More

    ಅಪ್ಲಿಕೇಷನ್ ನಿಷೇಧ: ಬೀಜಿಂಗ್​​ನಲ್ಲಿ ಸಂಚಲನ ಮೂಡಿಸಿದ ಭಾರತದ ನಡೆ

    ನವದೆಹಲಿ: ಚೀನಾದ 59 ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಭಾರತ ಸರ್ಕಾರದ ಕ್ರಮ ಬೀಜಿಂಗ್‌ನಲ್ಲಿ ಗಲಾಟೆ ಎಬ್ಬಿಸಿದಂತಿದೆ.
    ಭಾರತ ಸರ್ಕಾರದ ನಡೆಯನ್ನು ಬೀಜಿಂಗ್ ಗಂಭೀರವಾಗಿ ತೆಗೆದುಕೊಳ್ಳುತ್ತಿದೆ ಮತ್ತು ಅದನ್ನು ವಿರೋಧಿಸುತ್ತದೆ ಎಂದು ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿ ಮಂಗಳವಾರ ಹೇಳಿದೆ.
    ಈ ನಿರ್ಧಾರವು ಸ್ವಭಾವತಃ ತಾರತಮ್ಯವಾಗಿದೆ ಮತ್ತು ಅಸ್ಪಷ್ಟ ದೂರದೃಷ್ಟಿಯ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ ಎಂದು ಭಾರತದ ಚೀನೀ ರಾಯಭಾರ ಕಚೇರಿಯ ವಕ್ತಾರ ಜಿ ರಾಂಗ್ ಹೇಳಿದ್ದಾರೆ.

    ಇದನ್ನೂ ಓದಿ: ವಲಸಿಗರೇ ‘ಒಂದು ದೇಶ, ಒಂದು ಪಡಿತರ ಚೀಟಿ’ ಯ ಬಹುದೊಡ್ಡ ಫಲಾನುಭವಿಗಳು: ಪ್ರಧಾನಿ ಮೋದಿ

    ಚೀನಾ ಅಂತಹ ಕ್ರಮವನ್ನು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ದೃಢವಾಗಿ ವಿರೋಧಿಸುತ್ತದೆ. ಭಾರತದ ತಾರತಮ್ಯದಿಂದ ಅಸ್ಪಷ್ಟ ಮತ್ತು ದೂರದೃಷ್ಟಿಯ ಆಧಾರದ ಮೇಲೆ ನಿರ್ಧಾರ ಕೈಗೊಂಡಿದೆ, ನ್ಯಾಯಯುತ ಮತ್ತು ಪಾರದರ್ಶಕ ಕಾರ್ಯವಿಧಾನದ ಅವಶ್ಯಕತೆಗಳಿಗೆ ವಿರುದ್ಧವಾಗಿ ಚಲಿಸುತ್ತದೆ,
    “ಇದು ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಇ-ವಾಣಿಜ್ಯದ ಸಾಮಾನ್ಯ ಪ್ರವೃತ್ತಿಗೆ ವಿರುದ್ಧವಾಗಿದೆ, ಮತ್ತು ಇದು ಗ್ರಾಹಕರ ಹಿತಾಸಕ್ತಿಗಳಿಗೆ, ಭಾರತದಲ್ಲಿನ ಮಾರುಕಟ್ಟೆ ಸ್ಪರ್ಧೆಗೆ ಅನುಕೂಲಕರವಾಗಿಲ್ಲ” ಎಂದು ಚೀನಾದ ರಾಯಭಾರ ಕಚೇರಿಯ ವಕ್ತಾರರು ಹೇಳಿದ್ದಾರೆ. 

    ಕೋವಿಡ್ ಮಧ್ಯೆಯೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ನರೇಗಾ ಕೆಲಸಗಾರರಿಗೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts