More

    ಏರುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ತೈಲ ದರ ಇಳಿಕೆಗೆ ಸರ್ಕಾರದ ಚಿಂತನೆ

    ನವದೆಹಲಿ: ಏರುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ತೈಲ ಬೆಲೆಯನ್ನು ತಗ್ಗಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ಹೇಳಿವೆ. ಫೆಬ್ರವರಿ ಮಾಹೆ ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ನೋಡಿಕೊಂಡು ಇಂಧನದ ದರ ತಗ್ಗಿಸುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.

    ಆಹಾರ ಪದಾರ್ಥದ ಹಣದುಬ್ಬರ ಹೆಚ್ಚಿಗೆ ಇದೆ. ಹಾಲು, ಬೇಳೆಕಾಳು, ಸೋಯಾ ಎಣ್ಣೆಗಳ ದರ ದುಬಾರಿಯಾಗಿದೆ. ಇದರಿಂದ ಜನಸಾಮಾನ್ಯರ ಬದುಕು ಕಷ್ಟವಾಗಿದೆ. ಆದ್ದರಿಂದ ಇಂಧನ ತೈಲ ದರ ಇಳಿಸಲು ತೆರಿಗೆ ಕಡಿಮೆ ಮಾಡಲು ಸರ್ಕಾರ ಬಯಸಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನದಲ್ಲಿ ದರ ತಗ್ಗಿದೆ. ಇದರ ಲಾಭವನ್ನು ತೈಲ ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸಿಲ್ಲ. ಈ ಕಾರಣದಿಂದಲೂ ತೈಲದ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ.

    ಜತೆಗೆ ಜೋಳ ಇನ್ನಿತರ ಆಹಾರ ಧಾನ್ಯಗಳ ಮೇಲಿನ ಆಮದು ಸುಂಕವನ್ನು ಇಳಿಸುವ ಇರಾದೆಯನ್ನು ಸರ್ಕಾರ ಹೊಂದಿದೆ. ಈ ಮೂಲಕ ಗ್ರಾಹಕರಿಗೆ ಅನುಕೂಲ ಆಗುತ್ತದೆ ಎಂದು ಮೂಲಗಳು ಹೇಳಿವೆ. ಕಳೆದ ಡಿಸೆಂಬರ್​ನಲ್ಲಿ ನಿಯಂತ್ರಣದ ಹಾದಿಗೆ ಹೊರಳಿದ್ದ (ಶೇ.5.72) ಚಿಲ್ಲರೆ ಹಣದುಬ್ಬರವು ಜನವರಿಯಲ್ಲಿ ಶೇ. 6.52ಕ್ಕೆ ಏರಿದೆ. ಆದರೆ, ಫೆಬ್ರವರಿ ಮೊದಲ ವಾರದಲ್ಲಿ ಆರ್​ಬಿಐ ಮತ್ತೆ 25 ಮೂಲಾಂಶ ರೆಪೊ ದರ ಏರಿಕೆ ಮಾಡಿರುವುದರಿಂದ ಹಣದುಬ್ಬರ ಶೇ. 6ರೊಳಗೆ ಬರುವ ನಿರೀಕ್ಷೆ ಇದೆ.

    ಮತ್ತೆ ರೆಪೊ ಹೆಚ್ಚಳ?: ಮುಂದಿನ ಏಪ್ರಿಲ್​ನಲ್ಲಿ ನಡೆಯುವ ಎಂಪಿಸಿ ಸಭೆಯಲ್ಲಿ 25 ಮೂಲಾಂಶ ರೆಪೊ ದರ ಪರಿಷ್ಕರಣೆ ಆಗುವ ಸಂಭವ ಇದೆ ಎಂದು ಆರ್ಥಿಕ ವಿಶ್ಲೇಕರು ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ಮೇ ತಿಂಗಳಿಂದ ಈವರೆಗೆ ಸತತ 6 ಬಾರಿ ರೆಪೊ ದರ ಪರಿಷ್ಕರಣೆ ಆಗಿದ್ದು, ಶೇ. 6.50ಕ್ಕೆ ತಲುಪಿದೆ.

    ಎಸ್​ಬಿಐ ಉಭಯ ಬಡ್ಡಿ ದರ ಏರಿಕೆ
    ಆರ್​ಬಿಐ ರೆಪೊ ದರ ಏರಿಸಿದ ಬೆನ್ನಿಗೆ ದೇಶದ ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಎಸ್​ಬಿಐ ಸಾಲ ಮತ್ತು ನಿಶ್ಚಿತ ಠೇವಣಿ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿದೆ. ವೆಚ್ಚ ಆಧಾರಿತ ಸಾಲದ ಬಡ್ಡಿ (ಎಂಸಿಎಲ್​ಆರ್), ಬಾಹ್ಯ ಮಾನದಂಡದ ಬಡ್ಡಿ ದರ (ಇಬಿಎಲ್​ಆರ್), ರೆಪೊ ದರ ಆಧಾರಿತ ಬಡ್ಡಿ ದರ (ಆರ್​ಎಲ್​ಎಲ್​ಆರ್) ಅಡ್ಡಿಯ ಸಾಲದ ಮೇಲಿನ ಬಡ್ಡಿಯನ್ನು ವಿವಿಧ ಅವಧಿಗೆ ತಕ್ಕಂತೆ ಹೆಚ್ಚಳ ಮಾಡಲಾಗಿದೆ. ಒಂದರಿಂದ ಮೂರು ತಿಂಗಳ ಅವಧಿಯ ಎಂಸಿಎಲ್​ಆರ್ ಸಾಲದ ಬಡ್ಡಿಯು ಶೇ. 8ರಿಂದ ಶೇ.8.10ಕ್ಕೆ ಏರಿಕೆ ಆಗಿದೆ. ಇದು ಬುಧವಾರದಿಂದಲೇ ಜಾರಿಗೆ ಬರಲಿದೆ. ಇಬಿಎಲ್​ಆರ್ ಶೇ. 8.90ರಿಂದ ಶೇ. 9.15ಕ್ಕೆ, ಆರ್​ಎಲ್​ಎಲ್​ಆರ್ ಶೇ. 8.50ರಿಂದ ಶೇ. 8.75ಕ್ಕೆ ವೃದ್ಧಿಸಿದೆ. ನಿಶ್ಚಿತ ಠೇವಣಿಯ ಮೇಲಿನ ಬಡ್ಡಿದರ ಕೂಡ ಅವಧಿ ತಕ್ಕಂತೆ 5ರಿಂದ 25 ಮೂಲಾಂಶ ಏರಿಕೆ ಮಾಡಲಾಗಿದ್ದು, ಹೊಸದಾಗಿ 400 ದಿನ ಅವಧಿಯ ಠೇವಣಿಯನ್ನು ಎಸ್​ಬಿಐ ಪರಿಚಯಿಸಿದ್ದು, ಇದಕ್ಕೆ ಶೇ. 7.10 ಬಡ್ಡಿ ಸಿಗಲಿದೆ. ಈ ಯೋಜನೆ ಮುಂದಿನ ಮಾರ್ಚ್ 31ರವರೆಗೆ ಇರಲಿದೆ.

    ಅಧಿಕಾರಕ್ಕಾಗಿ ಏನೆಲ್ಲ ನಡೆಯುತ್ತೆ ಅನ್ನೋದಕ್ಕೆ ಪುಲ್ವಾಮಾ ದಾಳಿ ಉದಾಹರಣೆ! ಕೊಪ್ಪಳ ಸರ್ಕಾರಿ ಶಿಕ್ಷಕನ ವಿವಾದ

    ಆರ್​ಸಿಬಿಗೆ ಸಾನಿಯಾ ಮೆಂಟರ್: ಬೆಂಗಳೂರಿನ ಮಹಿಳಾ ಕ್ರಿಕೆಟ್ ಫ್ರಾಂಚೈಸಿಗೆ ಟೆನಿಸ್ ತಾರೆ ಮಾರ್ಗದರ್ಶನ

    ಶಾಲೆಯಲ್ಲೇ 2ನೇ ಮದ್ವೆಯಾದ ಹೆಡ್​ ಮಾಸ್ಟರ್​ಗೆ ಮರುಕ್ಷಣವೇ ಮೊದಲ ಪತ್ನಿಯಿಂದ ಬಿಗ್​ ಶಾಕ್!​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts