More

    ವಾಂಡರರ್ಸ್‌ನಲ್ಲಿ ಭಾರತ ಎದುರು ದಕ್ಷಿಣ ಆಫ್ರಿಕಾ ಜಯಭೇರಿ ; ಸರಣಿ 1-1 ರಿಂದ ಸಮಬಲ

    ಜೊಹಾನ್ಸ್‌ಬರ್ಗ್: ಭಾರತೀಯ ಬೌಲರ್‌ಗಳ ಕರಾರುವಾಕ್ ದಾಳಿಯನ್ನು ಕೆಚ್ಚೆದೆಯಿಂದ ಎದುರಿಸಿದ ನಾಯಕ ಡೀನ್ ಎಲ್ಗರ್ (96*ರನ್, 188 ಎಸೆತ, 10 ಬೌಂಡರಿ) ಜವಾಬ್ದಾರಿಯುತ ನಿರ್ವಹಣೆ ಫಲವಾಗಿ ದಕ್ಷಿಣ ಆಫ್ರಿಕಾ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಗೆಲುವಿನ ನಗೆ ಬೀರಿತು. ಮಳೆಯಿಂದಾಗಿ ದಿನದ ಮೊದಲ 2 ಅವಧಿಯಲ್ಲಿ ಆಟ ನಡೆಯದಿದ್ದರೂ, ಚಹಾ ವಿರಾಮದ ಬಳಿಕ ಚೇಸಿಂಗ್ ಮುಂದುವರಿಸಿದ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು ಯಾವುದೇ ಅಪಾಯಕ್ಕೆ ಅವಕಾಶ ಮಾಡಿಕೊಡದೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ಮೂರು ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿತು. ಐತಿಹಾಸಿಕ ಸರಣಿ ಗೆಲುವಿನ ಕನಸಿನಲ್ಲಿದ್ದ ಭಾರತ ತಂಡ ಇದೀಗ ಅಂತಿಮ ಪಂದ್ಯವರೆಗೆ ಕಾಯಬೇಕಾಗಿದೆ.

    ವಾಂಡರರ್ಸ್‌ ಮೈದಾನದಲ್ಲಿ ಗುರುವಾರ ಮುಕ್ತಾಯಗೊಂಡ ಪಂದ್ಯದಲ್ಲಿ 2 ವಿಕೆಟ್‌ಗೆ 118 ರನ್‌ಗಳಿಂದ 4ನೇ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ 122 ರನ್ ಬಾಕಿ ಇದ್ದರೆ, ಭಾರತಕ್ಕೆ 8 ವಿಕೆಟ್‌ಗಳ ಅವಶ್ಯಕತೆಯಿತ್ತು. ನಾಯಕ ಡೀನ್ ಎಲ್ಗರ್ ಹಾಗೂ ರಾಸಿ ವಾನ್ ಡರ್ ಡುಸೆನ್ (40ರನ್, 92 ಎಸೆತ, 5 ಬೌಂಡರಿ) ಜೋಡಿ 3ನೇ ವಿಕೆಟ್‌ಗೆ ಉಪಯುಕ್ತ 82 ರನ್ ಜತೆಯಾಟದ ಫಲವಾಗಿ ದಕ್ಷಿಣ ಆಫ್ರಿಕಾ ತಂಡ 67.4 ಓವರ್‌ಗಳಲ್ಲಿ 3 ವಿಕೆಟ್‌ಗೆ 243 ರನ್ ಪೇರಿಸಿ ಜಯಿಸಿತು. ಸೆಂಚುರಿಯನ್‌ನಲ್ಲಿ ಅನುಭವಿಸಿದ ಸೋಲಿಗೂ ಪ್ರವಾಸಿ ತಂಡದ ಎದುರು ಸೇಡು ತೀರಿಸಿಕೊಳ್ಳುವುದರ ಜತೆಗೆ ಸರಣಿಯಲ್ಲಿ ಕುತೂಹಲ ಕಾಯ್ದುಕೊಂಡಿತು.

    ಭಾರತ: 202 ಮತ್ತು 266, ದಕ್ಷಿಣ ಆಫ್ರಿಕಾ: 229 ಮತ್ತು 67.4 ಓವರ್‌ಗಳಲ್ಲಿ 3 ವಿಕೆಟ್‌ಗೆ 243 (ಡೀನ್ ಎಲ್ಗರ್ 96*, ರಾಸಿ ವ್ಯಾನ್ ಡರ್ ಡುಸೆನ್ 40, ಟೆಂಬಾ ಬವುಮಾ 23*, ಶಮಿ 55ಕ್ಕೆ 1, ಶಾರ್ದೂಲ್ ಠಾಕೂರ್ 47ಕ್ಕೆ 1, ಆರ್.ಅಶ್ವಿನ್ 26ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts