More

    ಪಾಕಿಸ್ತಾನವನ್ನು ಹೇಗೆ ನಿರ್ಬಂಧಿಸಬೇಕು ಎಂಬುದು ಭಾರತಕ್ಕೆ ಗೊತ್ತಿದೆ

    ನವದೆಹಲಿ: ಕೋವಿಡ್​ 19 ನಂತರದ ಜಗತ್ತು ತುಂಬಾ ಬದಲಾಗಲಿದೆ. ಆದ್ದರಿಂದ, ಬದಲಾದ ಜಗತ್ತಿನೊಂದಿಗೆ ಹೊಂದಿಕೊಳ್ಳುವ ದೃಷ್ಟಿಯಿಂದ ಅದರ ಹಿತಾಸಕ್ತಿ ಕಾಪಾಡಿಕೊಳ್ಳುವ ಉದ್ದೇಶವಿದ್ದರೆ ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ತನ್ನ ನಿಲುವನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ, ಪಾಕಿಸ್ತಾನದಂಥ ರಾಷ್ಟ್ರವನ್ನು ಹೇಗೆ ನಿರ್ಬಂಧಿಸಬೇಕು ಎಂಬ ಗುಟ್ಟು ಭಾರತಕ್ಕೆ ಗೊತ್ತಿದೆ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್​ ಮಾಧವ್​ ತಿಳಿಸಿದ್ದಾರೆ.

    ಖಾಸಗಿ ಸುದ್ದಿಸಂಸ್ಥೆಯೊಂದಿಗೆ ಭಾನುವಾರ ಮಾತನಾಡಿದ ಅವರು, ಕೋವಿಡ್​ 19 ನಂತರದಲ್ಲಿ ಚೀನಾದಿಂದ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಸ್ಥಳಾಂತರಗೊಳ್ಳಲಿದೆ. ಬಂಡವಾಳ ಹೂಡಿಕೆಗೆ ಜಾಗತಿಕ ಹೂಡಿಕೆದಾರರ ಪಾಲಿಗೆ ಭಾರತ ಅತ್ಯಂತ ಪ್ರಶಸ್ತ ಸ್ಥಳ ಎನಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: ಮೇ 5ಕ್ಕೆ ಘೋಷಣೆಯಾಗಲಿದೆ ಜೆಇಇ ಮೇನ್​ ಮತ್ತು ನೀಟ್​ ಪರೀಕ್ಷೆ ದಿನಾಂಕ

    ಭಾರತದಲ್ಲಿ ಮುಸ್ಲಿಂ ವಿರೋಧಿ ಮನೋಭಾವ ಇದೆ ಎಂಬ ವಾದವನ್ನು ತಳ್ಳಿಹಾಕಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಯೊಂದು ಜಾತಿ, ಮತ, ಧರ್ಮದವರ ಬೆಂಬಲ ಇರುವುದಾಗಿ ಹೇಳಿದ್ದಾರೆ.

    ಆದರೆ ಮೋದಿ ಫೋಬಿಯಾಕ್ಕೆ ಒಳಗಾದವರು ಜಾತಿ, ಮತ, ಧರ್ಮ ಆಧಾರಿತವಾಗಿ ದೇಶವನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ. ಇಲ್ಲಿನ ಸೌಹಾರ್ದ ವಾತಾವರಣ ಕದಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಇದನ್ನೂ ಓದಿ: ಇನ್ನೊಂದು ವರ್ಷ ಕರೊನಾ ಹೊಸ ರೂಲ್ಸ್​: ಫಾಲೋ ಮಾಡದಿದ್ರೆ ಬೀಳತ್ತೆ ದಂಡ!

    ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್​ ಸಭೆಯಿಂದಾಗಿ ದೇಶದೆಲ್ಲೆಡೆ ಕರೊನಾ ಸೋಂಕು ಹರಡಿತು ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಂದು ನಿರ್ದಿಷ್ಟ ಧರ್ಮದ ಒಂದು ಗುಂಪಿನ ಜನರಿಂದ ತಪ್ಪಾಯಿತೆಂದು ಇಡೀ ಸಮುದಾಯವನ್ನೇ ದೂರುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ದೇಶ ಹಾಗೂ ಯಾವುದೇ ಸಮುದಾಯಕ್ಕೂ ಒಳಿತಾಗುವುದಿಲ್ಲ ಎಂದು ಹೇಳಿದ್ದಾರೆ.

    ಪಾಕಿಸ್ತಾನದ ವಿರುದ್ಧ ವಾಗ್ದಾಳಿ: ಇಡೀ ವಿಶ್ವವೇ ಕರೊನಾ ಪಿಡುಗನ್ನು ಹತ್ತಿಕ್ಕುವ ಬಗ್ಗೆ ಗಮನಕೇಂದ್ರೀಕರಿಸಿದೆ. ಹೀಗಿರುವಾಗ ಪಾಕಿಸ್ತಾನ ಮಾತ್ರ ಭಾರತ ವಿರೋಧಿ ಹಾಗೂ ಭಯೋತ್ಪಾದನಾ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ಕೆಲಸ ಮಾಡುತ್ತಿದೆ ಎಂದು ರಾಮ್​ ಮಾಧವ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದನ್ನು ಗಮನಿಸಿದಾಗ ಪಾಕಿಸ್ತಾನದ ನಾಯಕತ್ವದಲ್ಲಿ ಎಲ್ಲೋ ಏನೋ ತಪ್ಪಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಅದರ ಇಂಥ ಕೃತ್ಯಗಳಿಂದ ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಅದಕ್ಕೆ ಬಹುದೊಡ್ಡ ಅಡ್ಡಿ ಉಂಟಾಗಲಿದೆ ಎಂದು ಹೇಳಿದ್ದಾರೆ.

    ದೆಹಲಿಯಲ್ಲಿ ನಾಳೆಯಿಂದ ಮನೆಗೆಲಸದವರು ಕೆಲಸಕ್ಕೆ ಹೋಗಬಹುದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts