More

    ಸರಿದಾರಿಯಲ್ಲಿ ಸಾಗುತ್ತಿದೆ ಭಾರತದ ಕೋವಿಡ್​ 19 ಸಮರ, ವಿಶ್ವಬ್ಯಾಂಕ್​ ಹರ್ಷ

    ನವದೆಹಲಿ: ಕರೊನಾ ವೈರಸ್​ ಸೋಂಕು ಹರಡದಂತೆ ತಡೆಯಲು 21 ದಿನಗಳ ಲಾಕ್​ಡೌನ್​ ಘೋಷಿಸಿದ್ದು, ಪ್ರಧಾನಮಂತ್ರಿ ಗರೀಬ್​ ಕಲ್ಯಾಣ ಯೋಜನೆಯ ಮೂಲಕ ಸಾಮಾಜಿಕ ಭದ್ರತಾ ವ್ಯವಸ್ಥೆ ಜಾರಿಗೊಳಿಸಿದ್ದು ಹಾಗೂ ಲಾಕ್​ಡೌನ್​ನ ಆರ್ಥಿಕ ಹಿಂಜರಿತ ತಡೆಗಟ್ಟಲು ಕ್ರಮ ತೆಗೆದುಕೊಂಡಿರುವ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರವನ್ನು ವಿಶ್ವಬ್ಯಾಂಕ್​ ಪ್ರಶಂಸಿಸಿದೆ.

    ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ವಿಶ್ವಬ್ಯಾಂಕ್​ನ ಕಂಟ್ರಿ ಡೈರೆಕ್ಟರ್​ ಜುನೈದ್​ ಅಹಮದ್​, ಈ ಮೂರು ಆಯಾಮಗಳ ಕ್ರಮದ ಮೂಲಕ ಭಾರತ ಸರ್ಕಾರ ಕರೊನಾ ಸೋಂಕು ಹರಡುವಿಕೆ ತಡೆಗಟ್ಟಲು ದಿಟ್ಟ ಕ್ರಮ ಕೈಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
    ವಿಶ್ವಬ್ಯಾಂಕ್​ ಭಾರತಕ್ಕೆ 1 ಶತಕೋಟಿ ಡಾಲರ್​ ನೆರವು ನೀಡುತ್ತಿದೆ. ಕರೊನಾ ವೈರಸ್​ ಸೋಂಕನ್ನು ತಡೆಗಟ್ಟುವ ಜತೆಗೆ ಭಾರತದಲ್ಲಿ ಸೋಂಕು ಹರಡುವ ಕೇಂದ್ರಬಿಂದುಗಳು ಸೃಷ್ಟಿಯಾಗದಂತೆ ಮಾಡುವ ನಿಟ್ಟಿನಲ್ಲಿ ಭಾರತದೊಂದಿಗೆ ವಿಶ್ವಬ್ಯಾಂಕ್​ ಮಾಡಿಕೊಳ್ಳುತ್ತಿರುವ ಒಪ್ಪಂದ ಇದಾಗಿದೆ ಎಂದು ಹೇಳಿದ್ದಾರೆ.

    ಈ ಪ್ರಕರಣದಲ್ಲಿ 3 ಅಂಶಗಳನ್ನು ಪಾಲಿಸುವುದು ಅನಿವಾರ್ಯವಾಗುತ್ತದೆ. ಮೊದಲನೆಯದ್ದು ಆರೋಗ್ಯ ಸಮಸ್ಯೆ. ಎರಡನೆಯದ್ದು, ಆರೋಗ್ಯ ಸಮಸ್ಯೆ ಸಂಪೂರ್ಣ ಪರಿಹಾರವಾಗುವವರೆಗೆ ಬಡವರಿಗೆ ಆರ್ಥಿಕವಾಗಿ ತೊಂದರೆಯಾಗದಂತೆ ತಡೆಯುವುದು. ಪ್ರಧಾನಮಂತ್ರಿ ಗರೀಬ್​ ಕಲ್ಯಾಣ ಯೋಜನಾ ಮೂಲಕ ಭಾರತ ಸರ್ಕಾರ ಇದನ್ನು ಸಮರ್ಥವಾಗಿ ನಿಭಾಯಿಸಿದೆ. ಮೂರನೆಯದ್ದು, 21 ದಿನಗಳ ಲಾಕ್​ಡೌನ್​ ತೆರವುಗೊಳಿಸಿದ ನಂತರದಲ್ಲಿ ಆರ್ಥಿಕತೆ ಮರುಆರಂಭವಾಗಿ ಸರಿದಿಕ್ಕಿನಲ್ಲಿ ಸಾಗುವಂತೆ ಮಾಡುವುದು. ಇದನ್ನು ಕೂಡ ಗರೀಬ್​ ಕಲ್ಯಾಣ ಯೋಜನೆ ಸಮರ್ಥವಾಗಿ ನಿಭಾಯಿಸಲಿದೆ ಎಂದು ಅವರು ವಿವರಿಸಿದ್ದಾರೆ.

    ಇಮ್ರಾನ್​ ಖಾನ್​​ ಸರ್ಕಾರದ ವಿರುದ್ಧ ಸ್ವದೇಶಿಗರಿಂದಲೇ ಟೀಕಾ ಪ್ರಹಾರ: ಕರೊನಾ ಹೋರಾಟ ಕೈಚೆಲ್ಲಿ ಕುಳಿತ ಪಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts