More

    ಮೆಫ್ತಾಲ್​ ಮಾತ್ರೆಯಿಂದ ಅಡ್ಡಪರಿಣಾಮ!

    ನವದೆಹಲಿ: ಮೆಫ್ತಾಲ್​ ಎಂಬ ನೋವುನಿವಾರಕ ಮಾತ್ರೆ ಅಡ್ಡಪರಿಣಾಮ ಬೀರಬಹುದು ಎಂಬ ಎಚ್ಚರಿಕೆಯೊಂದನ್ನು ಭಾರತೀಯ ಔಷಧ ಸಂಹಿತಾ ಆಯೋಗ ನೀಡಿದೆ. ಮಹಿಳೆಯರು ಋತುಸ್ರಾವದ ಸಮಯದಲ್ಲಿ ಹೆಚ್ಚಾಗಿ ಬಳಸುವಂಥ ಈ ಮಾತ್ರೆಯಿಂದ ಅಡ್ಡಪರಿಣಾಮ ಉಂಟಾಗಬಹುದು ಎಂದು ಆಯೋಗ ಎಚ್ಚರಿಕೆ ನೀಡಿದೆ.

    ಮೆಫ್ತಾನಾಮಿಕ್​ ಆ್ಯಸಿಡ್​ ಎಂಬ ರಾಸಾಯನಿಕ ಹೊಂದಿರುವ ಈ ಮಾತ್ರೆಯನ್ನು ಸಾಮಾನ್ಯವಾಗಿ ಮುಟ್ಟಿನ ಸೆಳೆತ ಮತ್ತು ಸಂಧಿವಾತ ಹೊಂದಿರುವವರಿಗೆ ಶಿಫಾರಸು ಮಾಡಲಾಗುತ್ತದೆ. ಆದರೆ ಪಿವಿಪಿಐ ಅಂಕಿ&ಅಂಶಗಳ ವಿಶ್ಲೇಷಣೆ ಪ್ರಕಾರ ಈ ಮಾತ್ರೆಯ ಬಳಕೆ ಇಯೊಸಿನೊಫಿಲಿಯಾ ಮತ್ತು ಡ್ರೆಸ್​ ಸಿಂಡ್ರೋಮ್​ಗೆ ಕಾರಣವಾಗಬಹುದು ಎಂಬುದು ಕಂಡುಬಂದಿದೆ.

    ಹೀಗಾಗಿ ಈ ಮಾತ್ರೆ ಸಂಬಂಧಿತ ಅಡ್ಡಪರಿಣಾಮಗಳ ಕುರಿತು ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಸಚಿವಾಲಯದ ಅಧೀನ ಇರುವ ಸ್ವಾಯತ್ತ ಸಂಸ್ಥೆ ಆಗಿರುವ ಭಾರತೀಯ ಔಷಧಸಂಹಿತಾ ಆಯೋಗ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts