More

    ಬಾಹ್ಯಾಕಾಶದ ಪ್ರಯಾಣದಲ್ಲಿ ಭಾರತ-ಅಮೆರಿಕ ಜತೆಯಾಗಬೇಕೆಂಬ ಆಶಯ ನನ್ನದು ಎಂದ್ರು ಟ್ರಂಪ್…

    ಅಹಮದಾಬಾದ್​: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆಯನ್ನು, ಸಾಧಿಸುತ್ತಿರುವ ಅಭಿವೃದ್ಧಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಶ್ಲಾಘಿಸಿದರು.

    ಅಹಮದಾಬಾದ್​ನ ಮೊಟೆರಾದಲ್ಲಿ ನಡೆದ ನಮಸ್ತೆ ಟ್ರಂಪ್​ ಅದ್ದೂರಿ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತ ಇತ್ತೀಚೆಗೆ ನಡೆಸಿದ್ದ ಚಂದ್ರಯಾನ-2 ವನ್ನು ಉಲ್ಲೇಖಿಸಿ ಹೊಗಳಿದರು.

    ಭಾರತ ಚಂದ್ರಯಾನದಂತಹ ಯೋಜನೆಗಳ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ತುಂಬ ಪ್ರಭಾವಶಾಲಿ ಹೆಜ್ಜೆಗಳನ್ನು ಹಾಕುವುದರೊಂದಿಗೆ ಮಾದರಿಯಾಗುತ್ತಿದೆ. ಅಂದುಕೊಂಡಿದ್ದಕ್ಕಿಂತಲೂ ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿದೆ ಎಂದು ಹೇಳಿದರು.

    ಮಾನವ ಸಹಿತ ಗಗನಯಾನಕ್ಕೆ ಸಿದ್ಧತೆ ನಡೆಸುತ್ತ, ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂದೆಮುಂದೆ ಸಾಗುತ್ತಿರುವ ಭಾರತಕ್ಕೆ ಅಮೆರಿಕ ಸಹಕಾರ ನೀಡಲು ಕಾತರವಾಗಿದೆ. ನಕ್ಷತ್ರಗಳು, ಆಕಾಶದೆಡೆಗಿನ ಪ್ರಯಾಣದಲ್ಲಿ ಭಾರತ ಮತ್ತು ಅಮೆರಿಕ ಯಾವಾಗಲೂ ಜತೆಯಾಗಿ, ಪಾಲುದಾರರಾಗಿ ಇರಬೇಕ ಎಂಬ ಆಶಯ ನಮ್ಮದು ಎಂದು ಟ್ರಂಪ್​ ಹೇಳಿದರು.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts