More

    ಪುನರ್ಜನ್ಮ ನೀಡುವ ವೈದ್ಯರಿಗೊಂದು ಸಲಾಂ ಎಂದ ಪ್ರಧಾನಿ ಮೋದಿ

    ನವದೆಹಲಿ:ಕೋವಿಡ್-19 ವಿರುದ್ಧದ ಉತ್ಸಾಹಭರಿತ ಹೋರಾಟದಲ್ಲಿ ವೈದ್ಯರ ಅತ್ಯಮೂಲ್ಯ ಪಾತ್ರವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ,
    ವೈದ್ಯರ ದಿನದ ಅಂಗವಾಗಿ ಟ್ವಿಟರ್​​​ನಲ್ಲಿ ಈ ಕುರಿತು ಬರೆದಿರುವ ಅವರು ವೈದ್ಯರು ಅಪಾಯದಲ್ಲಿದ್ದರೂ ಜೀವಗಳನ್ನು ಉಳಿಸುತ್ತಿದ್ದಾರೆ ಎಂದು ಹೇಳಿದರು.
    “ಭಾರತ ನಮ್ಮ ವೈದ್ಯರಿಗೆ, ಅದೂ ವಿಶೇಷವಾಗಿ ಕೋವಿಡ್ -19 ವಿರುದ್ಧದ ಉತ್ಸಾಹಭರಿತ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಅಸಾಧಾರಣ ವೈದ್ಯಕೀಯ ಸಿಬ್ಬಂದಿ, ಆರೈಕೆ ಮಾಡುವವರಿಗೆ ವಂದಿಸುತ್ತದೆ ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.

    ಇದನ್ನೂ ಓದಿ: ಕರೊನಾ ಕೂಪವಾಗಿದ್ದ ಬೃಹತ್ ಕೊಳೆಗೇರಿಗೆ ಯಶಸ್ಸು ತಂದ ನಾಲ್ಕು ‘ಟಿ’

    ಅವರ ಇತ್ತೀಚಿನ ಭಾಷಣದ ಒಂದು ಸಣ್ಣ ವೀಡಿಯೊದಲ್ಲಿ, ‘ತಾಯಿ ನಮಗೆ ಜನ್ಮ ನೀಡಿದರೆ, ವೈದ್ಯರು ಪುನರ್ಜನ್ಮ ನೀಡುತ್ತಾರೆ. ಅವರು ಅಪಾಯದಲ್ಲಿದ್ದಾಗ್ಯೂ ಮತ್ತೊಬ್ಬರ ಜೀವ ಉಳಿಸುತ್ತಿದ್ದಾರೆ ಎಂದು ಅವರು ಹೇಳಿದರು.
    ಡಾ ಬಿ.ಸಿ.ರಾಯ್ ಅವರ ಜನ್ಮ ದಿನಾಚರಣೆಯನ್ನು ವೈದ್ಯರ ದಿನವೆಂದು ಆಚರಿಸಲಾಗುತ್ತದೆ. ಜುಲೈ 1 ನ್ನು ಚಾರ್ಟರ್ಡ್ ಅಕೌಂಟೆಂಟ್ಸ್ ಡೇ ಎಂದೂ ಆಚರಿಸಲಾಗುತ್ತದೆ. ಆರೋಗ್ಯಕರ ಮತ್ತು ಪಾರದರ್ಶಕ ಆರ್ಥಿಕತೆಯನ್ನು ಖಾತರಿಪಡಿಸುವಲ್ಲಿ ನಮ್ಮ ಶ್ರಮಜೀವಿ ಸಿಎ ಸಮುದಾಯದ ಪ್ರಮುಖ ಪಾತ್ರವಿದೆ.

    ಇದನ್ನೂ ಓದಿ: ಆನ್‌ಲೈನ್‌ ಕ್ಲಾಸ್‌ಗೆ ಸೆಡ್ಡು ಹೊಡೆದ ಗ್ರಾಮ: ದೇಶಾದ್ಯಂತ ಶ್ಲಾಘನೆ

    ರಾಷ್ಟ್ರಕ್ಕೆ ಅವರ ಸೇವೆಗಳು ಅತ್ಯಮೂಲ್ಯವಾಗಿವೆ. ಚಾರ್ಟರ್ಡ್ ಅಕೌಂಟೆಂಟ್ಸ್ ದಿನದ ಶುಭಾಶಯಗಳು ಎಂದು ವೀಡಿಯೊ ಮೂಲಕ ತಿಳಿಸಿದ ಅವರು, ಸಮಾಜದ ಆರ್ಥಿಕ ಆರೋಗ್ಯದ ಜವಾಬ್ದಾರಿ ಸಿಎಗಳ ಮೇಲಿದೆ ಎಂದರು.

    ಅಪ್ಲಿಕೇಷನ್ ನಿಷೇಧ: ಬೀಜಿಂಗ್​​ನಲ್ಲಿ ಸಂಚಲನ ಮೂಡಿಸಿದ ಭಾರತದ ನಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts