟೂರ್ನಿಯಲ್ಲಿ 2ನೇ ಸುತ್ತಿಗೇರಿದ್ದು ಹಾಗೂ ಸ್ಯಾಫ್​ ಚಾಂಪಿಯನ್ ಆಗಿದ್ದು ಜೀವನದಲ್ಲಿ ಮರೆಯಲಾಗದ ಕ್ಷಣ ಎಂದು ಸ್ಮರಿಸುತ್ತಾರೆ. ಕಳೆದ ಆವೃತ್ತಿಯ ಇಂಡಿಯನ್ ವುಮೆಲ್ ಲೀಗ್‌ನಲ್ಲಿ (ಐಡಬ್ಲ್ಯುಎಲ್) ಪ್ರಶಸ್ತಿ ಜಯಿಸಿದ ಸೆಥು ಎಫ್ ಸಿ ಸದಸ್ಯರಾಗಿದ್ದರು.

    ಕ್ರೀಡಾ ಸಚಿವರ ಶ್ಲಾಘನೆ
    ಇಂದುಮತಿ ಕಾರ್ಯಕ್ಕೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಶ್ಲಾಸಿದ್ದಾರೆ. ಫುಟ್‌ಬಾಲ್ ಆಟಗಾರ್ತಿಯಾಗಿಯೂ, ಪೊಲೀಸ್ ಆಗಿಯೂ ಉತ್ತಮ ಕೆಲ ನಿರ್ವಹಿಸುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಕ್ರೀಡಾಪಟುಗಳ ಮಧ್ಯೆ ಇಂದುಮತಿ ವಿಭಿನ್ನವಾಗಿ ಕಾಣುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts