More

    ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಸಾವು!?; ಯುವಕನ ಸಾವಿನ ತನಿಖೆಗೆ ಆದೇಶಿಸಿದ ಸರ್ಕಾರ..

    ನವದೆಹಲಿ: ಕಳೆದ ಕೆಲವು ಸಮಯದಿಂದ ಭಯವನ್ನು ಮೂಡಿಸುತ್ತಲೇ ಬಂದಿರುವ ಮಂಕಿಪಾಕ್ಸ್​ಗೆ ಇದೀಗ ಭಾರತದಲ್ಲಿ ಮೊದಲ ಬಲಿಯಾಗಿದೆ ಎನ್ನಲಾಗಿದೆ. ಏಕೆಂದರೆ ಮಂಕಿಪಾಕ್ಸ್​ನಂಥ ಸೋಂಕಿನ ಲಕ್ಷಣದಿಂದ ಯುವಕನೊಬ್ಬ ಸಾವಿಗೀಡಾಗಿದ್ದು, ಆ ಕುರಿತು ತನಿಖೆ ನಡೆಸುವಂತೆ ಕೇರಳ ಸರ್ಕಾರ ಆದೇಶಿಸಿದೆ.

    ಜಗತ್ತಿನಾದ್ಯಂತ ಮಂಕಿಪಾಕ್ಸ್​ ಹರಡುತ್ತಿದ್ದು, ಆತಂಕ ಉಂಟು ಮಾಡಿದೆ. ಈ ಮಧ್ಯೆ ಕೇರಳದ ತ್ರಿಶೂರ್​ನಲ್ಲಿ ವಿದೇಶದಿಂದ ಮರಳಿದ್ದ ಯುವಕನೊಬ್ಬ ಮಂಕಿಪಾಕ್ಸ್​ ಲಕ್ಷಣಗಳಿಂದ ಬಳಲುತ್ತಿದ್ದು, ಸಾವಿಗೀಡಾಗಿದ್ದಾನೆ. ಈ ವಿಚಾರವಾಗಿ ಮಧ್ಯಪ್ರವೇಶಿಸಿರುವ ರಾಜ್ಯ ಸರ್ಕಾರ, ಹೆಚ್ಚಿನ ತನಿಖೆ ನಡೆಸುವಂತೆ ಆದೇಶಿಸಿದೆ.

    ಈ ಸಾವಿನ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಸಭೆ ನಡೆಸಿ ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸಿದ್ದು, ಆ ಯುವಕನ ಜತೆ ವಿದೇಶದಿಂದ ಮರಳಿದ್ದವರಿಗೆ ಪ್ರತ್ಯೇಕವಾಗಿದ್ದು, ನಿಗಾ ವಹಿಸುವಂತೆ ಮುನ್ನೆಚ್ಚರಿಕೆಯ ಸಂದೇಶ ನೀಡಿದೆ. “ಈ ಯುವಕನಿಗೆ ವಿದೇಶದಲ್ಲಿ ನಡೆಸಿದ್ದ ಪರೀಕ್ಷೆ ಪಾಸಿಟಿವ್ ಬಂದಿತ್ತು. ಈತ ತ್ರಿಶೂರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಈತನ ಸಾವಿನ ಕುರಿತು ಉನ್ನತಮಟ್ಟದ ತನಿಖೆ ನಡೆಸಲಿದ್ದೇವೆ” ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

    ಪ್ರೇಮಿಯೇ ಪ್ರೇಯಸಿಯ ರುಂಡ ಕಡಿದ ಪ್ರಕರಣ; ಕೊಲೆಗೆ ಸಹಕರಿಸಿದ್ದ ತಂದೆ, ಮದ್ವೆ ಮಾಡಿಸಿದ್ದ ತಾಯಿಯ ಬಂಧನ..

    ಬುಲೆಟ್​​ನ ಹಿಂದೊಂದು ನಂಬರ್, ಮುಂದೊಂದು ನಂಬರ್; 29 ಸಾವಿರ ರೂ. ದಂಡ, ಬೈಕ್ ಸವಾರ ಅಂದರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts