More

    ಭಾರತ-ಜಪಾನ್ ಜಂಟಿ ಸಮರಾಭ್ಯಾಸ; ಭಯೋತ್ಪಾದನೆ ನಿಗ್ರಹ ಕುರಿತು ಅಣಕು ಕಾರ್ಯಾಚರಣೆ

    ಬೆಳಗಾವಿ: ಇಲ್ಲಿನ ಮರಾಠಾ ಲಘು ಪದಾತಿದಳ (ಎಂಎಲ್‌ಐಆರ್‌ಸಿ) ಇದರ ಸೇನಾ ತರಬೇತಿ ಕೇಂದ್ರಗಳಲ್ಲಿ ಮಂಗಳವಾರ ಭಾರತ- ಜಪಾನ ಜಂಟಿ ಸಮರಾಭ್ಯಾಸದಲ್ಲಿ ಭಯೋತ್ಪಾದನೆ ನಿಗ್ರಹ ಕುರಿತು ಅಣಕು ಕಾರ್ಯಾಚರಣೆ ನಡೆಯಿತು.

    ಆರಂಭದಲ್ಲಿ ಎಂಎಲ್​​ಐಆರ್​​ಸಿಯಲ್ಲಿ ಎರಡು ದೇಶಗಳ ಸೈನಿಕರಿಗೆ ಭಯೋತ್ಪಾದಕರ ವಿರುದ್ಧ ಹೇಗೆ ಕಾರ್ಯಾಚರಣೆ ನಡೆಸಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು. ಬಳಿಕ ಅಲ್ಲಿಂದ ಇಂಡೋ-ಟಿಬೇಟಿಯನ್ ಗಡಿ ಭದ್ರತಾ ಪಡೆಯ ತರಬೇತಿ ಕೇಂದ್ರ ಆವರಣದಲ್ಲಿ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಭಾರತ- ಜಪಾನ ಯೋಧರು ಉಗ್ರರನ್ನು ಸದೆಬಡಿಯುವ ಅಣಕು ಕಾರ್ಯಾಚರಣೆ ನಡೆಸಿದರು.

    ಎಂಎಲ್‌ಐಆರ್‌ಸಿ15 ‌ಮರಾಠಾ ಲೈಫ್ ಇನ್​ಫೆಂಟ್ರಿ ಮತ್ತು ಜಪಾನಿನ 30ನೇ ಇನ್​ಫೆಂಟ್ರಿ ರಿಜಿಮೆಂಟಲ್ ಜಂಟಿಯಾಗಿ 2022ರ ಫೆ.27ರಿಂದ ಮಾ.10ರವರೆಗೆ ಭಾರತ ಮತ್ತು ಜಪಾನ್‌ ನಡುವಿನ ಜಂಟಿ ಸಮರಾಭ್ಯಾಸ ‘ಧರ್ಮ ಗಾರ್ಡಿಯನ್‌–2021ರ 3ನೇ ಆವೃತ್ತಿ ನಡೆಸುತ್ತಿದೆ. ಇದರಲ್ಲಿ ಜಪಾನ್​ನ 40 ಸೈನಿಕರು, ಭಾರತದ 40 ಸೈನಿಕರು ಜಂಟಿಯಾಗಿ ಸಮರಾಭ್ಯಾಸ ನಡೆಸಿದರು.

    ಕಾರ್ಯಾಚರಣೆ ವೇಳೆ ಎಚ್ಚರ 

    ಯಾವುದೇ ಸಂದರ್ಭದಲ್ಲಿ ಉಗ್ರರು ಗ್ರಾಮಸ್ಥರ ಮೇಲೆ ದಾಳಿ ಮಾಡಿದರೆ ಅಥವಾ ಗ್ರಾಮಗಳನ್ನುಅಟ್ಯಾಕ್​ ಮಾಡಿದ ವೇಳೆ ತಕ್ಷಣವೇ ಅವರ ವಿರುದ್ಧ ಕಾರ್ಯಾಚರಣೆ ನಡೆಸುವ ಮೊದಲು, ಆ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ, ನದಿ, ಹಳ್ಳ, ರೈಲ್ವೆ ಮಾರ್ಗಗಳನ್ನು ಬಂದ್ ಮಾಡಬೇಕು. ತದನಂತರ ಉಗ್ರರು ಆ ಸ್ಥಳ ಬಿಟ್ಟು ಬೇರೆ ಕಡೆ ಹೋಗದಂತೆ ಎಚ್ಚರ ವಹಿಸಬೇಕು.

    ಬಳಿಕ ಸೈನಿಕರು ತಮ್ಮ ಭದ್ರತೆ ಖಚಿತ ಪಡಿಸಿಕೊಂಡು ಉಗ್ರರ ಮೇಲೆ ದಾಳಿ ನಡೆಸಬೇಕು. ಈ ವೇಳೆ ಆತುರದ ದಾಳಿ ನಡೆಸಿದರೆ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಜಿಒಸಿ 36 ರಾಪಿಡ್​ನ ಮೇಜರ ಜನರಲ್ ಭವನೇಶ್ ಕುಮಾರ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದರು. ಜಪಾನ ಮಿಲಟರಿ ಕರ್ನಲ್​ ಲಾಂಡೋ ಮತ್ತಿತರ ಅಧಿಕಾರಿಗಳು ಇದ್ದರು.

    ಇಂದು ಹೀಗೂ ಆಚರಣೆ ಆಗುತ್ತಿದೆ ಒಂದು ದಿನ!; ಅದೇನದು? ಇಲ್ಲಿದೆ ಮಾಹಿತಿ..

    ಮನಸ್ಸು ಬಿಚ್ಚಿ ಮಾತಾಡಿ: ವಿಶೇಷ ಅಭಿಯಾನದೊಂದಿಗೆ ಮಹಿಳಾ ದಿನ ಆಚರಿಸಿದ ‘ಕೂ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts