More

    ಅಣುಸ್ಥಾವರಗಳ ವಿವರ ವಿನಿಮಯ ಮಾಡಿಕೊಂಡ ಭಾರತ-ಪಾಕ್​: 29 ವರ್ಷದ ಅಭ್ಯಾಸ ಮುಂದುವರಿಕೆ

    ನವದೆಹಲಿ: ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಒಪ್ಪಂದದ ಪ್ರಕಾರ 29 ವರ್ಷಗಳ ಅಭ್ಯಾಸವನ್ನು ವಿಷಮ ರಾಜತಾಂತ್ರಿಕ ಪರಿಸ್ಥಿತಿಯಲ್ಲೂ ಮುಂದುವರಿಸಿದ್ದು, ಅಣುಸ್ಥಾವರಗಳ ವಿವರವನ್ನು ವಿನಿಮಯ ಮಾಡಿಕೊಂಡಿವೆ.

    ಅಣುಸ್ಥಾವರಗಳ ಮೇಲಿನ ದಾಳಿ ತಡೆ ಒಪ್ಪಂದ ಇದಾಗಿದೆ. ಸದ್ಯ ಉಭಯ ದೇಶಗಳ ನಡುವೆ ಕಾಶ್ಮೀರಕ್ಕೆ ಸಂಬಂಧಿಸಿ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದೆ. ಆದರೂ, ನವದೆಹಲಿ ಮತ್ತು ಇಸ್ಲಾಮಾದ್​​ಗಳು ಈ ವಿಚಾರದಲ್ಲಿ ಹೊಣೆಗಾರಿಕೆಯ ನಡೆ ಪ್ರದರ್ಶಿಸಿದ್ದು, ಹಳೆಯ ಒಪ್ಪಂದದ ಅಂಶಕ್ಕೆ ಬೆಲೆ ನೀಡಿವೆ.

    ಈ ಒಪ್ಪಂದವನ್ನು ಉಭಯ ದೇಶಗಳು 1988ರ ಡಿಸೆಂಬರ್ 31ರಂದು ಮಾಡಿಕೊಂಡಿದ್ದು, 1991ರ ಜನವರಿ 27ರಿಂದ ಚಾಲ್ತಿಯಲ್ಲಿದೆ. ಪ್ರತಿವರ್ಷ ಜನವರಿ ಒಂದನೇ ತಾರೀಕಿನಂದು ದೇಶದಲ್ಲಿರುವ ಅಣುಸ್ಥಾವರಗಳ ವಿವರವನ್ನು ಪರಸ್ಪರ ಹಸ್ತಾಂತರಿಸುವುದು ಈ ಒಪ್ಪಂದದ ಪ್ರಮುಖ ಅಂಶ. 1992ರ ಜನವರಿ 1ರಂದು ಮೊದಲನೇ ಸಲ ಉಭಯ ದೇಶಗಳು ಪರಸ್ಪರ ಅಣುಸ್ಥಾವರಗಳ ವಿವರವನ್ನು ಹಸ್ತಾಂತರಿಸಿದ್ದವು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts